ರಾಜ್ಯ

ಮಾನವೀಯತೆ ಪಾಠ ಮಾಡಿದರೆ ಸಾಲದು, ಪಾಲಿಸಬೇಕು: ಸಿಎಂ ಸಿದ್ದರಾಮಯ್ಯಗೆ ಯತ್ನಾಳ್ ಮನವಿ

Nagaraja AB

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನವೀಯತೆಯ ಪಾಠ ಮಾಡಿದರೆ ಸಾಲದು, ಪಾಲಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಸೋಮವಾರ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಸತತ ಏಳು ಗಂಟೆಗಳ ಕಾಲ ಜನತಾದರ್ಶನ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿದರು. ಇಡೀ ದಿನ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳ ಇತ್ಯರ್ಥಕ್ಕೆ ಸಿಎಂ ಸಿದ್ದರಾಮಯ್ಯ ಅವರು 15 ದಿನ ಗಡುವು ನೀಡಿದ್ದಾರೆ.

ಈ ಜನತಾ ದರ್ಶನ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಸನಗೌಡ ಪಾಟೀಲ್,  ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಮಹಾಪ್ರಭುಗಳು, ನಿಮ್ಮ ಜನತಾ ದರ್ಶನಗಳಲ್ಲಿ ವಯಸ್ಸಾದ ಹಿರಿಯರನ್ನು ಕನಿಷ್ಠ ಕುಳಿತುಕೊಳ್ಳಲು ಹಾಗು ಅವರ ಅಹವಾಲನ್ನು ಕೇಳುವ ವ್ಯವಸ್ಥೆಯನ್ನು ಮಾಡಬೇಕು. ಹೀಗೆ ಅವರನ್ನು ನಿಲ್ಲಿಸಿ, ಅವರು ಗೋಗರೆಯುವುದನ್ನು ನೋಡಿದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗಿರುವಂತೆ ಭಾಸವಾಗುತ್ತದೆ ಎಂದು ಅವರು ಹೇಳಿದ್ದಾರೆ. 

SCROLL FOR NEXT