ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಹೆರಾಯಿನ್ ಕಳ್ಳಸಾಗಣೆ, ಜಿಂಬಾಬ್ವೆ ಪ್ರಜೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ!

ಹೆರಾಯಿನ್ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಿಂಬಾಬ್ವೆ ಪ್ರಜೆ ಮಸುಂಬಾ ತಫದ್ಜ್ವಾಗೆ (35) 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಿದೆ. ಎನ್ ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿ ರೂ. 1 ಲಕ್ಷ ದಂಡ ಪಾವತಿಸುವಂತೆ ಆರೋಪಿಗೆ ಆದೇಶಿಸಿದೆ. 

ಬೆಂಗಳೂರು: ಹೆರಾಯಿನ್ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಿಂಬಾಬ್ವೆ ಪ್ರಜೆ ಮಸುಂಬಾ ತಫದ್ಜ್ವಾಗೆ (35) 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಿದೆ. ಎನ್ ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿ ರೂ. 1 ಲಕ್ಷ ದಂಡ ಪಾವತಿಸುವಂತೆ ಆರೋಪಿಗೆ ಆದೇಶಿಸಿದೆ. 

ಈ ತೀರ್ಪು ಪ್ರಕಟಿಸಿದ ಎನ್‌ಡಿಪಿಎಸ್‌ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಬಿ ಎಸ್‌ ಜಯಶ್ರೀ ಅವರು, ಪ್ರಸ್ತುತ ದಿನಗಳಲ್ಲಿ ಮಾದಕ ದ್ರವ್ಯ ಸೇವನೆಯು ಸಾಮಾಜಿಕ ಪಿಡುಗಾಗಿದ್ದು, ಅದು ದೈತ್ಯಾಕಾರದ ಹಂತ ತಲುಪಿದೆ ಮತ್ತು ಕುಟುಂಬಗಳನ್ನು ಛಿದ್ರಗೊಳಿಸುತ್ತಿದೆ. ಕಾನೂನುಬಾಹಿರ ರೀತಿಯಲ್ಲಿ ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆಯು ನಮ್ಮ ಸಮಾಜದ ಮೇಲೆ ಅಗಾಧವಾಗಿ ಪರಿಣಾಮ ಬೀರುತ್ತಿದೆ. ಮಾದಕ ವ್ಯಸನವು ನ್ಯಾಯೋಚಿತ ಮತ್ತು ಅನ್ಯಾಯದ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ ಮತ್ತು ಅದರ ಪ್ರಭಾವಕ್ಕೆ ಒಳಗಾದವರು ಘೋರ ಅಪರಾಧ ಮಾಡುತ್ತಿದ್ದಾರೆ ಎಂದು ಹೇಳಿದರು. 

ಕಂದಾಯ ಗುಪ್ತಚರ ನಿರ್ದೇಶನಾಲಯ, ಬೆಂಗಳೂರು ವಲಯ ಘಟಕದ ಗುಪ್ತಚರ ಅಧಿಕಾರಿ ಪ್ರಕಾರ, ಆರೋಪಿ ಮುಸುಂಬಾ ತಫದ್ಜ್ವಾ ಅವರು ಜೂನ್ 30, 2021 ರಂದು ದೋಹಾದಿಂದ ಬೆಂಗಳೂರಿಗೆ ಬಂದಾಗ ಭಾರತಕ್ಕೆ ಭಾರೀ ಪ್ರಮಾಣದ  8,240 ಗ್ರಾಂ ಹೆರಾಯಿನ್ ಕಳ್ಳಸಾಗಣೆಯಲ್ಲಿ  ಸಿಕ್ಕಿಬಿದ್ದಿದ್ದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಿದಾಗ, ಬೆಂಗಳೂರಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿರುವುದಾಗಿ ಹೇಳಿದ್ದರು. ನಂತರ ತಪಾಸಣೆ ವೇಳೆಯಲ್ಲಿ ಅವರ ಲಗೇಜಿನ ತೂಕವು ಸಾಮಾನ್ಯ ತೂಕವನ್ನು ಮೀರಿ ಹೆಚ್ಚಿನ ಭಾರ ಕಂಡುಬಂದಿತ್ತು. ನಂತರ ಬ್ಯಾಗ್ ನ್ನು ಪರಿಶೀಲನೆಗೆ ಒಳಪಡಿಸಿದಾಗ ಹೆರಾಯಿನ್ ಪತ್ತೆಯಾಗಿತ್ತು. 

ನಂತರ ವಿಚಾರಣೆ ನಡೆಸಿದಾಗ, ಲಗೇಜಿನಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟಿದ್ದ  ಜಿಂಬಾಬ್ವೆಯಲ್ಲಿರುವ ತನ್ನ ಸ್ನೇಹಿತೆ ಕ್ಯಾರೋಲಿನ್, ಭಾರತ ತಲುಪಿದಾಗ ಯಾರಾದರೂ ಸಂಪರ್ಕಿಸಿದರೆ ಅದನ್ನು ಅವರಿಗೆ ಕೊಡುವಂತೆ ಹೇಳಿದ್ದಾಗಿ ಆರೋಪಿ ನ್ಯಾಯಾಲಯಕ್ಕೆ ತಿಳಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT