ರಾಜ್ಯ

ನರೇಗಾ ಯೋಜನೆ 100 ರಿಂದ 150 ದಿನಕ್ಕೆ ವಿಸ್ತರಣೆ- ಪ್ರಿಯಾಂಕ್ ಖರ್ಗೆ

Nagaraja AB

ಕಲಬುರಗಿ: ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿರುವುದರಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈಗ ಜನರಿಗೆ ನೀಡಲಾಗುತ್ತಿರುವ  100 ದಿನಗಳ ಉದ್ಯೋಗವನ್ನು 150 ದಿನಗಳಿಗೆ ವಿಸ್ತರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಆವರಿಸಿರುವುದರಿಂದ ಸಹಜವಾಗಿಯೇ ನರೇಗಾ ಯೋಜನೆಯಡಿ ನೀಡುತ್ತಿರುವ ಉದ್ಯೋಗದ ದಿನಗಳ ಪ್ರಮಾಣ ಹೆಚ್ಚಾಗಲಿದೆ ಎಂದರು.

ಈ  ಬಗ್ಗೆ ಚರ್ಚಿಸಲು ಇದೇ 20 ರಂದು ದೆಹಲಿಗೆ ತೆರಳುತ್ತಿದ್ದು, ಅವರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು, ಆದಾದ ಬಳಿಕ ಒಬ್ಬರಿಗೆ ಹೆಚ್ಚುವರಿಯಾಗಿ 50 ದಿನಗಳ ಉದ್ಯೋಗ ನೀಡಲು ಅಧಿಸೂಚನೆ ಹೊರಬೀಳಲಿದೆ ಎಂದು ಅವರು ತಿಳಿಸಿದರು.
 

SCROLL FOR NEXT