ರಾಜ್ಯ

ನಿಮ್ಮ ನೆರವಿಗೆ ಸರ್ಕಾರವಿದೆ, ಪ್ರತಿಭಟನೆ ಕೈಬಿಡಿ; ಪ್ರತಿಭಟನಾನಿರತ ರೈತರಿಗೆ ಕೃಷಿ ಸಚಿವ ಮನವಿ

Manjula VN

ಮೈಸೂರು: ನೆರೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಮಂಗಳವಾರ ಭೇಟಿ ಮಾಡಿದರು.

ಸಚಿವ ಚೆಲುವರಾಯಸ್ವಾಮಿ ಮತ್ತು ಮಂಡ್ಯ ಶಾಸಕ ರವಿಕುಮಾರ್ ಅವರು, ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆ ಬಳಿ ಧರಣಿ ಕುಳಿತಿದ್ದ ರೈತ ಹಿತರಕ್ಷಣಾ ಸಂಘಟನೆಯ ಸದಸ್ಯರನ್ನು ಭೇಟಿಯಾದರು. ಈ ವೇಳೆ ಪ್ರತಿಭಟನಾನಿರತರ ಮನವೊಲಿಸಲುವ ಪ್ರಯತ್ನ ಮಾಡಿದರು.

ರೈತರು ತಾಳ್ಮೆಯಿಂದ ಇರಬೇಕು. ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ರಾಜ್ಯ ಸಲ್ಲಿಸಿರುವ ಅರ್ಜಿ ಬುಧವಾರ ಸುಪ್ರೀಂ ಕೋರ್ಟ್‌ಗೆ ಮುಂದೆ ವಿಚಾರಣೆಗೆ ಬರಲಿದೆ. ಕಾವೇರಿ ಜಲಾನಯನ ಪ್ರದೇಶದ ವಾಸ್ತವಿಕ ಪರಿಸ್ಥಿತಿಯನ್ನು ನಾವು ನ್ಯಾಯಾಲಯಕ್ಕೆ ತಿಳಿಸಿದ್ದು, ತೀರ್ಪು ನಮ್ಮ ಪರವಾಗಿ ಬರಬೇಕೆಂದು ಪ್ರಾರ್ಥಿಸುತ್ತಿದ್ದೇವೆ.

ಸರ್ಕಾರ ರೈತರ ನೆರವಿಗೆ ನಿಲ್ಲಲಿದ್ದು, ರೈತರು ಪ್ರತಿಭಟನೆ ನಡೆಸಬಾರದು ಎಂದು ಸಚಿವ ಚಲುರಾಯಸ್ವಾಮಿಯವರು ಮನವಿ ಮಾಡಿಕೊಂಡರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಒಗ್ಗಟ್ಟಿನಿಂದ ಹೋರಾಟಬೇಕೆಂದು ಕರೆ ನೀಡಿದ್ದಾರೆ. ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಎಲ್ಲಾ ರಾಜೀಯ ಪಕ್ಷಗಳೂ ತಿಳಿಸಿವೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿರುವ ಸರ್ವಪಕ್ಷಗಳ ನಿಯೋಗ ಸಂಕಷ್ಟ ಸೂತ್ರಕ್ಕಾಗಿ ಮನವಿ ಸಲ್ಲಿಸಲಿದೆ. ಹೇಮಾವತಿ, ಕೆಆರ್‌ಎಸ್, ಕಬಿನಿ ಜಲಾಶಯಗಳ ಬಳಿಯಿರುವ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.

SCROLL FOR NEXT