ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ 195 ಕಿಲೋಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣ ಯೋಜನೆ ಪ್ರಸ್ತಾಪಿಸಿದೆ. ಆದರೆ ಆರಂಭದಲ್ಲೇ ಅಪಸ್ವರ ಎದ್ದಿದೆ.
ಸಾರ್ವಜನಿಕವಾಗಿ ಸಮಾಲೋಚನೆ ನಡೆಸದೆ ಈ ಯೋಜನೆ ಪ್ರಸ್ತಾಪಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಮಳೆಯ ಸಮಯದಲ್ಲಿ ಬೆಂಗಳೂರಿನಲ್ಲಿ ಸುರಂಗಮಾರ್ಗದಲ್ಲಿ ಆಗಿರುವ ಹಿಂದಿನ ಕೆಟ್ಟ ಅನುಭವಗಳಿದ್ದರೂ ಈ ಯೋಜನೆ ಪ್ರಸ್ತಾಪಿಸಿರುವ ಸರ್ಕಾರದ ನಿರ್ಧಾರ ಪ್ರಶ್ನಾರ್ಹವಾಗಿದೆ.
ಪ್ರಸ್ತಾವಿತ ಯೋಜನೆಯ್ನು ಮೇಲ್ವಿಚಾರಣೆ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಸ್ತಿತ್ವದಲ್ಲಿರುವ ಸುರಂಗಮಾರ್ಗಗಳ ಕಳಪೆ ನಿರ್ವಹಣೆ ಮಾಡುತ್ತಿರುವುದು ದಾಖಲಾಗಿದೆ. ರಾಜ್ಯ ಸರ್ಕಾರವು ಈ ಬೃಹತ್ ಯೋಜನೆಗೆ ಮುಂದಾದರೆ ಮತ್ತಷ್ಟು ಅವ್ಯವಸ್ಥೆ ಮತ್ತು ಅನಾಹುತ ಎದುರಾಗುವ ಸಾಧ್ಯತೆಯಿದೆ. ಸುರಂಗ ಮಾರ್ಗ ನಿರ್ಮಾಣದಿಂದ ಸಾರ್ವಜನಿಕ ಸಾರಿಗೆ ಬಳಸುವಂತೆ ಬೆಂಗಳೂರಿಗರನ್ನು ಪ್ರೋತ್ಸಾಹಿಸುವ ಬದಲು ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚುವಂತೆ ಮಾಡುತ್ತದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಗುತ್ತಿಗೆದಾರನ ಮನೆ ಮೇಲೆ ಐಟಿ ದಾಳಿ: ಕಾಂಗ್ರೆಸ್ನ ಡಿಎನ್ಎಯಲ್ಲಿ ಭ್ರಷ್ಟಾಚಾರ ಅಡಗಿದೆ: ರಾಜೀವ್ ಚಂದ್ರಶೇಖರ್
ಇದೊಂದು ಕೆಟ್ಟ ಕಲ್ಪನೆ. ಸಣ್ಣ ಅಂಡರ್‌ಪಾಸ್‌ಗಳನ್ನು ನಿರ್ವಹಿಸಲು ಬಿಬಿಎಂಪಿಗೆ ಸಾಧ್ಯವಾಗಿಲ್ಸ, ರಸ್ತೆಗಳು ಕಸದಿಂದ ಮುಕ್ತವಾಗಿಲ್ಲ ಮತ್ತು ಸರಾಗವಾಗಿ ಹರಿಯುವ ಚರಂಡಿ ನಿರ್ಮಾಣ ಮಾಡಲು ಸಾಧ್ಯವಾಗದ ಬಿಬಿಎಂಪಿಗೆ 195-ಕಿಮೀ ಉದ್ದದ ರಸ್ತೆ ಸುರಂಗ ಜಾಲವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನೀವು ಭಾವಿಸುತ್ತೀರಾ? ಎಂದು ಸರ್ಕಾರದ ಜೊತೆ ಕೆಲಸ ಮಾಡುವ ತಜ್ಞರೊಬ್ಬರು ಪ್ರಶ್ನಿಸಿದ್ದಾರೆ.
ಒಂದು ಕಿಲೋಮೀಟರ್ ಉದ್ದದ ಶಿವಾನಂದ ಮೇಲ್ಸೇತುವೆಯನ್ನು ನಿರ್ಮಿಸಲು ರಾಜ್ಯವು 2-3 ವರ್ಷಗಳನ್ನು ತೆಗೆದುಕೊಂಡಿತು. ಪೆರಿಫೆರಲ್ ರಿಂಗ್ ರೋಡ್, ಈಜಿಪುರ ಫ್ಲೈಓವರ್ ಇನ್ನೂ ಪೂರ್ಣವಾಗಿಲ್ಲ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಲೇನ್ ಇನ್ನೂ ನಿರ್ಮಾಣವಾಗಿಲ್ಲ. ಅತ್ಯಧಿಕ ಮಳೆಯಾದಾಗ ಉಂಟಾಗುವ ಪ್ರವಾಹ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ, ಕೆರೆ ಮತ್ತು ಚರಂಡಿಗಳ ಮೇಲಿನ ಅತಿಕ್ರಮಣಗ ತೆರವುಗೊಳಿಸಲು ನಾಗರಿಕ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ, ಹೀಗಿರುವಾಗ ನಾವು 195-ಕಿಮೀ ಉದ್ದದ ಭೂಗತ ಸುರಂಗ ರಸ್ತೆ ಜಾಲದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೆಸರು ಹೇಳಲು ಬಯಸು ತಜ್ಞರೊಬ್ಬರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಈ ಯೋಜನೆಯು ಮೇಲ್ನೋಟಕ್ಕೆ ಉತ್ತಮವಾದ ಪ್ಲಾನ್ ಎಂದು ಪರಿಗಣಿಸಲ್ಪಟ್ಟರೂ ಸಹ, ಇದು ಬಸ್ಸುಗಳು ಮತ್ತು ಮೆಟ್ರೋ ರೈಲಿನಂತಹ ಸಾರ್ವಜನಿಕ ಸಾರಿಗೆಯನ್ನು ಬಳಸುವ ಬದಲು ತಮ್ಮ ಖಾಸಗಿ ವಾಹನಗಳನ್ನು ಬಳಸಲು ವಾಹನ ಚಾಲಕರನ್ನು ಪ್ರೋತ್ರಾಹಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಅನಧಿಕೃತ ಹೋರ್ಡಿಂಗ್ ಅಳವಡಿಕೆ ಪ್ರಕರಣ: ಪಾಲಿಕೆಯೇ ಬೆಂಗಳೂರಿಗೆ ನಂ.1 ಶತ್ರು; ಬಿಬಿಎಂಪಿಗೆ ಹೈಕೋರ್ಟ್ ಚಾಟಿ
ಈ ಯೋಜನೆಯ ಬಗ್ಗೆ ಯಾವುದೇ ಸಾರ್ವಜನಿಕ ಸಮಾಲೋಚನೆ ಅಥವಾ ಚರ್ಚೆಯೂ ನಡೆದಿಲ್ಲ. ಈ ಯೋಜನೆ ಅವಶ್ಯಕತೆ ಇದೆಯೇ? ಎಂಬ ಬಗ್ಗೆ ಅಧ್ಯಯನ ಮಾಡಲಾಗಿಲ್ಲ. ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸಲು, ಸಂಪೂರ್ಣ ಸಾರ್ವಜನಿಕ ಸಮಾಲೋಚನೆ ಅಗತ್ಯವಿದೆ. ಉಕ್ಕಿನ ಮೇಲ್ಸೇತುವೆ ಮತ್ತು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್‌ಗೆ ಸರ್ಕಾರವು ಅದೇ ಮಾರ್ಗವನ್ನು ಅನುಸರಿಸುತ್ತಿದೆ ಮತ್ತೊಬ್ಬ ತಜ್ಞರು ಅಭಿಪ್ರಯ ಪಟ್ಟಿದ್ದಾರೆ.
ಈ ಯೋಜನೆಯ ವೆಚ್ಚದ ಪರಿಣಾಮಗಳನ್ನು ಸಹ ನೋಡಲಾಗುವುದಿಲ್ಲ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ, 1 ಕಿ.ಮೀ ಮೇಲ್ಸೇತುವೆ ನಿರ್ಮಾಣಕ್ಕೆ 125 ಕೋಟಿ ರೂ. ಮತ್ತು 14.5 ಮೀಟರ್ ಅಗಲದ 1 ಕಿ.ಮೀ ಸುರಂಗ ಕೊರೆಯಲು 450 ಕೋಟಿ ರೂ. 195 ಕಿ.ಮೀ ಉದ್ದದ ಸುರಂಗ ರಸ್ತೆಗೆ ತಗಲುವ ವೆಚ್ಚ ಕೇವಲ ಊಹಿಸಬಹುದು ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.