ರಾಜ್ಯ

ನೆಲಮಂಗಲ: ಮಹಿಳಾ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಆತ್ಮಹತ್ಯೆ

Nagaraja AB

ನೆಲಮಂಗಲ: ಕಬ್ಬಡಿ ಆಟಗಾರ್ತಿ ಧನಲಕ್ಷ್ಮಿ(25)  ನೆಲಮಂಗಲದ ಆದರ್ಶನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಧನಲಕ್ಷ್ಮಿ ಬುಧವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆಕೆ ತಂದೆ ಮನೆಯಲ್ಲಿರುವಾಗಲೇ ರೂಮ್ ನಲ್ಲಿ ನೇಣು ಬಿಗಿದುಕೊಂಡಿದ್ದು, ಅನುಮಾನಗೊಂಡ ತಂದೆ ರೋಮ್ ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಹಾಸನ ಮೂಲದವರಾದ ಧನಲಕ್ಷ್ಮಿಯ ಕುಟುಂಬ ಆಕೆಯನ್ನು ಕಂಪ್ಯೂಟರ್ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ (ಎಂಸಿಎ) ಮಾಡಿಸಲು ಬೆಂಗಳೂರಿಗೆ ಬಂದಿದ್ದರು.  ನಂತರ ಆಕೆ ಕಾಡುಗೋಡಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಐದು ವರ್ಷಗಳಿಂದ ಅರಿಶಿನಕುಂಟೆಯ ಆದರ್ಶನಗರದಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು.

"ದಸರಾ ಜಂಬೂ ಸವಾರಿ ವೀಕ್ಷಿಸಲು ತನ್ನ ಸ್ನೇಹಿತರೊಂದಿಗೆ ಮೈಸೂರಿಗೆ ತೆರಳಿದ್ದ ಆಕೆ ಎರಡು ದಿನಗಳ ಹಿಂದೆ ವಾಪಸಾಗಿದ್ದಳು. ಬೆಳಗ್ಗೆ ಆಕೆ ಚೆನ್ನಾಗಿಯೇ ಇದ್ದಳು. ಇಂತಹ  ಹೆಜ್ಜೆ ಇಡುವ ಲಕ್ಷಣಗಳು ಕಾಣಿಸಿರಲಿಲ್ಲ. ಸಂಜೆ 4 ಗಂಟೆ ಸುಮಾರಿಗೆ  ಆಕೆ ನೇಣು ಬಿಗಿದುಕೊಂಡಿರುವುದನ್ನು ಕಂಡ ತಂದೆ, ಕೆಳಗಿಳಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲವಾದರೂ, ಧನಲಕ್ಷ್ಮಿ ಅವರ ಈ ನಿರ್ಧಾರಕ್ಕೆ ಸಂಭವನೀಯ ಕಾರಣ ಏನು ಎಂಬುದನ್ನು ಆಕೆಯ ಪೋಷಕರು ಬಹಿರಂಗಪಡಿಸುತ್ತಿಲ್ಲ. ಕಾರಣ  ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ನೆಲಮಂಗಲ ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT