ದಸರಾ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತಿತರರು 
ರಾಜ್ಯ

ಚಲನಚಿತ್ರ ಪ್ರಭಾವಿ ಮಾಧ್ಯಮ: ಗುಣಮಟ್ಟದ ಚಿತ್ರಗಳು ಬಂದರೆ ಸಮಾಜಕ್ಕೆ ಉಪಯುಕ್ತ- ಸಿಎಂ ಸಿದ್ದರಾಮಯ್ಯ

ಚಲನಚಿತ್ರ ಬಹಳ ಪ್ರಭಾವಿ ಮಾಧ್ಯಮವಾಗಿದ್ದು, ಗುಣಮಟ್ಟದ ಚಿತ್ರಗಳು ತೆರೆ ಮೇಲೆ ಬಂದರೆ ಸಮಾಜಕ್ಕೆ ಉಪಯುಕ್ತವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಮೈಸೂರು: ಚಲನಚಿತ್ರ ಬಹಳ ಪ್ರಭಾವಿ ಮಾಧ್ಯಮವಾಗಿದ್ದು, ಗುಣಮಟ್ಟದ ಚಿತ್ರಗಳು ತೆರೆ ಮೇಲೆ ಬಂದರೆ ಸಮಾಜಕ್ಕೆ ಉಪಯುಕ್ತವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಲಾಮಂದಿರದಲ್ಲಿ  ನಾಡಹಬ್ಬ ಮೈಸೂರು ದಸರಾ ಮಹೋತ್ಸವದ  ಅಂಗವಾಗಿ ಆಯೋಜಿಸಿದ್ದ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿಗೆ ಸಂಬಂಧಿಸಿದ ಮೌಲ್ಯಗಳನ್ನು ಒಳಗೊಂಡಿರುವ ಸಿನಿಮಾಗಳು ಬಂದರೆ ಸಮಾಜಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ. ಆದ್ದರಿಂದ ಗುಣಮಟ್ಟದ ಚಿತ್ರಗಳನ್ನು ಕೊಡುವುದು ಅತ್ಯಗತ್ಯವಾಗಿದೆ ಎಂದರು. 

ನಮ್ಮಲ್ಲಿ ಬಹಳ ಉತ್ತಮ ಸಿನಿಮಾಗಳು ಬಂದಿವೆ. ಅನೇಕ ಚಿತ್ರಗಳು ವರ್ಷಗಟ್ಟಲೇ ಪ್ರದರ್ಶನ ಕಂಡಿವೆ. ಗುಣಮಟ್ಟದ ಚಿತ್ರ ನೀಡುವ ಎಲ್ಲಾ ಚಿತ್ರರಂಗದವರಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ, ಇಂತಹ ಸಿನಿಮಾ ನೀಡುವವರಿಗೆ ಸರ್ಕಾರದಿಂದ ಸಹಾಯ- ಸಹಕಾರವನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು. 

ಚಲನಚಿತ್ರ ಪ್ರೇಮಿಗಳಿಗೆ ಇದೊಂದು ಸುವರ್ಣ ಅವಕಾಶ. 7 ದಿನಗಳ ಕಾಲ ನಗರದ ಐನಾಕ್ಸ್ ಮತ್ತು ಡಿ ಆರ್ ಸಿ ಮಾಲ್ ನಲ್ಲಿ ಉತ್ತಮ ಚಲನ ಚಿತ್ರಗಳು ಪ್ರದರ್ಶನ ಆಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಸರ್ಕಾರದ ವತಿಯಿಂದ ಎಂದು ಹೇಳಿದರು.

ಕನ್ನಡದ ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಜನ್ಮದಿನದ ಪ್ರಯುಕ್ತ ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅವರಿಗೆ ಸನ್ಮಾನ ಮಾಡುವುದರ ಜೊತೆಗೆ ನರಸಿಂಹ ರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು. ಇದೇ ಸಮಯದಲ್ಲಿ ಚಲನಚಿತ್ರೋತ್ಸವದ ವಿಶೇಷ ಮಾಹಿತಿಗಳನ್ನೊಳಗೊಂಡ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಖ್ಯಾತ ಚಿತ್ರನಟ ಡಾರ್ಲಿಂಗ್ ಕೃಷ್ಣ,  ಮೈಸೂರಿನ ಚಲನಚಿತ್ರೋತ್ಸವ ದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ನನ್ನ ಊರು ಮೈಸೂರು ಆದಕಾರಣ ನನ್ನ ಕಲೆಗೆ ಮೈಸೂರು ಅತ್ಯುತ್ತಮ ವೇದಿಕೆಯನ್ನು ಮಾಡಿಕೊಟ್ಟಿತ್ತು. ನನಗಷ್ಟೇ ಅಲ್ಲದೆ ಹಲವು ಕಲೆಗಾರರಿಗೆ ಮೈಸೂರಿನ ದಸರಾ ಉಪಯುಕ್ತವಾಗಿದೆ ಹಾಗೂ ಸಿನಿಮಾಗಳು ಕೇವಲ ಮನರಂಜನೆ ಅಷ್ಟೇ ಅಲ್ಲದೆ ಸಮಾಜ ಉತ್ತಮ ಸಂದೇಶ ನೀಡುತ್ತಾ ಬಂದಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ, ಮಹಾಪೌರರಾದ ಶಿವಕುಮಾರ್, ಶಾಸಕರಾದ  ಡಾ.ತಿಮ್ಮಯ್ಯ, ಎ.ಅರ್.ಕೃಷ್ಣಮೂರ್ತಿ, ರವಿಶಂಕರ್, ಅನಿಲ್ ಚಿಕ್ಕಮಾದು, ಶ್ರೀವತ್ಸ, ಚಿತ್ರನಟ  ನಟಿಯರಾದ ಮಿಲನ ನಾಗರಾಜ್, ಸುಧಾ ನರಸಿಂಹರಾಜು,‌ ಮಾನ್ವಿತ ಕಾಮತ್ , ವೈಭವಿ ಶಾಂಡಿಲ್ಯ, ಮಯೂರಿ  ಸೇರಿದಂತೆ ಇತರರು ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT