ರಾಜ್ಯ

ಕೋಲಾರ: 50 ಸಾವಿರ ರೂ ಮೌಲ್ಯದ ಗಾಂಜಾ ವಶ, ಮೂವರ ಬಂಧನ

Srinivasamurthy VN

ಕೋಲಾರ: ಕೋಲಾರದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪೌಲ್ಟ್ರಿ ಫಾರಂ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಒರಿಸ್ಸಾ ಮೂಲದ ಮೂವರು ಕಾರ್ಮಿಕರನ್ನು ಬಂಧಿಸಿದ್ದು, ಸುಮಾರು 50 ಸಾವಿರ ರೂ ಮೌಲ್ಯದ ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮತ್ತು ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸಲು ಮಾಡಲು ಪಣತೊಟ್ಟಿರುವ ಸಿಇಎನ್ ಪೊಲೀಸರು ಪೌಲ್ಟ್ರಿ ಫಾರಂ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಒರಿಸ್ಸಾ ಮೂಲದ ಮೂವರು ಕಾರ್ಮಿಕರನ್ನು ಬಂಧಿಸಿದ್ದಾರೆ. ಮುಳಬಾಗಿಲು ತಾಲೂಕಿನ ಗಡ್ಡಂ ಚಿನ್ನೇಪಲ್ಲಿ ಗ್ರಾಮದ ಸಮೀಪ ಬಾಲಾಜಿ ಎಂಬುವರಿಗೆ ಸೇರಿದ ಜಮೀನನಲ್ಲಿರುವ ಸುಗುಣ ಪೌಲ್ಟ್ರಿ ಫಾರಂನ ಆವರಣದಲ್ಲಿ ೫೦ ಸಾವಿರ ಬೆಲೆಬಾಳುವ ಗಾಂಜಾ ಗಿಡಗಳು ಪತ್ತೆ ಮಾಡಿದ್ದಾರೆ.

ಎಸ್ಪಿ ನಾರಾಯಣ್ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಇನ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು ಗಾಂಜಾ ಪೆಡ್ಲರ್‌ಗಳ ಬೆನ್ನತಿ ನೆರೆ ರಾಜ್ಯಕ್ಕೆ ತೆರಳಿದ ಕೋಲಾರದ ಸಿಇಎನ್ ಪೊಲೀಸರು ಗಾಂಜಾ ಬೆಳೆದ ಒರಿಸ್ಸ ಮೂಲದ ಮೂವರ ಬಂಧನ ನಂತರ ಪ್ರಕರಣ ಜಾಡು ಹಿಡಿಯಲು ಒರಿಸ್ಸಾ ಹಾಗೂ ಆಂಧ್ರದ ವಿಶಾಖಪಟ್ಟಣಂ ಸೇರಿದಂತೆ ಹಲವು ಕಡೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 

SCROLL FOR NEXT