ಬೆಂಗಳೂರು: ನಗರದಾದ್ಯಂತ ಇರುವ ಐನೂರಕ್ಕೂ ಹೆಚ್ಚು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ (ಪಿಐಎಸ್) ಒದಗಿಸುವ ಸ್ವಯಂಚಾಲಿತ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಆಯ್ದ ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಹಾಕಲಾಗಿದೆ . ಇನ್ನೂ ಕೆಲವು ಕಡೆ ಕೆಲಸ ನಡೆಯುತ್ತಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಂಚಾರ ವಿಭಾಗದ ಮುಖ್ಯ ಮ್ಯಾನೇಜರ್, “ಬಸ್ ಶೆಲ್ಟರ್‌ಗಳಲ್ಲಿ ಡಿಜಿಟಲ್ ಬೋರ್ಡ್ ಅಳವಡಿಸುವ ಯೋಜನೆ ದೀರ್ಘಕಾಲದಿಂದ ಬಾಕಿ ಉಳಿದಿದೆ. ಇದು ನಿರ್ಭಯ ಯೋಜನೆಯ ಭಾಗವಾಗಿದೆ, ಡಿಜಿಟಲ್ ಬೋರ್ಡ್ ಅಳವಡಿಸಿರುವ ಕಡೆಗಳಲ್ಲಿ ಬಿಎಂಟಿಸಿ ಬಸ್ ಮಾರ್ಗಗಳು, ನೋಂದಣಿ ಸಂಖ್ಯೆಗಳು, ಬಸ್‌ನ ಗಮ್ಯಸ್ಥಾನ ಮತ್ತು ಆಗಮನದ ಅಂದಾಜು ಸಮಯದ ಬಗ್ಗೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ವಿವರ ಒದಗಿಸಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್‌ಫೋನ್ ಹೊಂದಿರುವವರು ಮತ್ತು ನಮ್ಮ ಬಿಎಂಟಿಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರಲ್ಲಿ ಈ ಎಲ್ಲಾ ವಿವರಗಳಳನ್ನು ಫೋನ್‌ನಲ್ಲಿಯೇ ಪಡೆಯಬಹುದಾದರೂ, ತಮ್ಮ ಪ್ರಯಾಣಿಕರಲ್ಲಿ ಹೆಚ್ಚಿನವರು ಭೌತಿಕ ಬೋರ್ಡ್‌ಗಳನ್ನು ನೋಡಲು ಬಯಸುತ್ತಾರೆ, ಇದರಿಂದಾಗಿ ತಮ್ಮ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಟಲ್ ಬೋರ್ಡ್‌ಗಳು ಬಸ್‌ಗಳಲ್ಲಿ ನೈಜ-ಸಮಯದ ಡೇಟಾವನ್ನು ಒದಗಿಸುತ್ತವೆ. ಸುಮಾರು 40 ಬೋರ್ಡ್‌ಗಳಲ್ಲಿ ಡಿಜಿಟಲ್ ಬೋರ್ಡ್ ಅಳವಡಿಸುವ ಕೆಲಸ ನಡೆಯುತ್ತಿದೆ. ವಿದ್ಯುತ್ ಕಾಮಗಾರಿಗಳು ನಡೆಯುತ್ತಿದ್ದು, ಈ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ರೆಡ್ಡಿ ಮಾಹಿತಿ ನೀಡಿದರು.