ರಾಜ್ಯ

ನವಜಾತ ಶಿಶುಗಳಿಗೆ ಆಂಬ್ಯುಲೆನ್ಸ್ ಸೇವೆ: ಟೆಲಿ-ಎನ್‌ಐಸಿಯು ಸೇವೆ ಆರಂಭಿಸಿದ ಸರ್ಕಾರ!

Manjula VN

ಬೆಂಗಳೂರು: ರಾಜ್ಯದಲ್ಲಿ ನವಜಾತ ಶಿಶುಗಳ ಆರೈಕೆ ಸೇವೆಗಳನ್ನು ಸುಧಾರಿಸುವ ಉದ್ದೇಶದಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಬೆಂಗಳೂರಿನಲ್ಲಿ ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸರ್ವೀಸ್ - ನಿಯೋನಾಟಲ್ ಕೇರ್ ಆನ್ ವೀಲ್ಸ್ (MARS-NOW) ಗೆ ಚಾಲನೆ ನೀಡಿದರು.

ಬೆಂಗಳೂರು ಮತ್ತು ನಗರದ ಹೊರವಲಯದಲ್ಲಿ ನವಜಾತ ಶಿಶುಗಳ ಆರೈಕೆಗಾಗಿ ಈ ಆ್ಯಂಬುಲೆನ್ಸ್ ಸೇವೆಗಳನ್ನು ಪ್ರಾರಂಭಿಸಲಾಗಿದೆ.

ಆ್ಯಂಬುಲೆನ್ಸ್ ಗಳಲ್ಲಿ ಶಿಶು ಇನ್ಕ್ಯುಬೇಟರ್‌ಗಳು, ಹೃದಯ ಮತ್ತು ಶ್ವಾಸಕೋಶದ ಮಾನಿಟರ್‌ಗಳು, ಹೈ ಫ್ರೀಕ್ವೆನ್ಸಿ, ವೆಂಟಿಲೇಟರ್‌ಗಳು, ನೈಟ್ರಿಕ್ ಆಕ್ಸೈಡ್ ಅಡ್ಮಿನಿಸ್ಟ್ರೇಷನ್, ಬ್ಲಾಂಕೆಟ್ ವಾರ್ಮರ್‌ಗಳು ಮತ್ತು ಸುಗಮ ಪ್ರಯಾಣಕ್ಕಾಗಿ ಅಗತ್ಯ ಸೇವೆಗಳನ್ನು ಇರಿಸಲಾಗಿದೆ. ತುರ್ತು ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಮಕ್ಕಳ ಆರೋಗ್ಯ ಕಾಪಾಡಲು ಇದು ಸಹಾಯ ಮಾಡುತ್ತವೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.

ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಖಾಸಗಿ ವಲಯದೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಸರ್ಕಾರ ಮುಕ್ತವಾಗಿದೆ ಎಂದು ತಿಳಿಸಿದರು.

ಮಣಿಪಾಲ್ ಆಸ್ಪತ್ರೆಯು ಸಹಾಯವಾಣಿ (080-22221111) ಸೇವೆಯನ್ನು ಪ್ರಾರಂಭಿಸಿದ್ದು, ಇದನ್ನು ಕಡಿಮೆ ಸೌಲಭ್ಯವಿರುವ ಖಾಸಗಿ ಆಸ್ಪತ್ರೆಗಳು ಕೂಡ ಬಳಕೆ ಮಾಡಬಹುದು. MARS-NOW ಮೂಲಕ ಮಕ್ಕಳನ್ನು ಆಸ್ಪತ್ರೆಗಳಿಗೆ ದಾಖಲಿಸಬಹುದು ಎಂದರು.

SCROLL FOR NEXT