ರಾಜ್ಯ

ಸದ್ಯಕ್ಕೆ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾಪವಿಲ್ಲ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Shilpa D

ಬೆಂಗಳೂರು: ಸದ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ  ಸರ್ಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ  ರಾಮಲಿಂಗಾ ರೆಡ್ಡಿ, ಟಿಕೆಟ್ ದರ ಏರಿಕೆ ಕುರಿತು ನಿರ್ಧರಿಸಲು ನಿಯಂತ್ರಣ ಸಮಿತಿ ರಚಿಸುವಂತೆ ರಾಜ್ಯ ಬಸ್ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಬಿಎಂಟಿಸಿಗೆ ರಾಜ್ಯ ಹಣಕಾಸು ಇಲಾಖೆ ಇತ್ತೀಚೆಗೆ  ಪ್ರಸ್ತಾವನೆ ಸಲ್ಲಿಸಿದ್ದವು, ಆದರೆ ಇನ್ನೂ ಸಮಿತಿ ರಚಿಸಲಾಗಿಲ್ಲ ಎಂದು  ರೆಡ್ಡಿ ಹೇಳಿದ್ದಾರೆ.

ಹಿಂದಿನ ಸರ್ಕಾರವು 2022 ರಲ್ಲಿ ಮಾಜಿ ಅಧಿಕಾರಿ ಎಂಆರ್ ಶ್ರೀನಿವಾಸ್ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದ ಏಕವ್ಯಕ್ತಿ ಸಮಿತಿಯು ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಪುನರ್ರಚಿಸಲು ಮತ್ತು ಪುನರುಜ್ಜೀವನಗೊಳಿಸಲು ಕ್ರಮಗಳನ್ನು ಶಿಫಾರಸು ಮಾಡಿದೆ. ಇತರ ಪ್ರಮುಖ ಶಿಫಾರಸುಗಳ ಜೊತೆಗೆ, ಏಕವ್ಯಕ್ತಿ ಸಮಿತಿಯು ಸರ್ಕಾರಿ ಬಸ್‌ಗಳ ಟಿಕೆಟ್ ದರವನ್ನು ಪರಿಷ್ಕರಿಸಲು ಸಾರ್ವಜನಿಕ ಸಾರಿಗೆ ದರ ಸಮಿತಿಯನ್ನು ರೂಪಿಸಲು ಒತ್ತಾಯಿಸಿತ್ತು. ಇತ್ತೀಚೆಗಷ್ಟೇ ರಾಜ್ಯ ಹಣಕಾಸು ಇಲಾಖೆ ಕೂಡ ಅದನ್ನೇ  ಪ್ರಸ್ತಾಪಿಸಿದೆ.

ನಿಯಂತ್ರಣ ಸಮಿತಿಯು ಸ್ಥಾಪನೆಯಾದ ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ರೀತಿಯೇ (ಕೆಇಆರ್‌ಸಿ) ಕಾರ್ಯನಿರ್ವಹಿಸುತ್ತದೆ ಎಂದು ರೆಡ್ಡಿ ವಿವರಿಸಿದರು, ಕೆಇಆರ್‌ಸಿ ಎಸ್ಕಾಮ್‌ಗಳ ವರದಿಗಳನ್ನು ವಿಶ್ಲೇಷಿಸಿದ ನಂತರ ವಿದ್ಯುತ್ ದರ ಏರಿಕೆಗೆ ಕರೆ ನೀಡುತ್ತದೆ ಎಂದರು.

ಡೀಸೆಲ್ ಬೆಲೆ, ವಾಹನಗಳ ಬಿಡಿ ಭಾಗಗಳು, ಉದ್ಯೋಗಿಗಳ ಸಂಬಳ ಮತ್ತು ಕಾರ್ಯಾಚರಣೆಯ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ, ನಾವು ಟಿಕೆಟ್ ದರವನ್ನು ಪರಿಷ್ಕರಿಸಲಿಲ್ಲ. ನಿಯಂತ್ರಣ ಸಮಿತಿಯನ್ನು ಸ್ಥಾಪಿಸಿದ ನಂತರ, ಅದು ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ಟಿಕೆಟ್ ದರ ಪರಿಷ್ಕರಣೆ ಶಿಫಾರಸು ಮಾಡುತ್ತದೆ. ಆದರೆ, ರಾಜ್ಯ ಸರ್ಕಾರವು ತಕ್ಷಣವೇ ಟಿಕೆಟ್ ದರವನ್ನು ಹೆಚ್ಚಿಸುವ ಸಾಧ್ಯತೆಯಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

SCROLL FOR NEXT