ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಮಾಲ್ ವೊಂದರಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಗೋಪಾಲಪುರದ ಲುಲು ಮಾಲ್‌ನ ಎರಡನೇ ಮಹಡಿಯಲ್ಲಿರುವ ಫಂಚುರಾ ಗೇಮ್ ಝೋನ್ ನಲ್ಲಿ ನಿಂತಿದ್ದ ಯುವತಿಗೆ ಡಿಕ್ಕಿ ಹೊಡೆದು, ಅನುಚಿತವಾಗಿ ವರ್ತಿಸಿದ್ದ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Physical Abuse in Mall; ಬೆಂಗಳೂರು ಮಾಲ್‌ನಲ್ಲಿ ಯುವತಿಗೆ ಡಿಕ್ಕಿ ಹೊಡೆದು ಅಶ್ಲೀಲವಾಗಿ ವರ್ತಿಸಿದ ವ್ಯಕ್ತಿ; ವಿಡಿಯೋ ವೈರಲ್
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಾಪಿಂಗ್ ಮಾಲ್'ನ ಕೆಕೆ ಶೆರೀಫ್ ಅವರು ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದರು.
ಮಾಲ್ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದೇವೆ. ವ್ಯಕ್ತಿಯ ಚಿತ್ರ ನಮ್ಮ ಬಳಿ ಇದೆ. ಮಾಲ್'ಗೆ ಬಂದಿರುವ ವ್ಯಕ್ತಿ ಶಾಪಿಂಗ್ ಮಾಡಿಲ್ಲ. ಆ ಉದ್ದೇಶಕ್ಕಾಗಿ ಮಾಲ್'ಗೆ ಬಂದಂತಿರಲಿಲ್ಲ. ಮಾಲ್ ನಲ್ಲಿದ್ದ ಆತನ ಚಲನವಲನಗಳನ್ನು ಗಮನಿಸಲಾಗಿದೆ. ಇದೀಗ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸಿಬ್ಬಂದಿಗಳೊಂದಿಗೂ ಮಾತನಾಡುತ್ತಿದ್ದೇನೆ. ಆರೋಪಿ ಅಪರಾಧ ಹಿನ್ನೆಲೆಯುಳ್ಳವನಾಗಿರಬಹುದು ಎಂಬ ಅನುಮಾನಗಳಿವೆ ಎಂದು ಪ್ರಕರಣದ ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.