ಸಾಂದರ್ಭಿಕ ಚಿತ್ರ 
ರಾಜ್ಯ

'ತೇಜಸ್' ಲಘು ಯುದ್ಧ ವಿಮಾನವನ್ನು ಭಾರತೀಯ ವಾಯಪಡೆಗೆ ಹಸ್ತಾಂತರಿಸಿದ ಹೆಚ್ ಎಎಲ್!

ಮೊದಲ ಎರಡು ಆಸನಗಳ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್ ) ಬುಧವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತು. 

ಬೆಂಗಳೂರು: ಮೊದಲ ಎರಡು ಆಸನಗಳ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್ ) ಬುಧವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತು. 

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್, ತೇಜಸ್ ಲಘು ಯುದ್ಧ ವಿಮಾನ ಅಭಿವೃದ್ಧಿ ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗೆ ಉತ್ತೇಜನ ನೀಡುತ್ತದ. ರಕ್ಷಣಾ ಖರೀದಿಯ ನಮ್ಮ ವಿಧಾನದಲ್ಲಿ ಬದಲಾವಣೆಯನ್ನು ತಂದಿದೆ. ವಿಶ್ವ ದರ್ಜೆಯ ಫೈಟರ್ ಜೆಟ್‌ ವಿನ್ಯಾಸ, ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ಭಾರತವು ಪ್ರತಿಭೆ, ಜ್ಞಾನ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಇದು ಸಾಬೀತುಪಡಿಸಿದೆ ಎಂದರು.

ಈ ಯೋಜನೆಯು ನಿರಂತರ ಸಮರ್ಪಣೆ ಮತ್ತು ನಾವೀನ್ಯತೆಯ ಸ್ಪೂರ್ತಿದಾಯಕ ಸಾಹಸವಾಗಿದೆ. ತೇಜಸ್ ಯುದ್ಧ ವಿಮಾನದ ಆರಂಭವು ಭಾರತೀಯ ವಾಯುಪಡೆಯನ್ನು ವಿಶ್ವ ದರ್ಜೆಯ ಸ್ವದೇಶಿ ಯುದ್ಧ ವಿಮಾನದೊಂದಿಗೆ ಸಜ್ಜುಗೊಳಿಸುವ ಕನಸಿನಲ್ಲಿ ಬೇರೂರಿದೆ ಎಂದು ಭಟ್ ಹೇಳಿದರು.

ತೇಜಸ್‌ನ ಅಭಿವೃದ್ಧಿಯು ಭಾರತದಲ್ಲಿ ದೃಢವಾದ ರಕ್ಷಣಾ ಮತ್ತು ಏರೋಸ್ಪೇಸ್ ಉದ್ಯಮದ ಬೆಳವಣಿಗೆಗೆ ಉತ್ತೇಜನ ನೀಡುವುದರ ಜೊತೆಗೆ ಅಸಂಖ್ಯಾತ ಎಸ್‌ಎಂಇಗಳು, ಸಂಶೋಧನಾ ಸಂಸ್ಥೆಗಳು ಮತ್ತು ನುರಿತ ಕೆಲಸಗಾರರಿಗೆ ಅವಕಾಶಗಳನ್ನು ಸೃಷ್ಟಿಸಿದೆ. ಅವರು ಯೋಜನೆಯ ವಿವಿಧ ಅಂಶಗಳಿಗೆ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ವಾಯುಪಡೆ ಮುಖ್ಯಸ್ಥ  ವಿವೇಕ್ ರಾಮ್ ಚೌಧರಿ, ವಾಯುಪಡೆಗೆ  ತೇಜಸ್ ಯುದ್ಧ ವಿಮಾನದ  ಸೇರ್ಪಡೆ  ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದೆ. ಅಲ್ಲದೇ, ಅದರ ಕಾರ್ಯಕ್ಷಮತೆ ಹಾಗೂ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. 83 ಲಘು ಯುದ್ಧ ವಿಮಾನಗಳ ಹಸ್ತಾಂತರಕ್ಕೆ ಈಗಾಗಲೇ ಮಾತುಕತೆ ನಡೆದಿದ್ದು, ಮುಂಬರುವ  ದಿನಗಳಲ್ಲಿ 220 ಲಘು ಯುದ್ಧ ವಿಮಾನದ ಪಡೆಯನ್ನು ಹೊಂದುವ ಉದ್ದೇಶವಿದೆ ಎಂದು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಐಎಎಫ್‌ ನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಎಲ್ಲಾ ಅವಳಿ ಆಸನಗಳ ವಿಮಾನಗಳನ್ನು ತಲುಪಿಸಲು ಕಂಪನಿಯು ಬದ್ಧವಾಗಿದೆ ಎಂದು ಎಚ್‌ಎಎಲ್ ಸಿಎಂಡಿ ಸಿಬಿ ಅನಂತಕೃಷ್ಣನ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ; ಪ್ರವಾಹ, ಭೂಕುಸಿತದ ಬಗ್ಗೆ IMD ಎಚ್ಚರಿಕೆ

ಆಪರೇಷನ್ ಸಿಂಧೂರ ವೇಳೆಯ 'ಅಪವಿತ್ರ ಮೈತ್ರಿ'ಯನ್ನು ಸದ್ದಿಲ್ಲದೆ ಒಪ್ಪಿಕೊಂಡ ಮೋದಿ ಸರ್ಕಾರ! ಚೀನಾ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದ್ದೆಯೇ? ಕಾಂಗ್ರೆಸ್

ಬೆಂಗಳೂರು: ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ BMTC ಬಸ್ ಕಂಡೆಕ್ಟರ್; ನೆಟ್ಟಿಗರು ಆಕ್ರೋಶ, Video!

SCROLL FOR NEXT