ರಾಜ್ಯ

ಚಂದ್ರಯಾನ-3 ಯಶಸ್ವಿ: ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು 26 ದಿನ ಪಾದಯಾತ್ರೆ ಮಾಡಿದ ಗಾಂಧಿವಾದಿ ಕರುಪ್ಪಯ್ಯ!

Manjula VN

ಬೆಂಗಳೂರು: ಚಂದ್ರಯಾನ-3 ಯಶಸ್ವಿಗೊಳಿಸಲು ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ಸಲುವಾಗಿ ಗಾಂಧಿವಾದಿ ಎಂ ಕರುಪ್ಪಯ್ಯ ಅವರು, 26 ದಿನಗಳ ಪಾದಯಾತ್ರೆಯೊಂದಿಗೆ ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಬೆಂಗಳೂರಿಗೆ ಬಂದಿದ್ದಾರೆ.

ಈಗಾಗಲೇ 400 ಕಿಲೋಮೀಟರ್ ಕಾಲ್ನಡಿಗೆ ಕ್ರಮಿಸಿರುವ ಅವರು, ತಮ್ಮ ಪ್ರಯಾಣದುದ್ದಕ್ಕೂ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ದೇಶಭಕ್ತಿ, ಗಾಂಧಿ ತತ್ವಗಳು, ಪರಿಸರ ಸಂರಕ್ಷಣೆ ಕುರಿತು ಸ್ಥಳೀಯ ನಿವಾಸಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂದೇಶ ನೀಡುತ್ತಿದ್ದಾರೆ.

ಸೆಪ್ಟೆಂಬರ್ 21ರಂದು ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಅಲತ್ತೂರ್ ಗ್ರಾಮದಿಂದ ಕಾಲ್ನಡಿಗೆ ಆರಂಭಿಸಿದ್ದೆ. ಪರಿಸರ ನಾಶದಿಂದ ಮುಂದಾಗುವ ಹಾನಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಇದೇ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಂದೇಶವನ್ನು ಜನರಿಗೆ, ವಿಶೇಷವಾಗಿ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾನೆ.

ಕರುಪ್ಪಯ್ಯ ಅವರು ಈಗಾಗಲೇ ಹಲವು ಪಾದಾಯಾತ್ರೆಗಳನ್ನು ಮಾಡಿದ್ದು, ಗಾಂಧೀಜಿ ತತ್ತ್ವಗಳನ್ನು ಜನರಗಿಗೆ ತಿಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಿರುಪುರದಿಂದ ತುಮಕೂರು', 'ಭಾರತ-ಪಾಕಿಸ್ತಾನ ಗಡಿ (ವಾಘಾ) ಯಾತ್ರೆ' ಮತ್ತು 'ಈರೋಡ್‌ನಿಂದ ಹೈದರಾಬಾದ್' ಯಾತ್ರೆಗಳನ್ನು ಮಾಡಿದ್ದಾರೆ. ಸೈಕಲ್ ಮೂಲಕ 1 ಲಕ್ಷ ಕಿಮೀ ಕ್ರಮಿಸಿದ ಕೀರ್ತಿ ಕರುಪ್ಪಯ್ಯ ಅವರದ್ದು.

“ಇಸ್ರೋದ ವಿಜ್ಞಾನಿಗಳು ಮಿಷನ್ ಯಶಸ್ವಿಯಾಗಲು ಹಗಲಿರುಳು ಶ್ರಮಿಸಿದ್ದಾರೆ. ಅವರನ್ನು ಖುದ್ದಾಗಿ ಭೇಟಿ ಮಾಡಿ, ನಮಸ್ಕರಿಸಿ ಅವರನ್ನು ಪ್ರೇರೇಪಿಸಲು ಬಯಸುತ್ತಿದ್ದೇನೆಂದು ಕರುಪ್ಪಯ್ಯ ಅವರು ಹೇಳಿದ್ದಾರೆ.

ಸೆಪ್ಟೆಂಬರ್ 21 ರಂದು ತಿರುಚ್ಚಿಯಿಂದ ಆರಂಭವಾದ ಯಾತ್ರೆಯು ಕರ್ನಾಟಕ ಪ್ರವೇಶಿಸುವ ಮೊದಲು ಕರೂರ್, ನಾಮಕ್ಕಲ್, ಸೇಲಂ, ಧರ್ಮಪುರಿ, ಕೃಷ್ಣಗಿರಿ ಮತ್ತು ತಮಿಳುನಾಡಿನ ಹೊಸೂರುಗಳಲ್ಲಿ ಸಂಚರಿಸಿ ಭಾನುವಾರ ಬೆಂಗಳೂರು ತಲುಪಿತು.

ಇಂದು ಕರುಪ್ಪಯ್ಯ ಅವರು ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ಅವಕಾಶ ಪಡೆದುಕೊಂಡಿದ್ದು, ತ್ರಿವರ್ಣ ಧ್ವಜ ಹಿಡಿದು ವಿಜ್ಞಾನಿಗಳಿಗೆ ಸೆಲ್ಯೂಟ್ ಹೊಡೆಯಲಿದ್ದಾರೆ.

SCROLL FOR NEXT