ಅಪಘಾತಕ್ಕೊಳಗಾದ ಬೈಕ್ 
ರಾಜ್ಯ

ಬೆಂಗಳೂರು: ಮದ್ಯದ ಅಮಲು, ಅತಿವೇಗದ ಚಾಲನೆ; ಕಂಬಕ್ಕೆ BMW ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರ ಸಾವು

ಯಶವಂತಪುರದ ಆರ್ ಎಂಸಿ ಯಾರ್ಡ್ ಬಳಿ ಮುಂಜಾನೆ 3.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು 31 ವರ್ಷದ ಮನಮೋಹನ್ ಹಾಗೂ 25 ವರ್ಷದ ನಿಖಿಲ್ ಎಂದು ಗುರುತಿಸಲಾಗಿದೆ.

ಬೆಂಗಳೂರು: ಕಂಬಕ್ಕೆ ಬಿಎಂಡಬ್ಲ್ಯೂ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

ಯಶವಂತಪುರದ ಆರ್ ಎಂಸಿ ಯಾರ್ಡ್ ಬಳಿ ಮುಂಜಾನೆ 3.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು 31 ವರ್ಷದ ಮನಮೋಹನ್ ಹಾಗೂ 25 ವರ್ಷದ ನಿಖಿಲ್ ಎಂದು ಗುರುತಿಸಲಾಗಿದೆ.

ಯುವಕರು ಬಿಎಂಡಬ್ಲ್ಯೂ ಬೈಕ್‌ ಚಲಾಯಿಸುತ್ತಿದ್ದರು. ಯಶವಂತಪುರದಿಂದ ಆರ್‌ಎಮ್‌ಸಿ ಯಾರ್ಡ್ ರೋಡ್ ಕಡೆ ಡ್ರೈವ್ ಮಾಡುತ್ತಿದ್ದ ಇವರು ಮದ್ಯ ಸೇವಿಸಿದ್ದರು ಹಾಗೂ ಅತಿವೇಗದಿಂದ ಚಾಲನೆ ಮಾಡಿದ್ದುದು ಗೊತ್ತಾಗಿದೆ. ಇಬ್ಬರೂ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ಮನಮೋಹನ್, ನಿಖಿಲ್ ವಾಪಸ್ ಬರುತ್ತಿದ್ದರು.

ವೇಗದಿಂದಾಗಿ ನಿಯಂತ್ರಣ ಸಿಗದೆ ಬೈಕ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರೂ ಬೈಕ್‌ನಿಂದ ದೂರಕ್ಕೆ ಹಾರಿಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಮನಮೋಹನ್ ಬನಶಂಕರಿ ನಿವಾಸಿ ಎಂಬ ಮಾಹಿತಿ ದೊರೆತಿದೆ. ಇಬ್ಬರ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್