ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ 
ರಾಜ್ಯ

ಬೆಂಗಳೂರಿನಲ್ಲಿ ಖದೀಮನ ಕೈಚಳಕ: ಮಗಳ ಮದುವೆಗೆ ಕೂಡಿಟ್ಟ 3.5 ಕೆಜಿ ಚಿನ್ನ, 10 ಲಕ್ಷ ರೂ. ನಗದು ಕಳ್ಳತನ!

ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ಬಂದ ಕಳ್ಳನೊಬ್ಬ ಬೀಗ ಮುರಿದು, 3.5 ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್​ ಆಗಿರುವ ಘಟನೆ ತಿಲಕ್ ನಗರದ ಎಸ್ಆರ್ ಕೆ ಗಾರ್ಡನ್​ನಲ್ಲಿ ನಡೆದಿದೆ.

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ಬಂದ ಕಳ್ಳನೊಬ್ಬ ಬೀಗ ಮುರಿದು, 3.5 ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್​ ಆಗಿರುವ ಘಟನೆ ತಿಲಕ್ ನಗರದ ಎಸ್ಆರ್ ಕೆ ಗಾರ್ಡನ್​ನಲ್ಲಿ ನಡೆದಿದೆ.

ಮನೆಯವರೆಲ್ಲ ರಾಮನಗರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಇನ್ನೂ ಕಳ್ಳತನಕ್ಕೆ ಒಳಗಾದ ಮನೆಯವರು ಮಗಳ ಮದುವೆ ಕೂಡ ಫಿಕ್ಸ್ ಮಾಡಿದ್ದರಂತೆ. ಹಾಗಾಗಿ ಆಭರಣ ಹಾಗೂ ಹಣವನ್ನು ಮನೆಯಲ್ಲಿ ಇಟ್ಟು ಹೋಗಿದ್ದರು.

 ರಾಮನಗರದಿಂದ ಮರಳಿ ಮನೆಗೆ ಬಂದು ನೋಡಿದ ಕೂಡಲೇ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಘಟನಾ ಸ್ಥಳಕ್ಕೆ ತಿಲಕ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮನೆಗೆ ಓರ್ವ ವ್ಯಕ್ತಿ ಬಂದಿರುವುದು ಗೊತ್ತಾಗಿದೆ. ಸದ್ಯ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿದ್ದ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

SCROLL FOR NEXT