ರಾಜ್ಯ

ಒಕ್ಕಲಿಗರ ಅವಹೇಳನ: ಪ್ರೊ.ಭಗವಾನ್ ಅರೆ ಹುಚ್ಚ -ಜಿಟಿಡಿ; ಅವನೊಬ್ಬ ಒಬ್ಬ ತಲೆ ತಿರುಕ - ಅಶೋಕ್

Shilpa D

ಬೆಂಗಳೂರು: ಒಕ್ಕಲಿಗರ ಬಗ್ಗೆ ಮಾತನಾಡಿರುವ ಪ್ರೊ.ಕೆ.ಎಸ್. ಭಗವಾನ್ ಒಬ್ಬ ಅರೆ ಹುಚ್ಚ, ಮನಸಿನ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ  ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ನಡೆದ ಮಹಿಷ ದಸರಾದಲ್ಲಿ ಮಾತನಾಡಿದ್ದ ಭಗವಾನ್, ಒಕ್ಕಲಿಗರು ಸಂಸ್ಕೃತಿ ಹೀನರು, ಈ ಮಾತು ನನ್ನದು ಅಲ್ಲ‌ ಕುವೆಂಪು ಅವರದ್ದು ಎಂದು ಹೇಳಿಕೆ ನೀಡಿದ್ದರು. ಪ್ರೊ.ಭಗವಾನ್​ ತನ್ನನ್ನು ತಾನೇ ಅಪಮಾನ ಮಾಡಿಕೊಂಡಿದ್ದಾರೆ. ಯಾರನ್ನೋ ಮೆಚ್ಚಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

ಪ್ರೊ.ಭಗವಾನ್ ಸ್ವಲ್ಪ ಮೆಂಟಲ್ ಆಗಿದ್ದಾರೆ. ಆದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಬೇಕು. ಅವರು ಕೂಡ ಒಳ್ಳೆಯ ಕುಟುಂಬದಿಂದ ಬಂದವರು. ಯಾರನ್ನೋ ಮೆಚ್ಚಿಸಲು ಈ ರೀತಿಯಾಗಿ ಮಾತನಾಡುತ್ತಾರೆ. ಅವರ ಹೇಳಿಕೆಯನ್ನು ತೀವ್ರವಾಗಿ ನಾನು ಖಂಡಿಸುತ್ತೇನೆ. ಯಾವುದೇ ಸಮುದಾಯದ ಬಗ್ಗೆ ಯಾರು ಕೂಡ ವಿವಾದಾತ್ಮಕ ಹೇಳಿಕೆಯನ್ನು ನೀಡಬಾರದು ಎಂದರು.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಆರ್ ಅಶೋಕ, ಯಾವನೋ ಒಬ್ಬ ತಲೆ ತಿರುಕ ಭಗವಾನ್, ಒಕ್ಕಲಿಗರ ಬಗ್ಗೆ ಮಾತಾಡಿದ್ದಾರೆ. ಅವನೊಬ್ಬ ಮೆಂಟಲ್ ಗಿರಾಕಿ. ಅವಹೇಳನಕಾರಿಯಾಗಿ ಮಾತಾಡಿ ಒಕ್ಕಲಿಗ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ನಾನು ನಮ್ಮ‌ ಸ್ವಾಮೀಜಿ ಜೊತೆ ಮಾತಾಡುತ್ತೇನೆ ಎಂದರು.

ಭಗವಾನ್ ಕಾರ್ಯಕ್ರಮಕ್ಕೆ ಹೋಗುವವರು ಎಲ್ಲಾ ಕಾಂಗ್ರೆಸ್​ನವರೇ. ರಕ್ಷಣೆ ಕೊಡುವವರೂ‌ ಕಾಂಗ್ರೆಸ್​ನವರು, ಬೆಂಬಲ ಕೊಡುವವರೂ ಕಾಂಗ್ರೆಸ್​ನವರು. ಈಗ ಭಗವಾನ್ ಹೇಳಿಕೆಗೆ ಕಾಂಗ್ರೆಸ್ ಉತ್ತರಿಸಬೇಕು. ಕೂಡಲೇ ಅವನನ್ನು ಬಂಧಿಸಿ ಜೈಲಿಗಟ್ಟಬೇಕು. ಇಲ್ಲದಿದ್ದರೆ ಇದು ದೊಡ್ಡ ಗಲಾಟೆಗೆ ನಾಂದಿಯಾಗುತ್ತದೆ. ಅಶಾಂತಿಗೆ ದೂಡಲು ಇದು ಕಾರಣ ಆಗುತ್ತದೆ ಎಂದರು.

SCROLL FOR NEXT