ಸಾಂದರ್ಭಿಕ ಚಿತ್ರ 
ರಾಜ್ಯ

ಯಾದಗಿರಿ: ಆಸ್ತಿಗಾಗಿ ಐದು ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷವಿಟ್ಟು ಕೊಂದ ಮಲತಾಯಿ ಬಂಧನ

ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಮಲತಾಯಿ ಕೊಂದ ಘಟನೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಈಚೆಗೆ ಜರುಗಿದೆ.

ಯಾದಗಿರಿ: ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಮಲತಾಯಿ ಕೊಂದ ಘಟನೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಈಚೆಗೆ ಜರುಗಿದೆ.

ದೇವಮ್ಮ ಚೆಟ್ಟಿಗೇರಿ, ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ ಮಲತಾಯಿಯಾಗಿದ್ದಾರೆ‌. ಸಂಗೀತಾ ಚೆಟ್ಟಿಗೇರಿ ಸಾವನ್ನಪ್ಪಿದ ಐದು ತಿಂಗಳ ಹಸುಗೂಸು. ಆಗಸ್ಟ್ 30 ರಂದು ಬಬಲಾದ ಗ್ರಾಮದಲ್ಲಿ ಘಟನೆ ಜರುಗಿದೆ.

ಈ ಘಟನೆ ಆಗಸ್ಟ್ 30ರಂದು ಬಬಲಾದ ಗ್ರಾಮದಲ್ಲಿ ನಡೆದಿದೆ. ದೇವಮ್ಮ ಚೆಟ್ಟಿಗೇರಿ ಆರೋಪಿಯಾಗಿದ್ದು, ಈಕೆ ಹಸುಗೂಸು ಸಂಗೀತಾ ಚೆಟ್ಟಿಗೇರಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ್ದಾಳೆ.

ಮೃತ ಹಸುಗೂಸು ಸಂಗೀತಾಳಿಗೆ ತಾಯಿ ಶ್ರೀದೇವಿ ಹಾಲು ಕುಡಿಸುತ್ತಿದ್ದಾಗ ಅಲ್ಲಿಗೆ ಬಂದ ದೇವಮ್ಮ, ತಾನು ಹಾಲುಣಿಸುತ್ತೇನೆ ಅಂತಾ ಕರೆದೊಯ್ದಿದ್ದಾಳೆ. ಹೀಗೆ ರೂಮಿಗೆ ಕರೆದೊಯ್ದು ಡೋರ್ ಹಾಕಿ ಹಾಲಿನ ಬಾಟಲಿಯಲ್ಲಿ ವಿಷ ಬೆರೆಸಿ ಕೂಸಿಗೆ ಕೊಟ್ಟಿದ್ದಾಳೆ.

ವಿಷಬೆರೆತ ಹಾಲು ಕುಡಿದ ಮೂರು ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹಸಗೂಸು ಸಂಗೀತಾ ಸಾವನ್ನಪ್ಪಿದ್ದಾಳೆ. ಆರೋಪಿ ದೇವಮ್ಮಳನ್ನು ವಡಗೇರಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ‌.

ಹಸಗೂಸಿನ ತಂದೆ ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎರಡು ಮದುವೆಯಾಗಿದ್ದರು. 11 ವರ್ಷಗಳ ಹಿಂದೆ ಮೊದಲು ಶ್ರೀದೇವಿಯವರನ್ನು ಮದುವೆಯಾಗಿದ್ದರು. ಮಕ್ಕಳಾಗದ ಕಾರಣ ಕಳೆದ‌ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದರು. ದೇವಮ್ಮಳನ್ನ ಮದುವೆಯಾದ ನಂತರ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತಮ್ಮ ತವರು ಮನೆಯಲ್ಲಿ ಶ್ರೀದೇವಿ ವಾಸವಾಗಿದ್ದಳು.

ಹಿರಿಯರ ರಾಜಿ ಸಂಧಾನದ ನಂತರ ಕಳೆದ ಮೂರು ವರ್ಷಗಳ ಹಿಂದೆ ಬಬಲಾದ ಗ್ರಾಮದ ಗಂಡನ ಮನೆಯಲ್ಲಿದ್ದರು. ಶ್ರೀದೇವಿಯವರಿಗೆ ಕಳೆದ ಐದು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದರು. ಹೀಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಐದು ತಿಂಗಳ ಮಗಳು ಸಂಗೀತಾಗೆ ಪಾಲು ಹೋಗುತ್ತದೆ ಎಂದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‌ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT