ರಾಜ್ಯ

ಸನಾತನ ಎಂದರೆ ಶಾಶ್ವತ ಎಂದರ್ಥ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಿ: ನಿರ್ಮಲಾನಂದ ಸ್ವಾಮೀಜಿ

Manjula VN

ಮೈಸೂರು: ಸನಾತನ ಎಂದರೆ ಶಾಶ್ವತ ಎಂದರ್ಥ, ಅಂದರೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಬೇಕೆಂದು ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

ಮೈಸೂರಿನ ಆದಿಚುಂಚನಗಿರಿಯ ಶಾಖಾಮಠದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿದರು.

ಯದಾ ಯದಾ ಹಿ ಧರ್ಮಸ್ಯ ಎಂಬ ಶ್ಲೋಕವನ್ನು ಉಲ್ಲೇಖಿಸಿದ ನಿರ್ಮಲಾನಂದನಾಥ ಸ್ವಾಮೀಜಿಗಳು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.

ಸನಾತನ ಎಂದರೆ ಶಾಶ್ವತ ಎಂದರ್ಥ. ನಾವು ಧರ್ಮಗಳ ಮೂಲವನ್ನು ನೋಡಿದರೆ, ಇಸ್ಲಾಂ ಧರ್ಮವು 1,600 ವರ್ಷಗಳ ಇತಿಹಾಸವನ್ನು ಹೊಂದಿದೆ, ಕ್ರಿಶ್ಚಿಯನ್ ಧರ್ಮ 2,000 ವರ್ಷಗಳಿಗಿಂತ ಹೆಚ್ಚು ಮತ್ತು ಬೌದ್ಧ ಮತ್ತು ಜೈನ ಧರ್ಮ 2,500 ವರ್ಷಗಳಿಗಿಂತ ಹೆಚ್ಚು ಇತಿಹಾಸವನ್ನು ಹೊಂದಿದೆ. ಆನಂತರ ಸಿಖ್ ಮತ್ತು ಯಹೂದಿ ಧರ್ಮಗಳು ಬಂದವು. ಆದರೆ,  ಶ್ರೀಕೃಷ್ಣನು ಮಹಾಭಾರತದಲ್ಲಿಯೂ ಧರ್ಮವನ್ನು ಉಲ್ಲೇಖಿಸಿದ್ದಾನೆ. ಅದರ ಬಗ್ಗೆ ಅನೇಕ ಉಲ್ಲೇಖಗಳಿವೆ. ಆದ್ದರಿಂದ ಹಿಂದೂ ಧರ್ಮ ಪುರಾತನವಾದುದು ಎಂಬ ಪುರಾವೆಗಳು ಹಿಂದೂ ಧರ್ಮದ ಬಗೆಗಿನ ಉಲ್ಲೇಖ. ಹಿಂದೂ ಧರ್ಮ ಸನಾತನ ಅಥವಾ ಪುರಾತನ ಎಂಬುದಕ್ಕೆ ಸಾಕ್ಷಿ ಇದೆ. ಪ್ರಪಂಚದಲ್ಲಿ ಎಲ್ಲಾ ವ್ಯಕ್ತಿಗಳು ವಿಭಿನ್ನವಾಗಿರುತ್ತಾರೆ.

ಅದೇ ರೀತಿ ಎಲ್ಲರಿಗೂ ಬದುಕಲು ಆಮ್ಲಜನಕ ಬೇಕೇಬೇಕು. ಆಮ್ಲಜನಕ ಇಲ್ಲದೇ ಹೋದರೆ ಮನುಷ್ಯ ಏನಾಗುತ್ತಾನೆ ಊಹಿಸಿ ಎಂದು ಹೇಳುವ ಮೂಲಕ ಸನಾತನ ಧರ್ಮ ಎಲ್ಲಾ ಧರ್ಮಗಳಿಗೂ ಪುರಾತನವಾದುದು ಎಂದು ಹೇಳಿದರು.

ಸನಾತನ ಪದಕ್ಕೆ ಶಾಶ್ವತ ಎನ್ನುವ ಅರ್ಥವಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು. ಬಳಸುವ ಪದದ ಮೇಲೆ ನಿಗಾ ಇರಬೇಕು. ಸನಾತನ ಪದಕ್ಕೆ ಇಂಗ್ಲಿಷ್​ನಲ್ಲಿ ಪುರಾತನ ಎಂಬ ಅರ್ಥ ಇದೆ. ಸನಾತನ ಎಂಬುವುದಕ್ಕೆ ಶಾಶ್ವತ ಎಂಬ ವ್ಯಾಖ್ಯಾನವು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಈ ಪದ ಮತ್ತೊಂದು ರೀತಿ ಪುರಾತನ ಎಂಬ ಅರ್ಥ ಕೊಡುತ್ತದೆ.

ಇದರ ಜೊತೆಗೆ ಹಿಂದೂ ಧರ್ಮದ ಪರವಾಗಿ ಸ್ವಾಮೀಜಿಗಳು ಒಟ್ಟಾಗಿ ಹೋರಾಟ ಮಾಡುವ ಬಗ್ಗೆ, ಪ್ರತ್ಯೇಕವಾಗಿ ಸಭೆ ಕರೆಯುವ ಅನಿವಾರ್ಯತೆ ಬರಬಹುದು. ಆಗ ನಾವೆಲ್ಲ ಒಟ್ಟಾಗಿ ಕುಳಿತು ಚರ್ಚೆ ನಡೆಸೋಣ ಎಂದು ತಿಳಿಸಿದರು.

ಇದೇ ವೇಳೆ ತಾವೇ ಈ ಸಭೆಯ ಮುಂದಾಳತ್ವ ವಹಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಶ್ರೀಗಳು ಮೌನವಹಿಸಿದರು‌. ಇದರ ಜೊತೆಗೆ ಧರ್ಮದ ಬಗ್ಗೆ ತಿಳಿದುಕೊಳ್ಳದವನು, ತಮ್ಮ ಧರ್ಮದ ಬಗ್ಗೆಯೂ ಮಾತನಾಡುತ್ತಾನೆ. ಇತರ ಧರ್ಮದ ಬಗ್ಗೆಯೂ ಮಾತನಾಡುತ್ತಾನೆ. ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಬೇರೊಂದು ಧರ್ಮಕ್ಕೆ ಸೆಳೆಯಲು ಸಾಧ್ಯವಿಲ್ಲ. ನಾಡನ್ನಾಳುವ ದೊರೆಗೆ ಪ್ರಜೆಗಳ ಧಾರ್ಮಿಕತೆಯನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಟಾಂಗ್ ನೀಡಿದರು.

ಇದೇ ತಿಂಗಳ 10 ಮತ್ತು 11ನೇ ತಾರೀಖು, ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ನೂತನ ಕಟ್ಟಡಗಳು ಲೋಕಾರ್ಪಣೆ ಆಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ‌.ದೇವೇಗೌಡ ಭಾಗವಹಿಸಲಿದ್ದಾರೆ. ಎರಡನೇ ದಿನ ಸೆಪ್ಟೆಂಬರ್ 11 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ. ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್ ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

SCROLL FOR NEXT