ರಾಜ್ಯ

ಮನೆ ಬಾಗಿಲಿಗೆ ಬರಲಿದೆ ಜೀವನದಿ ಕಾವೇರಿ ತೀರ್ಥ ಪೂರೈಕೆ; ಅಂಚೆ ಇಲಾಖೆ ಯೋಜನೆ!

Ramyashree GN

ದಾವಣಗೆರೆ: ತಲಕಾವೇರಿಯ ‘ಬ್ರಹ್ಮಕುಂಡಿಕೆ’ಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಲಿರುವ ಕಾವೇರಿ ತೀರ್ಥವನ್ನು ಪಡೆಯಲು ಜನರು ಇನ್ಮುಂದೆ 'ತುಲಾ ಸಂಕ್ರಮಣ' ದಿನದಂದು ತಲಕಾವೇರಿಗೆ ಧಾವಿಸುವ ಅಗತ್ಯವಿಲ್ಲ. ಏಕೆಂದರೆ, ಭಾರತೀಯ ಅಂಚೆ ಇಲಾಖೆಯು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದತ್ತಿ ಇಲಾಖೆಯ ಸಹಯೋಗದೊಂದಿಗೆ ಕೇವಲ 300 ರೂ. ಗಳಲ್ಲಿ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ‘ಶ್ರೀ ತಲಕಾವೇರಿ ದೇವಸ್ಥಾನದ ಪ್ರಸಾದ’ವನ್ನು ತಲುಪಿಸಲಿದೆ.

ಯಾವುದೇ ಅಂಚೆ ಕಚೇರಿಯಲ್ಲಿ ಇ-ಪಾವತಿ ಮೂಲಕ ಮೊತ್ತವನ್ನು ಪಾವತಿಸಿದರೆ, ಭಕ್ತರು ತಮ್ಮ ಮನೆ ಬಾಗಿಲಿನಲ್ಲೇ ಪ್ರಸಾದವನ್ನು ಪಡೆಯಬಹುದು. ಈ ಪ್ರಸಾದವನ್ನು ಭಾರತೀಯ ಅಂಚೆ ಜಾಲದ ಅಂಚೆ ಕಚೇರಿ ಶಾಖೆಯ ಮೂಲಕ ಯಾವುದೇ ದೂರದ ಮನೆಗಳಿಗೆ ಹಸ್ತಾಂತರಿಸಲಾಗುತ್ತದೆ.

ಈ ಕುರಿತು ಅಂಚೆ ಕಚೇರಿಗಳ ದಾವಣಗೆರೆ ವಿಭಾಗದ ಅಧೀಕ್ಷಕ ಚಂದ್ರಶೇಖರ್ ಟಿಎನ್‌ಐಇ ಜೊತೆಗೆ ಮಾತನಾಡಿ, 'ಭಾರತೀಯ ಅಂಚೆ ಇಲಾಖೆ ಕೈಗೊಂಡಿರುವ ಕಾರ್ಯಕ್ರಮದ ಅಡಿಯಲ್ಲಿ ನಾವು ಭಕ್ತರ ಮನೆ ಬಾಗಿಲಿಗೆ ಪ್ರಸಾದವನ್ನು ಪೂರೈಸುತ್ತಿದ್ದೇವೆ. ಮಂಗಳಕರವಾದ ‘ತುಲಾ ಸಂಕ್ರಮಣ’ದ ಮಹತ್ವವನ್ನು ಅರ್ಥಮಾಡಿಕೊಂಡು, ಭಾರತೀಯ ಅಂಚೆಯು ಭಕ್ತರಿಗೆ ಕಾವೇರಿ ತೀರ್ಥವನ್ನು ಪೂರೈಸುವ ಉಪಕ್ರಮವನ್ನು ತೆಗೆದುಕೊಂಡಿದೆ' ಎಂದು ಅವರು ಹೇಳಿದರು.

ಇದಲ್ಲದೆ, ಭಕ್ತರು ಪ್ರಸಾದವನ್ನು ಕಾಯ್ದಿರಿಸಲು ಹತ್ತಿರದ ಉಪ ಅಂಚೆ ಕಚೇರಿಗಳು ಅಥವಾ ದಾವಣಗೆರೆ ಪ್ರಧಾನ ಅಂಚೆ ಕಚೇರಿಗೆ ಬರಬೇಕು. ನಂತರ ನಮ್ಮ ಪೋಸ್ಟ್‌ಮ್ಯಾನ್‌ಗಳು ಅವರ ಮನೆ ಬಾಲಿಗೆಗೆ ಪ್ರಸಾದವನ್ನು ತಲುಪಿಸಲಿದ್ದಾರೆ ಎಂದು ಅವರು ಹೇಳಿದರು.

SCROLL FOR NEXT