ಸಾಂದರ್ಭಿಕ ಚಿತ್ರ 
ರಾಜ್ಯ

ಜಾತಿಗಣತಿ ವರದಿ ಬಿಡುಗಡೆ ಮತ್ತಷ್ಟು ವಿಳಂಬ!

70 ‘ಅತಿ ಹಿಂದುಳಿದ ಸಮುದಾಯ’ಗಳ ಮುಖಂಡರ ಗುಂಪು ಗುರುವಾರ ಶಾಸಕರ ಭವನದಲ್ಲಿ ಸಭೆ ನಡೆಸಿದ್ದು, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದೆ.

ಬೆಂಗಳೂರು: 70 ‘ಅತಿ ಹಿಂದುಳಿದ ಸಮುದಾಯ’ಗಳ ಮುಖಂಡರ ಗುಂಪು ಗುರುವಾರ ಶಾಸಕರ ಭವನದಲ್ಲಿ ಸಭೆ ನಡೆಸಿದ್ದು, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದೆ.

ಸ್ಪಷ್ಟ ದಿನಾಂಕ ನಿಗದಿಪಡಿಸಿ ಕಾಂತರಾಜ್ ಆಯೋಗದ ವರದಿಯನ್ನು  ಸಾರ್ವಜನಿಕವಾಗಿ ಮಂಡಿಸುವಂತೆ ಒತ್ತಾಯಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ಮಾಜಿ ಐಎಎಸ್ ಅಧಿಕಾರಿ ಶ್ರೀನಿವಾಸ ಆಚಾರಿ ಹಾಗೂ ಮಾಜಿ ಸದಸ್ಯ ಕಾಂತರಾಜ್ ಆಯೋಗ ಕೆಎನ್ ಲಿಂಗಪ್ಪ ಹೇಳಿದ್ದಾರೆ.

ಕಾಂತರಾಜು ಆಯೋಗದ ವರದಿ ಸಿದ್ದಪಡಿಸಲು ಅಂದಿನ ಸರ್ಕಾರ ಸುಮಾರು 170 ಕೋಟಿ ರೂ. ಖರ್ಚು ಮಾಡಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಿ, ಕಾಂತರಾಜ್ ಆಯೋಗದ ವರದಿಯನ್ನು ಮಂಡಿಸಲು ದಿನಾಂಕ ನಿಗದಿಗೊಳಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಅಂದಿನ ಕಾರ್ಯದರ್ಶಿಗಳು ವರದಿಗೆ ಸಹಿ ಮಾಡದ ಕಾರಣ ವರದಿಯ ವಿವರಗಳನ್ನು ಬಹಿರಂಗಪಡಿಸಲು ಗಂಭೀರ ಕಾನೂನು ಅಡಚಣೆಯಿದೆ, ಆದ್ದರಿಂದ ನಾವು ಅದನ್ನು ಸಾರ್ವಜನಿಕವಾಗಿ ಮಂಡಿಸಲು ಸಾಧ್ಯವಿಲ್ಲ ಎಂದು ಜಯಪ್ರಕಾಶ್  ಹೆಗ್ಡೆ ಹೇಳಿದ್ದಾರೆ. ಈಗಾಗಲೇ ಕಾಂತರಾಜ್ ಆಯೋಗದ ವರದಿ ಸಲ್ಲಿಕೆಯಾಗಿದೆ. ಆದರೆ ಕಡತ ಹಿಂದುಳಿದ ವರ್ಗಗಳ ಆಯೋಗದ ಕಚೇರಿಯಿಂದ ನಾಪತ್ತೆಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಬ್ಯಾಕಪ್ ಆಗಿ ಸಾಫ್ಟ್ ಮತ್ತು ಹಾರ್ಡ್ ಕಾಪಿಗಳಿವೆ. ಆದರೆ ಸದಸ್ಯರು ಸಹಿ ಮಾಡಿದ ಮೂಲ ದಾಖಲೆ ಕಾಣೆಯಾಗಿದೆ. ಇದು ಬಹಳ ಅಮೂಲ್ಯವಾದ ದಾಖಲೆಯಾಗಿದೆ. ಸರ್ಕಾರದ ಅನುಕೂಲಕ್ಕೆ ಅನುಗುಣವಾಗಿ ಇದನ್ನು ಟ್ಯಾಂಪರಿಂಗ್ ಅಥವಾ ಸರ್ಕಾರದ ಅನುಕೂಲಕ್ಕೆ ಅನುಗುಣವಾಗಿ ತಿದ್ದಬಹುದಾಗಿದ್ದು, ಹೀಗಾಗಿ ಸಹಿ ಮಾಡಿರುವ ಕಡತವನ್ನು ಸಮರ್ಪಕವಾಗಿ ಸಂರಕ್ಷಿಸಬೇಕು ಎಂದು ಹಿಂದುಳಿದ ಸಮುದಾಯದ ಮುಖಂಡರು ಹೇಳಿದರು.

ಕಾಣೆಯಾದ ದಾಖಲೆಯ ಬಗ್ಗೆ ಉತ್ತರಿಸಿದ ಜಯಪ್ರಕಾಶ್ ಹೆಗ್ಡೆ, ನಮ್ಮ ಬಳಿ  ಹಾರ್ಡ್ ಕಾಪಿ ದಾಖಲೆಯಿದೆ. ಆದರೆ ಅದಕ್ಕೆ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲ ಎಂದರು. ಹಿಂದುಳಿದ ಸಮುದಾಯಗಳಿಗೆ ಕಡಿಮೆ ಪ್ರಾತಿನಿಧ್ಯವಿರುವ  ಬಗ್ಗೆ ದ್ವಾರಕಾನಾಥ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಹಿಂದುಳಿದ ಸಮುದಾಯಗಳಾದ ಕುರುಬ, ಬೆಸ್ತ/ಮೊಗವೀರ, ಗೊಲ್ಲ, ಈಡಿಗಿಲ್ಲವ, ದೇವಾಂಗ, ಕುಂಬಾರ, ಮಡಿವಾಳ ಮತ್ತಿತರ ಸಮುದಾಯಗಳು ಒಟ್ಟಾಗಿ ಶೇ 50ರಷ್ಟು ಜನಸಂಖ್ಯೆ ಹೊಂದಿದ್ದರೂ ತಮ್ಮ ಹಕ್ಕು ಪಡೆದಿಲ್ಲ ಎಂದು ವಿವರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿಂದುಳಿದ ಸಮುದಾಯದ ಮೂವರು ಸಚಿವರು ಮಾತ್ರ ಸಚಿವ ಸಂಪುಟದಲ್ಲಿದ್ದು, ಪ್ರಾತಿನಿಧ್ಯ ಕಡಿಮೆಯಾಗಿದೆ.ಸಮುದಾಯದ ಸಂಖ್ಯೆಗಳ ಪ್ರಕಾರ ಹೋದರೆ, 10-12 ಮಂತ್ರಿಗಳನ್ನು ಹೊಂದಿರಬೇಕು . ಆದರೆ ರಾಜಕೀಯ ವ್ಯವಸ್ಥೆಯಲ್ಲಿ ಅನೇಕ ಸಮುದಾಯಗಳಿಗೆ ಶೂನ್ಯ ಪ್ರಾತಿನಿಧ್ಯವಿದೆ ಎಂದು ವಿವರಿಸಿದ್ದಾರೆ.

ಎಲ್ಲರಿಗೂ ಸಮಾನವಾಗಿ ಪ್ರಾತಿನಿಧ್ಯ ನೀಡಬೇಕೆಂದು ವರದಿಯ ಶಿಫಾರಸುಗಳನ್ನು ಸೂಚಿಸಿದೆ. ಹಿಂದುಳಿದವರಲ್ಲಿ ಹೆಚ್ಚಿನವರು ತಮ್ಮ ಸಮುದಾಯಗಳಿಂದ ಒಬ್ಬ ಶಾಸಕರನ್ನು ಹೊಂದಿಲ್ಲ, ಇವರುಗಳು ಒಟ್ಟು ಜನಸಂಖ್ಯೆಯ ಸರಾಸರಿ ಶೇ. 4-5 ರಷ್ಟಿದ್ದಾರೆ ಎಂದು ದ್ವಾರಕನಾಥ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT