ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ. 
ರಾಜ್ಯ

ಸೈಬರ್ ಕ್ರೈಂ ನಿಭಾಯಿಸಲು ಸ್ಥಳೀಯ ಠಾಣೆಗಳ ಪೊಲೀಸರಿಗೆ ತರಬೇತಿ: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ

ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದ್ದು, ಪೊಲೀಸರು ಮತ್ತು ಸರ್ಕಾರ ಈ ವಿಷಯವಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಾವು ಕಾಲಮಿತಿಯ ತನಿಖೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಂಗಳವಾರ ಹೇಳಿದರು.

ಬೆಂಗಳೂರು: ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇದ್ದು, ಪೊಲೀಸರು ಮತ್ತು ಸರ್ಕಾರ ಈ ವಿಷಯವಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಾವು ಕಾಲಮಿತಿಯ ತನಿಖೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಮಂಗಳವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ಕಾನೂನಿನ ಪ್ರಕಾರ 60 ರಿಂದ 90 ದಿನಗಳವರೆಗೆ ಸೈಬರ್ ಕ್ರೈಂ ಪ್ರಕರಣಗಳ ತನಿಖೆ ಪೂರ್ಣಗೊಳ್ಳಬೇಕು. ಒಂದು ವೇಳೆ ವಿಳಂಬವಾದರೆ ಎಸಿಪಿ, ಡಿಸಿಪಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಇದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇನ್ನು ಮುಂದೆ ಕಾಲಮಿತಿ ತನಿಖೆಯನ್ನು ಕಡ್ಡಾಯಗೊಳಿಸಿದ್ದೇವೆ.  ಸೈಬರ್ ಕ್ರೈಮ್ ಪ್ರಕರಣಗಳನ್ನು ಕಾಲಮಿತಿಯೊಳಗೆ ತನಿಖೆ ನಡೆಸಲು ಸ್ಥಳೀಯ ಪೊಲೀಸರಿಗೆ ತರಬೇತಿಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಪೊಲೀಸರಿಗೆ ಸಿಇಎನ್ ಪೊಲೀಸ್ ಠಾಣೆಗಳು, ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಮತ್ತು ಸಿಐಡಿಯಲ್ಲಿನ ಸೈಬರ್ ಘಟಕಕ್ಕೆ ನಿಯೋಜಿಸಲಾಗಿರುವ ಅಧಿಕಾರಿಗಳು ತರಬೇತಿ ನೀಡುತ್ತಾರೆಂದು ಹೇಳಿದರು.

 ಸೈಬರ್ ಕ್ರೈಂ ನಡೆದ ಒಂದು ಗಂಟೆ ಒಳಗಿನ ಸಮಯ ವನ್ನು ಗೋಲ್ಡನ್ ಹವರ್ ಎಂದು ಕರೆಯುತ್ತೇವೆ. ಈ ಕಾಲಮಿತಿಯಲ್ಲಿ ರಾಷ್ಟ್ರವ್ಯಾಪಿ ಇರುವ 1930 ಸಹಾಯವಾಣಿಗೆ ಮಾಹಿತಿ ನೀಡಿದರೆ ವಂಚನೆ ಮಾಡಿ ಹಣ ಲಪಟಾಯಿಸಿದ ಖಾತೆಯನ್ನು ಜಪ್ತಿ ಮಾಡಲು ಮತ್ತು ಹಣವನ್ನು ವಾಪಸ್ ಕೊಡಿಸಲು ಸಾಧ್ಯತೆಗಳು ಹೆಚ್ಚಿರುತ್ತವೆ.

ಈ ಮೊದಲು ಅಂತರಾಷ್ಟ್ರೀಯ ಮಟ್ಟದ ವಂಚನೆ ಪ್ರಕರಣದಲ್ಲಿ 854 ಕೋಟಿ ರೂ.ಗಳ ಹಗರಣವನ್ನು ಪತ್ತೆ ಹಚ್ಚಲಾಗಿತ್ತು. ಅದರಲ್ಲಿ 5,903 ಪ್ರಕರಣಗಳಿದ್ದವು. ಈ ವರ್ಷದ 9 ತಿಂಗಳಲ್ಲಿ 18 ಸ್ವರೂಪದ 12,615 ಸೈಬರ್ ಕ್ರೈಂ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 470 ಕೋಟಿ ರೂ.ಗಳ ವಂಚನೆಯಾಗಿದೆ. ತನಿಖಾಧಿಕಾರಿಗಳು 201 ಕೋಟಿ ರೂ.ಗಳನ್ನು ಜಪ್ತಿ ಮಾಡಿದ್ದಾರೆ. ಈವರೆಗೂ ದೂರುದಾರರಿಗೆ 27 ಕೋಟಿ ರೂ.ಗಳನ್ನು ವಾಪಸ್ ನೀಡಲಾಗಿದೆ. ಉಳಿದಂತೆ ಪ್ರಕರಣಗಳ ಆಧಾರಿತವಾಗಿ ನ್ಯಾಯಾಲಯದಿಂದ ಆದೇಶ ಪಡೆದು ಹಣವನ್ನು ಫಲಾನುಭವಿಗಳಿಗೆ ಹಿಂದಿರುಗಿಸಲಾಗುವುದು ಎಂದು ತಿಳಿಸಿದರು.

ಆಧಾರ್ ಸಂಖ್ಯೆಯಲ್ಲಿ ಬಯೊಮೆಟ್ರಿಕ್ ಆಧಾರಿತ ಪಾವತಿ ಲಭ್ಯತೆ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಆಧಾರ್ ವೆಬ್‍ಸೈಟ್‍ಗೆ ಹೋಗಿ ಬಯೊಮೆಟ್ರಿಕ್ ಸಂಪರ್ಕಿತ ಪಾವತಿ ವ್ಯವಸ್ಥೆಯನ್ನು ಅಗೋಚರವಾಗಿಟ್ಟುಕೊಳ್ಳಲು ಅವಕಾಶವಿದೆ. ಅಗತ್ಯವಿಲ್ಲದ ಹೊರತು ಈ ಸೆಟ್ಟಿಂಗ್ ಅನ್ನು ಬಳಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಉದ್ಯೋಗದ ಭರವಸೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಲೈಕ್ ಮಾಡಿಸುವುದು, ಕೊರಿಯರ್‍ನಲ್ಲಿ ಮಾದಕ ವಸ್ತುಗಳು ಬಂದಿವೆ ಎಂದು ಬೆದರಿಸುವುದು, ಅನಾಮಿಕವಾದಂತಹ ಲಿಂಕ್‍ಗಳನ್ನು ಕ್ಲಿಕ್ ಮಾಡುವುದು, ಒಟಿಪಿ ಹಂಚಿಕೊಳ್ಳುವುದು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಆರೋಪಿಗಳು ಸೈಬರ್ ಅಪರಾಧಗಳನ್ನು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಹೆಚ್ಚುತ್ತಿದೆ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಸೈಬರ್ ಕ್ರೈಂನ ವ್ಯಾಪ್ತಿ ವಿಸ್ತಾರಗೊಂಡಿದೆ. ಕಾಲಕಾಲಕ್ಕೆ ಪಾತಾಳ ಗರಡಿ ಹಾಗೂ ಇತರ ಜಾಗೃತಿ ಅಭಿಯಾನಗಳನ್ನು ಕೈಗೊಂಡಿದ್ದೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT