ಕೇಂಪೇಗೌಡ ಇಂಟರ್ನಾಷನಲ್ ಏರ್ ಪೋರ್ಟ್ 
ರಾಜ್ಯ

ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂರನೇ ಟರ್ಮಿನಲ್ 2030ಕ್ಕೆ ಸಿದ್ಧ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) 2030ರಲ್ಲಿ ತನ್ನ ಆವರಣದೊಳಗೆ ಮೂರನೇ ಟರ್ಮಿನಲ್ ನ್ನು ಹೊಂದಲಿದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ವಿಮಾನ ನಿಲ್ದಾಣದ ನಿರ್ವಾಹಕರ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ತಿಳಿಸಿದ್ದಾರೆ. 

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (KIA) 2030ರಲ್ಲಿ ತನ್ನ ಆವರಣದೊಳಗೆ ಮೂರನೇ ಟರ್ಮಿನಲ್ ನ್ನು ಹೊಂದಲಿದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ವಿಮಾನ ನಿಲ್ದಾಣದ ನಿರ್ವಾಹಕರ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ತಿಳಿಸಿದ್ದಾರೆ. 

ನಿನ್ನೆ ಮಂಗಳವಾರ ಟರ್ಮಿನಲ್ 2 ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಪ್ರಾರಂಭಿಸುವ ಹೊತ್ತಿನಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್- TNIE ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ಟಿ2 ನ ಮೊದಲ ಹಂತವು ವಾರ್ಷಿಕವಾಗಿ 25 ಮಿಲಿಯನ್ ಪ್ರಯಾಣಿಕರನ್ನು ಪೂರೈಸುವ ನಿರೀಕ್ಷೆಯಿದೆ, ಅದರಲ್ಲಿ 10 ಮಿಲಿಯನ್ ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಉಳಿದವರು ದೇಶೀಯ ಪ್ರಯಾಣಿಕರಾಗಿದ್ದಾರೆ.  

"ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ವಾರ್ಷಿಕವಾಗಿ ಕೇವಲ 35 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತದೆ.ಟರ್ಮಿನಲ್ 2ರಲ್ಲಿ ಈ ಅಂಕಿ ಅಂಶವನ್ನು ಹೆಚ್ಚುವರಿ 25 ಮಿಲಿಯನ್ ಹೆಚ್ಚಿಸಲಾಗುವುದು, ಇದರಿಂದಾಗಿ ಒಟ್ಟಾರೆ ಸಾಮರ್ಥ್ಯ ವಾರ್ಷಿಕವಾಗಿ ಸುಮಾರು 60 ಮಿಲಿಯನ್ ಪ್ರಯಾಣಿಕರಿಗೆ ಏರಿಕೆಯಾಗುತ್ತದೆ'' ಎಂದರು. 

ಪ್ರತಿದಿನ ಸರಾಸರಿ 1 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಾರೆ, ಅವರಲ್ಲಿ ಸುಮಾರು 15,000 ಅಂತಾರಾಷ್ಟ್ರೀಯ ಪ್ರಯಾಣಿಕರು ಇದ್ದಾರೆ, ಈಗ ಹೊಸ ಟರ್ಮಿನಲ್ ಅಂತಾರಾಷ್ಟ್ರೀಯ ವಿಮಾನಗಳಿಗೆ ಕ್ರಿಯಾತ್ಮಕವಾಗಿರುವುದರಿಂದ ಅಂತಾರಾಷ್ಟ್ರೀಯ ಸಂಚಾರ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

"ಟರ್ಮಿನಲ್ 1ನ್ನು ಶೀಘ್ರದಲ್ಲೇ ನವೀಕರಿಸಲಾಗುವುದು" ಎಂದ ಅವರು, ಇಂಡಿಗೋ, ಆಕಾಶ ಏರ್, ಅಲಯನ್ಸ್ ಏರ್ ಮತ್ತು ಸ್ಪೈಸ್‌ಜೆಟ್‌ಗಳು ಟರ್ಮಿನಲ್ 1ರಿಂದ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದರೆ, ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್ ಮತ್ತು ವಿಸ್ತಾರಾದ ದೇಶೀಯ ಕಾರ್ಯಾಚರಣೆಗಳನ್ನು ಟಿ2 ನಿರ್ವಹಿಸುತ್ತದೆ.

ಹೊಸ ಅಂತರ್ಗತ ಮಾರ್ಗಗಳು: ಟರ್ಮಿನಲ್ 2ರ ನಿರ್ವಹಣಾ ಮುಖ್ಯಸ್ಥ ಸಂಪ್ರೀತ್ ಕೋಟ್ಯಾನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಟರ್ಮಿನಲ್ 2 ಭಾರತದಾದ್ಯಂತ ಪ್ರಯಾಣಿಕರನ್ನು ಸೆಳೆದಿದೆ. ಟಿ2ಗೆ ಪ್ರತಿಕ್ರಿಯೆ ನಿಜವಾಗಿಯೂ ಉತ್ತೇಜನಕಾರಿಯಾಗಿದೆ ಮತ್ತು ಭರವಸೆ ನೀಡಿದೆ. ಬಹಳಷ್ಟು ಜನರು ವಾಸ್ತವವಾಗಿ ಬೆಂಗಳೂರಿನ ಮೂಲಕ ತಮ್ಮ ಅಂತಾರಾಷ್ಟ್ರೀಯ ಟಿಕೆಟ್‌ಗಳನ್ನು ಬುಕ್ ಮಾಡಲು ಪ್ರಾರಂಭಿಸಿದ್ದಾರೆ ಇದರಿಂದ ಈ ಹೊಸ ಟರ್ಮಿನಲ್ ನ್ನು ನೋಡಬಹುದು, ಇದು ನಮಗೆ ತುಂಬಾ ಉತ್ತೇಜನಕಾರಿಯಾಗಿದೆ ಎಂದರು. 

ಪ್ರಸ್ತುತ, 27 ವಿಮಾನಯಾನ ಸಂಸ್ಥೆಗಳು ಟರ್ಮಿನಲ್ 2ನಿಂದ ಕಾರ್ಯನಿರ್ವಹಿಸುತ್ತಿವೆ, ಅದರಲ್ಲಿ 25 ಅಂತಾರಾಷ್ಟ್ರೀಯ ಮತ್ತು 2 ದೇಶೀಯ ವಿಮಾನಯಾನ ಸಂಸ್ಥೆಗಳು 33 ಗಮ್ಯಸ್ಥಾನಗಳನ್ನು ಒಳಗೊಂಡಿರುತ್ತವೆ ಎಂದರು. 

ಆಕರ್ಷಣೆ ಕೇಂದ್ರ ಕೆಐಎ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಅನೇಕ ಆಕರ್ಷಣೆಗಳಲ್ಲಿ ವಿಮಾನಗಳು ಲ್ಯಾಂಡಿಂಗ್ ಆಗುವುದು, ಟೇಕ್ ಆಫ್ ಆಗುವುದು, ಉತ್ತರ ರನ್‌ವೇಯಲ್ಲಿ ನಿಲುಗಡೆ ಒಂದು ಅದ್ಭುತ ನೋಟವನ್ನು ನೀಡುತ್ತದೆ. ಟರ್ಮಿನಲ್‌ನ ಹಂತ 3, ನಿರ್ಗಮನ ವಲಯದ ಗೇಟ್ 1 ರ ಸಮೀಪ ವೀಕ್ಷಿಸಲು ಪರಿಪೂರ್ಣ ಸ್ಥಳವಾಗಿದೆ.

ಯಾವುದೇ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ, ಸಂದರ್ಶಕರು ಮತ್ತು ವಿಮಾನಯಾನ ಪ್ರಯಾಣಿಕರು ಸುತ್ತಲೂ ಸುತ್ತಾಡುವುದನ್ನು, ಪ್ರಯಾಣಿಕರು ಸುಂದರವಾಗಿ ಇಲ್ಲಿ ಕ್ಲಿಕ್ಕಿಸುವುದನ್ನು ಕಾಣಬಹುದು. 

ಇಂಡಿಗೋ ವಿಮಾನವನ್ನು ಇಲ್ಲಿ ನಿಲ್ಲಿಸಿರುವುದನ್ನು ಕಾಣಬಹುದು. ಏರ್ ಏಷ್ಯಾ ವಿಮಾನವು ಲ್ಯಾಂಡಿಂಗ್ ಆಗುತ್ತಿರುವಾಗ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನವು ನಿಶ್ಚಲವಾಗಿತ್ತು. ಇಂಡಿಗೋ ವಿಮಾನವು ಅತ್ಯಂತ ವರ್ಣರಂಜಿತ ದೃಶ್ಯಕ್ಕಾಗಿ ಮೇಕಿಂಗ್ ಆಫ್ ಮಾಡಲು ತಯಾರಿ ನಡೆಸುತ್ತಿದೆ.

ಈ ಸ್ಥಳವನ್ನು ತಲುಪುವ ಬಹುತೇಕ ಎಲ್ಲರೂ ವಿಮಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೆಲ್ಫಿಯನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಾರೆ.

“ಈ ಸ್ಥಳವು ಬೆಂಗಳೂರಿಗೆ ದೊಡ್ಡ ಹೆಗ್ಗುರುತಾಗಲಿದೆ. ನಾನು ಭಾರತದ ಎಂಟು ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿದ್ದೇನೆ. ಪುಣೆ ಅಥವಾ ಮಧುರೈನಂತಹ ಸಣ್ಣ ವಿಮಾನ ನಿಲ್ದಾಣಗಳಲ್ಲಿಯೂ ಸಹ ಭೇಟಿ ನೀಡಿದ್ದೇನೆ. ಎಲ್ಲಾ ವಿಮಾನಗಳ ಹತ್ತಿರದ ನೋಟ ನಮಗೆ ಸಿಗುವುದಿಲ್ಲ. ಕೆಂಪೇಗೌಡ ವಿಮಾನ ನಿಲ್ದಾಣವು ಅದ್ಬುತವಾಗಿದೆ ಎಂದರು. 

ಬಿಕಾಂ ವಿದ್ಯಾರ್ಥಿನಿಯಾಗಿರುವ ಸಂಜನಾ ತನ್ನ ತಂದೆ-ತಾಯಿ ಮತ್ತು ಒಡಹುಟ್ಟಿದವರ ಜೊತೆಗೆ ಸಹೋದರಿಯನ್ನು ನೋಡಲು ಬಂದಿದ್ದರು. ನಾನು ಇಷ್ಟು ಸಮೀಪದಲ್ಲಿ ವಿಮಾನಗಳನ್ನು ನೋಡಿಲ್ಲ. ಈ ರೀತಿ ಟೇಕ್ ಆಫ್ ಮತ್ತು ಲ್ಯಾಂಡ್ ಆಗುವುದನ್ನು ನೋಡುವುದು ತುಂಬಾ ರೋಮಾಂಚನಕಾರಿಯಾಗಿದೆ ಎಂದರು. 

ಕೆಲವು ವಾಯುಯಾನ ಉತ್ಸಾಹಿಗಳು ವಿಮಾನದ ಮಾದರಿಯ ಬಗ್ಗೆ ಚರ್ಚಿಸುತ್ತಿದ್ದರು. ಲ್ಯಾಂಡಿಂಗ್ ಮತ್ತು ಟೇಕ್ ಆಫ್‌ನ ವೀಡಿಯೊಗಳನ್ನು ಸೆರೆಹಿಡಿಯುತ್ತಿದ್ದರು. ಸಮೀಪದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರು, “ಬಂದು ನೋಡುವ ಜನರು ಸ್ವಲ್ಪ ಸಮಯದವರೆಗೆ ಕಾಲಹರಣ ಮಾಡಲು ಬಯಸುತ್ತಾರೆ. ಪ್ರತಿಯೊಬ್ಬರೂ ಅದನ್ನು ನಿಜವಾಗಿಯೂ ಆನಂದಿಸುತ್ತಾರೆ ಎಂದರು. 

ನಿರ್ಗಮನದ ಬದಿಯ ಇನ್ನೊಂದು ತುದಿಯು ಮತ್ತೊಂದು ರನ್‌ವೇ, ನ್ಯೂ ಸೌತ್ ಪ್ಯಾರಲಲ್ ರನ್‌ವೇ (RWY 09R/27L) ನ ಉತ್ತಮ ನೋಟವನ್ನು ನೀಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT