ರಾಜ್ಯ

ಒಳ ಮೀಸಲಾತಿ ಭರವಸೆಯೊಂದಿಗೆ ಜಾತಿ ಗಣತಿ ವರದಿಗಾಗಿ ಕಾಯುತ್ತಿದ್ದಾರೆ ಎಂಬಿಸಿ, ಆದಿವಾಸಿಗಳು

Lingaraj Badiger

ಮೈಸೂರು: ಜಾತಿ ಗಣತಿ ವರದಿ ಎಂದೇ ಕರೆಯಲಾಗುತ್ತಿರುವ ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕೆಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯಗಳು(ಎಂಬಿಸಿ) ಮತ್ತು ಆದಿವಾಸಿಗಳು ಸಹ ಒಳ ಮೀಸಲಾತಿಯ ಭರವಸೆಯೊಂದಿಗೆ ಜಾತಿ ಗಣತಿ ವರದಿಗಾಗಿ ಕಾಯುತ್ತಿದ್ದಾರೆ.

2015ರಲ್ಲಿ ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯಲ್ಲಿ ಸಿದ್ಧವಾಗಿದ್ದ ಜಾತಿ ಗಣತಿ ವರದಿಗೆ ಸದಸ್ಯ ಕಾರ್ಯದರ್ಶಿ ಅಂಕಿತ ಹಾಕದ ಕಾರಣ ಇನ್ನೂ ಬಿಡುಗಡೆ ಮಾಡಿಲ್ಲ.

ಶೇ. 70 ರಷ್ಟು ಜಾತಿಗಳು ಮತ್ತು ಪಂಗಡಗಳು ಇನ್ನೂ ಯಾವುದೇ ರಾಜಕೀಯ ಅಥವಾ ಆರ್ಥಿಕ ಪ್ರಯೋಜನಗಳನ್ನು ಪಡೆಯದ ಕಾರಣ ವರದಿಯ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ಕಳೆದ ಎಂಟು ವರ್ಷಗಳಿಂದ ಈ ಸಮಸ್ಯೆ ನನೆಗುದಿಗೆ ಬಿದ್ದಿದ್ದರೂ ಇದೀಗ ಬಿಹಾರ ತನ್ನ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ನಂತರ ರಾಜ್ಯದಲ್ಲೂ ವರದಿ ಬಹಿರಂಗಕ್ಕೆ ಒತ್ತಡ ಹೆಚ್ಚುತ್ತಿದೆ.

ಬಿಹಾರದ ಜನಗಣತಿಯು ವಿವಿಧ ಜಾತಿಗಳ ಜನಸಂಖ್ಯೆಯನ್ನು ಬಹಿರಂಗಪಡಿಸಿದರೆ, ಕರ್ನಾಟಕದ ವರದಿಯು ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಲಾಗುತ್ತದೆ. 

ಎಂಬಿಸಿಗಳು ಮತ್ತು ಸೂಕ್ಷ್ಮ ಸಮುದಾಯಗಳು ವರದಿಯ ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತವೆ. ಇದು ವಿವಿಧ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯಕ್ರಮಗಳು ಮತ್ತು ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.

ಸುಮಾರು 50 ಪಂಗಡಗಳು ಯಾವುದೇ ರಾಜಕೀಯ, ಆರ್ಥಿಕ ಅಥವಾ ಶೈಕ್ಷಣಿಕ ಪ್ರಯೋಜನಗಳನ್ನು ಇನ್ನೂ ಪಡೆಯದ ಕಾರಣ ಆದಿವಾಸಿಗಳೂ ಉತ್ಸುಕರಾಗಿದ್ದಾರೆ. ಜೇನು ಕುರುಬ, ಬೆಟ್ಟ ಕುರುಬ, ಸೋಲಿಗ, ಕೊರಗ ಮತ್ತಿತರರು ಆರು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಅವರು 38 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಿಸಿದ್ದರೂ ಯಾವುದೇ ಸೂಕ್ತ ಸೌಲಭ್ಯ ಸಿಕ್ಕಿಲ್ಲ. 

ಡಿಇಇಡಿ ಸಂಸ್ಥಾಪಕ ಶ್ರೀಕಾಂತ್ ಮಾತನಾಡಿ, ವರದಿಯನ್ನು ಪ್ರಕಟಿಸಲು ಉತ್ಸುಕವಾಗಿರುವ ಸರ್ಕಾರ ಆದಿವಾಸಿಗಳಲ್ಲಿ ಭರವಸೆ ಮೂಡಿಸುವ ಎಸ್ಟಿಗಳಲ್ಲಿ ಒಳ ಮೀಸಲಾತಿ ಪರಿಚಯಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕಾನಾಥ್ ಮಾತನಾಡಿ, ಪ್ರಜಾಪ್ರಭುತ್ವ ವೇದಿಕೆಗಳು ಮತ್ತು ನೀತಿ ನಿರೂಪಣಾ ಸಂಸ್ಥೆಗಳಲ್ಲಿ ಎಂಬಿಸಿಗಳಿಗೆ ಪ್ರಾತಿನಿಧ್ಯವಿಲ್ಲದ ಕಾರಣ ಅವರನ್ನು ನಿರ್ಲಕ್ಷಿಸಲಾಗಿದೆ. ಆಯೋಗದ ಕೆಲಸ ಕೇವಲ ಜಾತಿವಾರು ಜನಸಂಖ್ಯೆಯ ವಿವರ ನೀಡುವುದಲ್ಲ. ಅವರ ಹಿಂದುಳಿದಿರುವ ಅಂಶಗಳನ್ನು ವಿಶ್ಲೇಷಿಸಬೇಕು ಎಂದಿದ್ದಾರೆ.

SCROLL FOR NEXT