ರಾಜ್ಯ

ರೈಲ್ವೇ ಮಂಡಳಿ ಅಧಿಕಾರಿಗಳಿಂದ ಬೆಂಗಳೂರು ಉಪನಗರ ರೈಲು ಯೋಜನೆ ಸೇರಿ ಹಲವು ಯೋಜನೆಗಳ ಪರಿಶೀಲನೆ

Manjula VN

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಸೇರಿದಂತೆ ನಗರದ ಇತರೆ ರೈಲ್ವೇ ಯೋಜನೆಗಳನ್ನು ರೈಲ್ವೆ ಮಂಡಳಿಯ ಸದಸ್ಯರಾದ  (ಮೂಲಸೌಕರ್ಯ) ರೂಪ್ ನಾರಾಯಣ ಸುಂಕರ್ ಅವರು ಶುಕ್ರವಾರ ಪರಿಶೀಲನೆ ನಡೆಸಿದರು.

ಯೋಜನೆಗಳಿಗೆ ಅಗತ್ಯವಿರುವ ನಿರ್ದಿಷ್ಠ ಭೂ ಲಭ್ಯತೆ ಸಮಸ್ಯೆಗಳ ಪರಿಹರಿಸುವಂತೆ ಬೆಂಗಳೂರು ರೈಲ್ವೇ ವಿಭಾಗ ಮತ್ತು ಉಪನಗರ ರೈಲು ಯೋಜನೆಯ ಕಾಮಗಾರಿ ನಡೆಸುತ್ತಿರುವ ನೋಡಲ್ ಏಜೆನ್ಸಿ ಗಳಿಗೆ ಸೂಚಿಸಲಾಗಿದೆ. ಉಪನಗರ ಯೋಜನೆಯ ಮಾರ್ಗದಲ್ಲಿ 11 ರೈಲ್ವೆ ಕ್ರಾಸಿಂಗ್‌ಗಳಿವೆ. ಕೆಳಸೇತುವೆಗಳನ್ನು ನಿರ್ಮಿಸುವ ಮೂಲಕ ಅವುಗಳನ್ನು ತೆಗೆಯಬೇಕಿದೆ. ರೈಲುಗಳು ಅಡೆತಡೆಗಳಿಲ್ಲದೆ ನಿಯಮಿತವಾಗಿ ಸಂಚರಿಸಲಿದ್ದು, ಈ ಕಾರ್ಯ ವಿಳಂಬವಾಗುವ ಸಾಧ್ಯತೆಗಳಿವೆ. ಲೆವೆಲ್ ಕ್ರಾಸಿಂಗ್ ಅನ್ನು ಸಹ ಬದಲಾಯಿಸಬೇಕಾಗಿದೆ ಎಂದು ರೂಪ್ ನಾರಾಯಣ ಸುಂಕರ್ ಅವರು ಹೇಳಿದ್ದಾರೆ.

ಇದೇ ವೇಳೆ ರೈಲ್ವೇ ಮಂಡಳಿ ಸದಸ್ಯರು ಪುನರಾಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳನ್ನೂ ಪರಿಶೀಲಿಸಿದರು.

ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಕುರಿತು ಮಾತನಾಡಿದ ಸುಂಕರ್ ಅವರು, ಕಾಮಗಾರಿ ಕಾರ್ಯಕ್ರಮಗಳು ಪ್ರಗತಿಯಲ್ಲಿದೆ. ಡಿಸೆಂಬರ್ 2026 ರೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಯಶವಂತಪುರ ರೈಲು ನಿಲ್ದಾಣದಲ್ಲಿ ಕೆಲವು ಅಡೆತಡೆಗಳು ಇದ್ದು, ಅವುಗಳು ಇದೀಗ ದೂರಾಗಿವೆ ಎಂದು ತಿಳಿಸಿದರು.

ಯೋಜನೆಗಳ ಪರಿಶೀಲನೆ ಬಳಿಕ ಉನ್ನತ ರೈಲ್ವೇ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸುಂಕರ್ ಅವರು, ಸುರಕ್ಷತೆಗೆ ಒತ್ತು ನೀಡುವ ಮೂಲಕ ಅಗತ್ಯವಿರುವ ಮೂಲಸೌಕರ್ಯಗಳ ಒದಗಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು.

SCROLL FOR NEXT