ರಾಜ್ಯ

ಜಯನಗರ ಬೀದಿಬದಿ ಅಂಗಡಿಗಳ ತೆರವು: ಬಿಬಿಎಂಪಿ ನಿರ್ಧಾರಕ್ಕೆ ಡಿಸಿಎಂ ಡಿಕೆ.ಶಿವಕುಮಾರ್ ಬೆಂಬಲ

Manjula VN

ಬೆಂಗಳೂರು: ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಬೀದಿಬದಿ ವ್ಯಾಪಾರಿಗಳ ತೆರವು ಮಾಡಿದ್ದ ಬಿಬಿಎಂಪಿಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬೆಂಬಲ ಸೂಚಿಸಿದ್ದಾರೆ.

ಬಿಬಿಎಂಪಿ ಕ್ರಮದ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳಲ್ಲಿ ತಮ್ಮ ಜೀವನೋಪಾಯವನ್ನು ನಡೆಸಬಹುದು. ಆದರೆ, ಬಿಬಿಎಂಪಿ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಅಂಗಡಿಗಳನ್ನಷ್ಟೇ ತೆರವುಗೊಳಿಸಿದ್ದಾರೆಂದು ಹೇಳಿದರು.

ಜಯನಗರ 4ನೇ ಬ್ಲಾಕ್‌ನಲ್ಲಿ ಬೀದಿಬದಿ ವ್ಯಾಪಾರಿಗಳು ರಸ್ತೆಗಳನ್ನು ಯಾವ ರೀತಿಯಲ್ಲಿ ಆಕ್ರಮಿಸಿಕೊಂಡಿದ್ದಾರೆಂಬುದ ವಿಡಿಯೋವನ್ನು ಬಿಬಿಎಂಪಿ ಆಯುಕ್ತರು ನನಗೆ ತೋರಿಸಿದ್ದಾರೆ. ಹೀಗಾಗಿಯೇ ಅಂಗಡಿಗಳ ತೆರವಿಗೆ ಒಪ್ಪಿಗೆ ನೀಡಲಾಗಿತ್ತು. ಪರಿಹಾರ ಕಂಡುಕೊಳ್ಳಲು ಬೀದಿ ಬದಿ ವ್ಯಾಪಾರಿಗಳೊಂದಿಗೆ ಸರ್ಕಾರ ಸಭೆ ಕರೆಯಲಿದೆ ಎಂದು ತಿಳಿಸಿದರು.

SCROLL FOR NEXT