ಸಂಗ್ರಹ ಚಿತ್ರ 
ರಾಜ್ಯ

16ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು: ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ, ತನಿಖೆ ಆರಂಭ

16ನೇ ಮಹಡಿಯಿಂದ ಬಿದ್ದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿ (21)ಯೊಬ್ಬ ಸಾವನ್ನಪ್ಪಿರುವ ಘಟನೆಯೊಂದು ಶುಕ್ರವಾರ ನಡೆದಿದೆ.

ಬೆಂಗಳೂರು: 16ನೇ ಮಹಡಿಯಿಂದ ಬಿದ್ದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿ (21)ಯೊಬ್ಬ ಸಾವನ್ನಪ್ಪಿರುವ ಘಟನೆಯೊಂದು ಶುಕ್ರವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಹೈದರಾಬಾದ್ ಮೂಲದ ಎಂ ಅಶ್ವಿನ್ ನಂಬಿಯಾರ್ ಎಂದು ಗುರ್ತಿಸಲಾಗಿದೆ. ಶುಕ್ರವಾರ ಸರ್ಜಾಪುರದಲ್ಲಿರುವ ವಿಶ್ವವಿದ್ಯಾನಿಲಯದ ಹಾಸ್ಟೆಲ್ ನಲ್ಲಿ ಶುಕ್ರವಾರ ಬೆಳಿಗ್ಗೆ 7.30 ರಿಂದ 8 ರ ಸುಮಾರಿಗೆ ಘಟನೆ ನಡೆದಿದೆ.

ವಿದ್ಯಾರ್ಥಿ ಸಾವನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಕಾರಣ ಇನ್ನೂ ತಿಳಿದುಬಂದಿಲ್ಲ, ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ 10.45 ರ ಸುಮಾರಿಗೆ ಮಾಹಿತಿ ಬಂದಿತ್ತು. ಆತ್ಮಹತ್ಯೆಯಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆಯೇ ಅಥವಾ ಸಾವಿನ ಹಿಂದೆ ಬೇರೆಯದ್ದೇ ಕಾರಣವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ಮೃತದೇಹವನ್ನು ಅತ್ತಿಬೆಲೆಯ ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೃತ ಅಶ್ವಿನ್ ಅವರ ತಂದೆ ಮನೋಹರ್ ನಂಬಿಯಾರ್ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದಾರೆ.

ಬೆಳಿಗ್ಗೆ 10.30ರ ಸುಮಾರಿಗೆ ವಿಶ್ವವಿದ್ಯಾನಿಲಯದಿಂದ ದೂರವಾಣಿ ಕರೆ ಬಂದಿತ್ತು. ಸಾವಿಗೆ ಕಾರಣ ನಮಗೆ ತಿಳಿದಿಲ್ಲ. ನಾವೀಗ ಹೈದರಾಬಾದ್‌ನಿಂದ ಹೊರಗಿದ್ದೇವೆ. ಸಂಜೆ 7 ಗಂಟೆಗೆ ಬೆಂಗಳೂರಿಗೆ ಬಂದೆವು. ಅಶ್ವಿನ್ ನನ್ನ ಇಬ್ಬರು ಮಕ್ಕಳಲ್ಲಿ ಒಬ್ಬನಾಗಿದ್ದಾನೆ, ನನ್ನ ಮಗ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿಲ್ಲ. ಘಟನೆ ಕುರಿತು ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಮತ್ತು ಪೊಲೀಸರೊಂದಿಗೆ ಮಾತುಕತೆ ನಡೆಸಿದ ಬಳಿಕವೇ ಕಾರಣ ತಿಳಿದುಬರಲಿದೆ. ಮೃತದೇಹ ಶವಾಗಾರದಲ್ಲಿದೆ ಎಂದು ನಮಗೆ ತಿಳಿಸಲಾಗಿದೆ ಎಂದು ಮನೋಹರ್ ಅವರು ಹೇಳಿದ್ದಾರೆ.

ಇನ್ನು ಘಟನೆ ಸಂಬಂಧ ಅಶ್ವಿನ್ ಅವರ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದು, ಆಘಾತ ಹಾಗೂ ದುಃಖ ವ್ಯಕ್ತಪಡಿಸುತ್ತಿದ್ದಾರೆ.

ವಿಶ್ವವಿದ್ಯಾನಿಲಯ ಕೂಡ ಹೇಳಿಕ ಬಿಡುಗಡೆ ಮಾಡಿದ್ದು, ಸಂತಾಪ ಸೂಚಿಸಿದೆ. “ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯ ಸಾವು ನಿಜಕ್ಕೂ ದುರದೃಷ್ಟಕರ ಸಂಗತಿ. ಘಟನೆ ಕರಿತು ಆಘಾತಕ್ಕೊಳಗಾಗಿದ್ದೇವೆ ಮತ್ತು ತೀವ್ರ ದುಃಖಿತರಾಗಿದ್ದೇವೆ. ವಿದ್ಯಾರ್ಥಿಯ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ. ಈ ದುಃಖದ ಸಮಯದಲ್ಲಿ ಅವರಿಗೆ ಬೆಂಬಲ ನೀಡುತ್ತಿದ್ದೇವ. ಈ ಸಮಯದಲ್ಲಿ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತೇವೆಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

DMK-AIADMK ಸೇರಿ ಸರ್ಕಾರ ರಚಿಸಿದರೆ 107 TVK ಶಾಸಕರು ಸಾಮೂಹಿಕ ರಾಜೀನಾಮೆ: ವಿಜಯ್ ಬೆದರಿಕೆ

IPL 2026: ಸತತ 6 ಸೋಲುಗಳ ನಂತರ RCB ಮಣಿಸಿ ಗೆದ್ದ LSG, 3ನೇ ಸ್ಥಾನಕ್ಕೆ ಕುಸಿದ ಆರ್‌ಸಿಬಿ!

ನನಗೆ ನಂಬರ್ ಬೇಕು, ಕೋರಿಕೆಯಲ್ಲ: ಸಂಖ್ಯಾಬಲ ತೋರಿಸುವಂತೆ ವಿಜಯ್ ಗೆ ತಮಿಳುನಾಡು ರಾಜ್ಯಪಾಲ ತಾಕೀತು!

ರಾಜಿನಾಮೆ ಕೊಡದ ದೀದಿಗೆ ಶಾಕ್; ವೀಟೋ ಅಧಿಕಾರ ಬಳಸಿ ಮಂತ್ರಿಮಂಡಲವನ್ನೇ ವಿಸರ್ಜಿಸಿದ ರಾಜ್ಯಪಾಲ ಆರ್‌.ಎನ್ ರವಿ!

West Bengal: ಸುವೇಂದು ಅಧಿಕಾರಿ ಪಿಎ ಹತ್ಯೆ; ಕೊಲೆಗೆ ಬಳಸಲಾಗಿದ್ದ ಬೈಕ್ ವಶಕ್ಕೆ, ಪೊಲೀಸ್ ತನಿಖೆ ಚುರುಕು

SCROLL FOR NEXT