ರಾಜ್ಯ

ರೈಲುಗಳ ಒಳಗೆ ಧೂಮಪಾನ: 285 ಪ್ರಕರಣ ದಾಖಲು

Manjula VN

ಬೆಂಗಳೂರು: ರೈಲು ಅಥವಾ ರೈಲ್ವೇ ಆವರಣಗಳಲ್ಲಿ ಧೂಮಪಾನ ಮಾಡಿದ ಹಿನ್ನೆಲೆಯಲ್ಲಿ ರೈಲ್ವೇ ಕಾಯಿದೆಯ ಸೆಕ್ಷನ್ 167 ರ ಅಡಿಯಲ್ಲಿ 285 ಪ್ರಕರಣಗಳು ದಾಖಲಾಗವೆ ಎಂದು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಅವರು ಹೇಳಿದ್ದಾರೆ.

ಬೆಂಗಳೂರು ವಿಭಾಗದಾದ್ಯಂತ ಅಗ್ನಿ ಸುರಕ್ಷತೆ ಜಾಗೃತಿ ಅಭಿಯಾನವನ್ನು ನಡೆಸಲಾಗಿದ್ದು, ಈ ವರ್ಷದ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ರೈಲುಗಳಲ್ಲಿ ಪಟಾಕಿ ಮತ್ತು ಬೆಂಕಿ ಹೊತ್ತಿಸುವ ವಸ್ತುಗಳನ್ನು ಸಾಗಿಸುವ ವ್ಯಕ್ತಿಗಳ ವಿರುದ್ಧ ರೈಲ್ವೆ ಕಾಯ್ದೆಯಡಿ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು 30 ನಿಲ್ದಾಣಗಳಲ್ಲಿ ಅಭಿಯಾನ ನಡೆಸಲಾಗಿದ್ದು, 191 ರೈಲುಗಳಲ್ಲಿ ತಪಾಸಣೆ ನಡೆಸಲಾಗಿದೆ.3,000 ರೈಲ್ವೆ ಸಿಬ್ಬಂದಿ ಮತ್ತು 5,056 ಪ್ರಯಾಣಿಕರಿಗೆ ಸುರಕ್ಷತಾ ಕ್ರಮಗಳ ಕುರಿತು ಕೌನ್ಸೆಲಿಂಗ್ ನೀಡಲಾಗಿದೆ. 90 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಅಗ್ನಿಶಾಮಕ ಸಾಧನಗಳನ್ನು ಬಳಸುವ ಕುರಿತು ತರಬೇತಿ ನೀಡಲಾಗಿದೆ, 10000 ಕ್ಕೂ ಹೆಚ್ಚು ಮಂದಿಗೆ ಸಂದೇಶಗಳನ್ನು ರವಾನಿಸಲಾಗಿದೆ. 3,500 ಕರಪತ್ರಗಳನ್ನು ವಿತರಿಸಲಾಗಿದೆ ಮತ್ತು 11 ರೈಲು ನಿಲ್ದಾಣಗಳಲ್ಲಿ ನಾಟಕಗಳನ್ನು ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು.

SCROLL FOR NEXT