ಫ್ಲ್ಯಾಟ್ (ಸಂಗ್ರಹ ಚಿತ್ರ) 
ರಾಜ್ಯ

ಋಣಭಾರ ಪ್ರಮಾಣಪತ್ರಗಳಲ್ಲಿ ಹೆಸರು ಬದಲಾವಣೆ ಆಗದೇ ಫ್ಲ್ಯಾಟ್ ಖರೀದಿದಾರರಲ್ಲಿ ಆತಂಕ 

ಫ್ಲ್ಯಾಟ್ ಖರೀದಿದಾರರಿಗೆ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಉಪ ನೋಂದಣಿ ಕಚೇರಿಗಳಲ್ಲಿನ ಪ್ರಕ್ರಿಯೆ ವೇಳೆ ಫ್ಲ್ಯಾಟ್ ಮಾಲಿಕರ ಹೆಸರನ್ನು ಸೇರಿಸದೇ ಇರುವುದು ಗೃಹ ಖರೀದಿದಾರರಿಗೆ ತೀವ್ರವಾದ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ.

ಬೆಂಗಳೂರು: ಫ್ಲ್ಯಾಟ್ ಖರೀದಿದಾರರಿಗೆ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಉಪ ನೋಂದಣಿ ಕಚೇರಿಗಳಲ್ಲಿನ ಪ್ರಕ್ರಿಯೆ ವೇಳೆ ಫ್ಲ್ಯಾಟ್ ಮಾಲಿಕರ ಹೆಸರನ್ನು ಸೇರಿಸದೇ ಇರುವುದು ಗೃಹ ಖರೀದಿದಾರರಿಗೆ ತೀವ್ರವಾದ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ.

ಹಲವು ಪ್ರಕರಣಗಳಲ್ಲಿ, ಮಾರಾಟವಾಗಿರುವ ಫ್ಲ್ಯಾಟ್ ಗಳು ಫ್ಲ್ಯಾಟ್ ಗಳ ಬಿಲ್ಡರ್ ಅಥವಾ ಪ್ರಮೋಟರ್ ಗಳ ಹೆಸರಲ್ಲೇ ಉಳಿದಿದ್ದು ಅವರು, ಮಾಲಿಕರಿಗೆ ಅರಿವಿಲ್ಲದೇ ಆಸ್ತಿಗಳನ್ನು ಸಂಪನ್ಮೂಲ ಕ್ರೋಡೀಕರಣಕ್ಕೆ ಅಡ ಇಡುತ್ತಿರುವುದು ವರದಿಯಾಗಿದೆ ಎಂದು ಗೃಹ ಖರೀದಿದಾರರು ಹೇಳಿದ್ದಾರೆ. 

ಗೃಹ ಖರೀದಿದಾರರ ಒಕ್ಕೂಟ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ವ್ಯವಸ್ಥೆಯಲ್ಲಿನ ದೊಡ್ಡ ಸಮಸ್ಯೆಯನ್ನು ಸರಿಪಡಿಸುವಂತೆ ಸರ್ಕಾರವನ್ನು ಮನವಿ ಮಾಡಿದೆ. 

ಒಕ್ಕೂಟದ ಸಂಚಾಲಕ ಧನಂಜಯ ಪದ್ಮನಾಭಾಚಾರ್ ಈ ಬಗ್ಗೆ ಟಿಎನ್ಐಇ ಗೆ ಮಾಹಿತಿ ನೀಡಿದ್ದು, ಉಪನೋಂದಣಿ ಕಚೇರಿಯಲ್ಲಿ ಒಪ್ಪಂದವನ್ನು ನೋಂದಣಿ ಮಾಡುವ ವೇಳೆ ಋಣಭಾರ ಪ್ರಮಾಣಪತ್ರಗಳಲ್ಲಿ ಹೊಸದಾಗಿ ಫ್ಲ್ಯಾಟ್ ಖರೀದಿಸಿರುವವರ ಹೆಸರು ಸೇರಿಸಲಾಗುತ್ತಿಲ್ಲ. ಈ ಋಣಭಾರ ವಿವರಗಳು ಅಪಾರ್ಟ್ಮೆಂಟ್ ನ್ನು ನಿರ್ಮಿಸಿರುವ ಭೂಮಿಯ ಟೈಟಲ್ ಅಥವಾ ಖಾತಾದಲ್ಲಿ ಕಾಣಬೇಕು. ಸಾಧ್ಯವಾದಷ್ಟೂ ಶೀಘ್ರವೇ ಈ ಸಮಸ್ಯೆ ಬಗೆಹರಿಯಬೇಕು, ಇಲ್ಲದೇ ಇದ್ದಲ್ಲಿ ಪ್ರೊಮೋಟರ್ ಗಳು ದಾಖಲೆಗಳನ್ನು ಅಡ ಇಡುವುದಕ್ಕೆ ಮುಕ್ತ ಅವಕಾಶ ಸಿಗಲಿದೆ ಇದು ಆಗಲೇ ಕೆಲವೆಡೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಪ್ರೊಮೋಟರ್ ಗಳು ಈ ಪರಿಸ್ಥಿತಿಯ ದುರುಪಯೋಗ ಮಾಡಿಕೊಳ್ಳುತ್ತಿರುವುದರ ಸ್ಪಷ್ಟ ನಿದರ್ಶನವನ್ನು ಉಲ್ಲೇಖಿಸಿರುವ ಒಕ್ಕೂಟದ ಸಂಚಾಲಕ, ತಾವು ಹಾಗೂ ತಮ್ಮೊಂದಿಗೆ 100 ಗೃಹ ಖರೀದಿದಾರರಿಗೆ ಇದರ ಪರಿಣಾಮ ಉಂಟಾಗಿದೆ. ಶೋಭಾ ಡೆವಲಪರ್ಸ್ ಯೋಜನೆ ಪೂರ್ಣಗೊಂಡು ನೂರಾರು ಸೇಲ್ ಡೀಡ್ ಗಳು ಜಾರಿಯಾದ ನಂತರವೂ ಜೂ.2022 ರಲ್ಲಿ ನಮ್ಮ ಭೂಮಿಯನ್ನು 160 ಕೋಟಿ ರೂಪಾಯಿಗಳಿಗೆ ಅಡ ಇಟ್ಟಿತ್ತು ಈ ಸಮಸ್ಯೆ ದೀರ್ಘಕಾಲದಿಂದಲೂ ಇದೆ. ನಾವು ಈ ಸಮಸ್ಯೆಯ ಮೂಲಕಾರಣವನ್ನಷ್ಟೇ ಹೊರತೆಗೆದಿದ್ದೇವೆ ವ್ಯವಸ್ಥೆಯಲ್ಲಿನ ಈ ದೋಷ ಸರಿಯಾಗಬೇಕು ಹಣವನ್ನು ಬಿಡುಗಡೆ ಮಾಡುವ ಮೊದಲು ಬ್ಯಾಂಕ್‌ಗಳು ಆಸ್ತಿಯ ಮಾಲೀಕತ್ವವನ್ನು ಮೌಲ್ಯೀಕರಿಸುವ ಅಗತ್ಯವಿದೆ ಆದರೆ ನಿಸ್ಸಂಶಯವಾಗಿ ಅವರು ಅದನ್ನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. 

 ಚಂದಾಪುರ- ಆನೇಕಲ್ ನಲ್ಲಿ ನಿರ್ಮಾಣ ಮಾದಿರುವ ಫ್ಲ್ಯಾಟ್ ಗಳು ಒಮ್ಮೆ ಮಾರಾಟವಾದ ನಂತರವೂ ಕಮ್ಯೂನ್ ಪ್ರಾಪರ್ಟೀಸ್ ನ ಮಾಲಿಕರು, ಆ ಫ್ಲ್ಯಾಟ್ ಮಾಲಿಕರಿಗೆ ಅರಿವಿಲ್ಲದೆಯೇ ದಾಖಲೆಗಳನ್ನು ಬ್ಯಾಂಕಿಂಗ್ ಹೊರತಾದ ಫೈನಾನ್ಸ್ ಸಂಸ್ಥೆಯೊಂದಕ್ಕೆ ಅಡ ಇಟ್ಟಿದ್ದ ಘಟನೆಯನ್ನು ಇತ್ತೀಚೆಗೆ ಟಿಎನ್ಐಇ ವರದಿ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ಹೊಸ ದೂರು ದಾಖಲು, ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ!

ಮಂಗಳೂರು: KSRTC ಬಸ್ ಬ್ರೇಕ್ ಫೇಲ್; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು; Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

SCROLL FOR NEXT