ರಾಜ್ಯ

ಐಟಿ ದಾಳಿ ನಂತರ ಅಂಬಿಕಾಪತಿ ಒತ್ತಡ, ಮಾನಸಿಕ ಖಿನ್ನತೆಗೊಳಗಾಗಿದ್ದರು: ಕೆಂಪಣ್ಣ

Shilpa D

ಬೆಂಗಳೂರು: ಸೋಮವಾರ ಹೃದಯಾಘಾತದಿಂದ ನಿಧನರಾದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ಸಾವಿನ ಸಂಬಂಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರತಿಕ್ರಿಯಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕೆಂಪಣ್ಣ, ಅಂಬಿಕಾಪತಿ ಅವರು ತುಂಬಾ ಮನನೊಂದಿದ್ದರು. ಅಂಬಿಕಾ ಪತಿಯ ಸಾವಿಗೆ ಕೆಲವರು ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ. ಅವರ ಸಾವಿಗೆ ಕಾರಣ ಯಾರು ಎಂಬ ಮಾಹಿತಿ ಬಿಚ್ಚಿಡದೆ ಹಾಗೇ ಹೊರಟರು ಎಂದು ಕೆಂಪಣ್ಣ ಹೇಳಿದ್ದಾರೆ. ಅಂಬಿಕಾಪತಿ ತುಂಬಾ ಒಳ್ಳೆಯ ಮನುಷ್ಯ. ಅವರಿಗೆ ಹೀಗಾಗಬಾರದಿತ್ತು ಎಂದು ಕೆಂಪಣ್ಣ ಹೇಳಿದರು.

ಜಾಮೀನಿನ ಮೇಲೆ ಬಿಡುಗಡೆಯಾದ ನಂತರ (ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ) ಅಂಬಿಕಾಪತಿ ಚಾಮರಾಜಪೇಟೆಯಲ್ಲಿರುವ ಸಂಘದ ಕಚೇರಿಗೆ ಬಂದಿದ್ದರು. ಈ ರೀತಿಯ ಆಗುತ್ತದೆಂದು ನಿರೀಕ್ಷಿಸಿರಲಿಲ್ಲ ಎಂದು ಅಳಲು ತೋಡಿಕೊಂಡರು. "ಐಟಿ ದಾಳಿಯ ನಂತರ, ಅವರು ಮತ್ತೆ ನಿರಪರಾಧಿ ಎಂದು ಹೇಳಿಕೊಂಡಿದ್ದರು ಎಂದು ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

ಅಂಬಿಕಾಪತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಶ್ರೀಲಂಕಾದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು, ಆದರೆ ಸಭೆಗಳಿಗೆ ಹಾಜರಾಗುತ್ತಿದ್ದರು. ಬಂಧನ ಮತ್ತು ಐಟಿ ದಾಳಿಗಳು ನಂತರ ಸಾಕಷ್ಟು ಮಾನಸಿಕ ಒತ್ತಡವನ್ನು ಉಂಟುಮಾಡಿದವು, ಇದರಿಂದಾಗಿ ಅವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು ಎಂದು ಅವರು ಆರೋಪಿಸಿದರು.

SCROLL FOR NEXT