ರಾಜ್ಯ

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ವಾಹನಗಳಿಗೆ ದಟ್ಟಣೆ ಶುಲ್ಕ ಶೀಘ್ರ ಜಾರಿಗೆ ತರಬೇಕು: ತಜ್ಞರ ಅಭಿಮತ

Sumana Upadhyaya

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ನಿಧಾನಗತಿಯ ವಾಹನ ಸಂಚಾರಕ್ಕೆ ಬಹುಶಃ ಬೆಂಗಳೂರಿಗೆ ಕಾಲಿಟ್ಟವರು ಅದರ ನರಕಯಾತನೆಯನ್ನು ಅನುಭವಿಸದೆ ಇರಲಿಕ್ಕಿಲ್ಲ ಎನಿಸುತ್ತದೆ. ನಿತ್ಯ ಬೆಂಗಳೂರಿನಲ್ಲಿ ಸಂಚರಿಸುವವರ ಪಾಡಂತೂ ಹೇಳತೀರದು. 

ಈ ಸಮಸ್ಯೆಗೆ ಪರಿಹಾರವಾಗಿ ವಾಹನಗಳ ಮೇಲೆ ‘ದಟ್ಟಣೆ ಶುಲ್ಕ’ ವಿಧಿಸುವ ಕಲ್ಪನೆಯನ್ನು ಮೊಬಿಲಿಟಿ ತಜ್ಞರು ಮುಂದಿಟ್ಟಿದ್ದಾರೆ. ಸಾರ್ವಜನಿಕರ ಮೇಲೆ ಹೇರುವ ಶುಲ್ಕವನ್ನು ಸಾರ್ವಜನಿಕ ಸಾರಿಗೆಯನ್ನು ಒದಗಿಸಲು ಮತ್ತು ಸುಧಾರಿಸಲು ಬಳಸಬೇಕು ಎಂದು ಸಲಹೆ ನೀಡಿದ್ದಾರೆ. 

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ, ಅದರಲ್ಲೂ ವಿಶೇಷವಾಗಿ ಕಳೆದ ವಾರದ ಹೊರ ವರ್ತುಲ ರಸ್ತೆ (ORR) ನಲ್ಲಿ ಒಂದೂವರೆ ಗಂಟೆಗಳ ಕಾಲ ಸಂಚಾರ ದಟ್ಟಣೆಯಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ದಿ ಮಾಡಿತ್ತು. ಈ ಬಗ್ಗೆ ಪ್ರಸಿದ್ಧ ಸ್ಟ್ಯಾಂಡ್‌ ಅಪ್ ಹಾಸ್ಯನಟ ಟ್ರೆವರ್ ನೋಹ್‌ ಸಾಕಷ್ಟು ಹಾಸ್ಯ ಮಾಡಿದ್ದರು. 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನ ಸಸ್ಟೈನಬಲ್ ಟ್ರಾನ್ಸ್‌ಪೋರ್ಟೇಶನ್ ಲ್ಯಾಬ್‌ನ ಸಂಚಾಲಕ ಪ್ರೊ ಆಶಿಶ್ ವರ್ಮಾ, ಕಳೆದ ವಾರ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಬೆಂಗಳೂರಿನ ಜನದಟ್ಟಣೆ, ಸಂಚಾರ ದಟ್ಟಣೆಯನ್ನು ತೋರಿಸುತ್ತದೆ. ಪ್ರಯಾಣದ ಬೇಡಿಕೆ, ಲಭ್ಯವಿರುವ ಮೂಲಸೌಕರ್ಯ ಮತ್ತು ಸೇವಾ ಪೂರೈಕೆಯ ನಡುವಿನ ವ್ಯಾಪಕ ಅಂತರ -ಏಕರೂಪದ ರಸ್ತೆ, ಅವೈಜ್ಞಾನಿಕ ಸಂಚಾರ ನಿರ್ವಹಣೆ ಮತ್ತು ಕಾರು ಮತ್ತು ದ್ವಿಚಕ್ರ ವಾಹನ ಬಳಕೆದಾರರ ಪ್ರಾಬಲ್ಯ ಇವೆಲ್ಲವೂ ಸಂಚಾರ ದಟ್ಟಣೆಗೆ ಕಾರಣವಾಗಿದೆ. 

ಈ ಬಗ್ಗೆ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನದ ‘ಮೊಬಿಲಿಟಿ ವರ್ಟಿಕಲ್’ ಅಡಿಯಲ್ಲಿ ‘ಎಜಿಲ್ & ಸಸ್ಟೈನಬಲ್ ಮೊಬಿಲಿಟಿ ಫಾರ್ ಆಲ್’ ವರದಿಯನ್ನು ಸಲ್ಲಿಸಿದ್ದಾರೆ. ದಟ್ಟಣೆಯ ಸಮಯದಲ್ಲಿ ಅಥವಾ ದಟ್ಟಣೆಯ ಪ್ರದೇಶಗಳಲ್ಲಿ ಪ್ರಯಾಣಿಸುವ ರಸ್ತೆ ಬಳಕೆದಾರರಿಗೆ ‘ದಟ್ಟಣೆ ಬೆಲೆ’ ಶಿಫಾರಸು ಮಾಡಿದ್ದಾರೆ.

“ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಮೂಲಸೌಕರ್ಯ ಮತ್ತು ಸೇವೆಗಳನ್ನು ಸುಧಾರಿಸುವುದು ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ಸಾಧಿಸಲು ಸಮಗ್ರ ಕಾರ್ಯತಂತ್ರವಾಗಿ ಮಾಡಬೇಕಾಗಿದೆ. ದಟ್ಟಣೆ ಶುಲ್ಕವು ವೈಯಕ್ತಿಕ ವಾಹನಗಳ ಬಳಕೆಯನ್ನು ನಿರುತ್ಸಾಹಗೊಳಿಸುವ ಪ್ರಮುಖ ಕಾರ್ಯತಂತ್ರವಾಗಿದೆ ಎಂದು ವರ್ಮಾ ಹೇಳುತ್ತಾರೆ.

ಸುಸ್ಥಿರ ವಿಧಾನಗಳಿಗಾಗಿ ಮೂಲಸೌಕರ್ಯ ಮತ್ತು ಸೇವೆಗಳನ್ನು ಸುಧಾರಿಸಲು ಈ ಮೊತ್ತವನ್ನು ಮತ್ತೆ ಬಳಸಬೇಕು ಎನ್ನುತ್ತಾರೆ. ಸಾರ್ವಜನಿಕ ಸಾರಿಗೆ ಮತ್ತು ವಾಕಿಂಗ್ ಮತ್ತು ಸೈಕ್ಲಿಂಗ್ ಮೂಲಸೌಕರ್ಯವನ್ನು ಸುಧಾರಿಸುವಾಗ ಶುಲ್ಕಗಳನ್ನು ಏಕಕಾಲದಲ್ಲಿ ಜಾರಿಗೊಳಿಸಬೇಕು.

ಇದು ಎಲ್ಲರಿಗೂ ಲಾಭವಾಗಿದೆ ಎನ್ನುತ್ತಾರೆ ಅರ್ಬನ್ ಮೊಬಿಲಿಟಿ ತಜ್ಞೆ ಶ್ರೇಯಾ ಗಡೇಪಲ್ಲಿ. ಹಣ ಪಾವತಿಸಲು ಸಿದ್ಧರಿರುವವರು ತಾವು ತಲುಪಬೇಕಾದ ಸ್ಥಳವನ್ನು ತಲುಪಲು ಸಂಚಾರ ಮುಕ್ತ ರಸ್ತೆಯನ್ನು ಪಡೆಯುತ್ತಾರೆ. ಟ್ರಾಫಿಕ್ ಮುಕ್ತ ರಸ್ತೆಗಳು ತ್ವರಿತ ಬಸ್ ಸೇವೆಗಳಿಗೆ ದಾರಿ ಮಾಡಿಕೊಡುತ್ತವೆ, ಇಷ್ಟವಿಲ್ಲದವರಿಗೆ ಅಥವಾ ಪಾವತಿಸಲು ಸಾಧ್ಯವಾಗದವರಿಗೆ ವಿಶ್ವಾಸಾರ್ಹ ಪರ್ಯಾಯವನ್ನು ನೀಡುತ್ತದೆ ಎನ್ನುತ್ತಾರೆ. 

ಲಂಡನ್‌ನಲ್ಲಿ, ದಟ್ಟಣೆಯ ಬೆಲೆ ವಲಯಕ್ಕೆ ಪ್ರವೇಶಿಸುವ ಕಾರುಗಳ ಸಂಖ್ಯೆಯು ಶೇಕಡಾ 33 ರಷ್ಟು ಕಡಿಮೆಯಾಗಿದೆ. ಬಸ್ ಸವಾರರು ಶೇಕಡಾ 38 ರಷ್ಟು ಹೆಚ್ಚಾಗಿದೆ. ಸಿಂಗಾಪುರ ನಗರ ರಸ್ತೆಗಳಲ್ಲಿ ಸರಾಸರಿ ಟ್ರಾಫಿಕ್ ವೇಗವನ್ನು ಗಂಟೆಗೆ 20-30 ಕಿಲೋಮೀಟರ್‌ನಲ್ಲಿ ಇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು, ಮಹಾನಗರಗಳಾದ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ - ದಟ್ಟಣೆ ಬೆಲೆಯನ್ನು ಜಾರಿಗೆ ತರಲು ಸೂಕ್ತ ಸಮಯವಾಗಿದೆ ಎನ್ನುತ್ತಾರೆ. 

ಸರ್ಕಾರದ ಮಾಜಿ ಅಧಿಕಾರಿ ಕೆ.ಜೈರಾಜ್, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳನ್ನು ಗಮನಿಸಿದರೆ ದಟ್ಟಣೆ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ. 

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಚರ್ಚೆ ನಡೆಸಬೇಕು, ತನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಇದನ್ನು ಜಾರಿಗೆ ತರಲು ನೋಡುತ್ತಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ.

SCROLL FOR NEXT