ರಾಜ್ಯ

ವಿವಾದದ ನಡುವೆ 'ಆತ್ಮಚರಿತ್ರೆ' ಪ್ರಕಟಣೆಯಿಂದ ಹಿಂದೆ ಸರಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್

Nagaraja AB

ಬೆಂಗಳೂರು:  ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ತಮ್ಮ ಮುಂಬರುವ ಆತ್ಮಚರಿತ್ರೆಯ ಪ್ರಕಟಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಶನಿವಾರ ಹೇಳಿದ್ದಾರೆ. ಪುಸ್ತಕದಲ್ಲಿ ಇಸ್ರೋ ಹಿಂದಿನ ಮುಖ್ಯಸ್ಥ ಕೆ ಶಿವನ್ ಅವರ ಬಗ್ಗೆಗಿನ ಕೆಲವು ಟೀಕೆ ಟಿಪ್ಪಣಿಗಳು ವಿವಾದಕ್ಕೆ ಕಾರಣವಾಗಿವೆ.

ವಿವಾದದ ಹಿನ್ನೆಲೆಯಲ್ಲಿ ಆತ್ಮಚರಿತ್ರೆ ‘ನಿಲವು ಕುಡಿಚ ಸಿಂಹಂಗಲ್’ (ಅನುವಾದ ಚಂದ್ರನ ಬೆಳಕನ್ನು ಕುಡಿದ ಸಿಂಹಗಳು) ಪುಸ್ತಕದ ಪ್ರಕಟಣೆಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಅವರು ಖಚಿತಪಡಿಸಿದ್ದಾರೆ. 

ಇದಕ್ಕೂ ಮುನ್ನಾ ಶಿವನ್ ಕುರಿತ ಕೆಲವು ಟೀಕೆಗಳ ಕುರಿತು ಪಿಟಿಐ ಜೊತೆ ಮಾತನಾಡಿದ ಅವರು, ಸಂಸ್ಥೆಯಲ್ಲಿ ಉನ್ನತ ಸ್ಥಾನವನ್ನು ತಲುಪಲು ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಪ್ರಯಾಣದ ಸಮಯದಲ್ಲಿ ಕೆಲವು ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. "ಹೆಚ್ಚಿನ ವ್ಯಕ್ತಿಗಳು  ಆ ಮಹತ್ವದ ಹುದ್ದೆಗೆ ಅರ್ಹರಾಗಿರಬಹುದು. ನಾನು ಆ ನಿರ್ದಿಷ್ಟ ಅಂಶವನ್ನು ಹೊರತರಲು ಪ್ರಯತ್ನಿಸಿದೆ. ಈ ವಿಷಯದಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಅವರು ವಿವರಿಸಿದರು.

ಚಂದ್ರಯಾನ-2 ಮಿಷನ್ ವೈಫಲ್ಯದ ಘೋಷಣೆಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆಯನ್ನು ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವುದು ಅವರು ಒಪ್ಪಿಕೊಂಡಿದ್ದಾರೆ. ಅವರ ಆತ್ಮಕಥೆಯು ಜೀವನದಲ್ಲಿ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸುವ ಮೂಲಕ ಸಾಧಿಸಲು ಬಯಸುವ ಜನರನ್ನು ಪ್ರೇರೇಪಿಸುವ ಪ್ರಯತ್ನವಾಗಿದೆ ಎಂದು ಅವರು ಪುನರುಚ್ಚರಿಸಿದ್ದು, ಯಾರನ್ನೂ ಟೀಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

SCROLL FOR NEXT