ಆಧಾರ್ ಬಯೋಮೆಟ್ರಿಕ್ ಡಾಟಾ ಕಳವು 
ರಾಜ್ಯ

ಮಂಗಳೂರು: ಆಧಾರ್ ಬಯೋಮೆಟ್ರಿಕ್ ಡಾಟಾ ಕಳವು; ಒಟಿಪಿ ಇಲ್ಲದೇ ಗ್ರಾಹಕರ ಹಣ ಗುಳುಂ; ಸಬ್ ರಿಜಿಸ್ಟ್ರಾರ್ ಕಚೇರಿಯಿಂದಲೇ ಲೀಕ್ ಶಂಕೆ

ಕರಾವಳಿ ನಗರ ಮಂಗಳೂರಿನಲ್ಲಿ ಕಳ್ಳರು ಆಧಾರ್ ಬಯೋಮೆಟ್ರಿಕ್ ದತ್ತಾಂಶಗಳನ್ನು ಕದ್ದು ನಂತರ ಜನರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಎಗರಿಸಿದ್ದಾರೆ. ಅದೂ ಕೂಡ ಒಟಿಪಿ ಇಲ್ಲದೇ....!

ಮಂಗಳೂರು: ಕರಾವಳಿ ನಗರ ಮಂಗಳೂರಿನಲ್ಲಿ ಕಳ್ಳರು ಆಧಾರ್ ಬಯೋಮೆಟ್ರಿಕ್ ದತ್ತಾಂಶಗಳನ್ನು ಕದ್ದು ನಂತರ ಜನರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಎಗರಿಸಿದ್ದಾರೆ. ಅದೂ ಕೂಡ ಒಟಿಪಿ ಇಲ್ಲದೇ....!

ಹೌದು.. ಆಧಾರ್ ಗಾಗಿ ಹೊಸ ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ದಂಪತಿಗಳು ತಮ್ಮ ಆಧಾರ್ ಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ತಲಾ 10,000 ರೂ ಕಳೆದುಕೊಂಡಿದ್ದಾರೆ. ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಗಾಗಿ ಬಯೋಮೆಟ್ರಿಕ್ಸ್ ಮತ್ತು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಿವರಗಳನ್ನು ತೆಗೆದುಕೊಂಡ ನಂತರ ಅನೇಕರು ಇದೇ ರೀತಿ ಹಣವನ್ನು ಕಳೆದುಕೊಂಡಿದ್ದಾರೆ.

ತಲಾ 10 ಸಾವಿರ ರೂಪಾಯಿ ಕಳೆದುಕೊಂಡಿರುವ ನಗರದ ಶಕ್ತಿನಗರದ ಲೋಕೇಶ್ ಮತ್ತು ಅವರ ಪತ್ನಿ ತಮ್ಮ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ಹಣ ಕಳವಾಗಿದೆ ಎಂದು ದೂರು ದಾಖಲಿಸಿದ್ದಾರೆ. ಈ ಸಂಬಂಧ ನಗರ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ?
ಕುಲಶೇಖರ ನಿವಾಸಿ ಲೋಕೇಶ್ ಎಂಬವರು ಆಗಸ್ಟ್ 30ರಂದು ಜಾಗ ಖರೀದಿ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಪತಿ- ಪತ್ನಿಯ ಜಂಟಿ ಖಾತೆಯ ಹೆಸರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದು, ಇಬ್ಬರೂ ತಮ್ಮ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಕೊಟ್ಟಿದ್ದರು. ಸೆ.13ರಂದು ಲೋಕೇಶ್ ಮತ್ತು ಅವರ ಪತ್ನಿಯ ಖಾತೆಯಿಂದ ತಲಾ ಹತ್ತು ಸಾವಿರ ರೂ. ಹಣ ಕಡಿತಗೊಂಡಿತ್ತು. ಯಾವುದೇ ಫೋನ್ ಕರೆಯಾಗಲೀ, ಓಟಿಪಿ ಆಗಲೀ ಅವರಿಗೆ ಬಂದಿರಲಿಲ್ಲ. ಐದು ನಿಮಿಷಗಳ ಅಂತರದಲ್ಲಿ ಪತಿ- ಪತ್ನಿಯ ಬೇರೆ ಬೇರೆ ಬ್ಯಾಂಕಿನ ಖಾತೆಗಳಿಂದ ಹಣ ಕಟ್ ಆಗಿತ್ತು. ಆನಂತರ, ಇಬ್ಬರು ಕೂಡ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ಕಡಿತ ಆಗಿರುವ ಬಗ್ಗೆ ಮೊಬೈಲಿಗೆ ಮೆಸೇಜ್ ಬಂದಿತ್ತು. ಎರಡರಲ್ಲೂ ಎಇಪಿಎಸ್ ಮೂಲಕ ಹಣ ಕಟ್ ಆಗಿರುವುದಾಗಿ ಮೆಸೇಜ್ ಇತ್ತು ಎಂದು ಲೋಕೇಶ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇನ್ನೊಬ್ಬ ಸಂತ್ರಸ್ತ ರೋಹಿತ್, “ನಾನು ಹೊಸ ಆಸ್ತಿಯನ್ನು ಖರೀದಿಸಿದೆ ಮತ್ತು ಅದನ್ನು ನನ್ನ ಹೆಸರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲು ಅರ್ಜಿ ಸಲ್ಲಿಸಿದೆ. ನಾನು ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಎಇಪಿಎಸ್ ವಹಿವಾಟಿನ ವಿಧಾನದಲ್ಲಿ ಹಣವನ್ನು ಹಿಂಪಡೆಯಲಾಗಿದೆ ಎಂದು ಅವರು ಹೇಳಿದರು. ತಕ್ಷಣ ನಮ್ಮ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿ ಪೊಲೀಸ್ ದೂರು ದಾಖಲಿಸಿದ್ದೇವೆ. ಹಣವನ್ನು ಕಳೆದುಕೊಳ್ಳುವ ಕೇವಲ 10 ದಿನಗಳ ಮೊದಲು ನಾವು ನಮ್ಮ ಬೆರಳಚ್ಚು, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಹೊಸ ಆಸ್ತಿ ನೋಂದಣಿಗಾಗಿ ಉಪ-ನೋಂದಣಿ ಕಚೇರಿಯಲ್ಲಿ ಮಾತ್ರ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಸೈಬರ್ ಭದ್ರತಾ ತಜ್ಞ ಡಾ.ಅನಂತ್ ಪ್ರಭು ಅವರು, 'ವಂಚಕರು ಭೂ ನೋಂದಣಿ ಇಲಾಖೆಯ ದಾಖಲೆಗಳಿಂದ ಬೆರಳಚ್ಚು ಪಡೆದು ನಕಲಿ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. “ವಂಚಕರು ಆಧಾರ್ ವಿವರಗಳು, ಫಿಂಗರ್‌ಪ್ರಿಂಟ್‌ಗಳು ಮತ್ತು ಬ್ಯಾಂಕ್ ಖಾತೆಗೆ ಪ್ರವೇಶವನ್ನು ಹೊಂದಿದ್ದರೆ ಹಣವನ್ನು ಸೈಫನ್ ಮಾಡುವುದು ಸುಲಭವಾಗಿದೆ. AePS ಮೋಡ್ ಅಡಿಯಲ್ಲಿ, ಮೈಕ್ರೋ ATM ನಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಲಾಗುತ್ತದೆ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಸಲ್ಲಿಸಲಾಗುತ್ತದೆ. ಆಧಾರ್-ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಿಂದ, ಪಾವತಿಯನ್ನು ಮಾಡಲಾಗುತ್ತದೆ ಮತ್ತು ಈ ಮೋಡ್‌ನಲ್ಲಿ ದೈನಂದಿನ ಮಿತಿ 10,000 ರೂಗಳಾಗಿರುತ್ತದೆ. AePS ಮೋಡ್‌ಗೆ ಎರಡು ಅಂಶದ ಪಾಸ್‌ವರ್ಡ್ ಅಥವಾ OTP ದೃಢೀಕರಣವನ್ನು ಸಕ್ರಿಯಗೊಳಿಸಲು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಅಂತೆಯೇ ಹಣಕಾಸು ಸಚಿವಾಲಯವು ಪ್ರತಿ ಬಳಕೆದಾರರಿಗೆ ಸ್ಥಳ ಡೇಟಾದೊಂದಿಗೆ ಹೆಚ್ಚಿನ ರೆಸಲ್ಯೂಶನ್ ಫೋಟೋವನ್ನು ಖಚಿತಪಡಿಸಿಕೊಳ್ಳಬೇಕು. SMS ಬದಲಿಗೆ, ಖಾತೆದಾರರು ವಹಿವಾಟು ದೃಢೀಕರಿಸುವ ಮೊದಲು ತ್ವರಿತ IVR ಕರೆಯನ್ನು ಪಡೆಯಬೇಕು. ಆಧಾರ್ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ ಬಯೋಮೆಟ್ರಿಕ್ ವೈಶಿಷ್ಟ್ಯವನ್ನು ಲಾಕ್ ಮಾಡುವ ಆಯ್ಕೆಯೂ ಇದೆ ಎಂದು ಹೇಳಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿ, ಬಹಳಷ್ಟು ಜನರು ತಮ್ಮನ್ನು ಭೇಟಿಯಾಗಿ ಹಣ ಕಳೆದುಕೊಂಡಿರುವ ಬಗ್ಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ, ದತ್ತಾಂಶ ಉಲ್ಲಂಘನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಅವರು ಹೇಳಿದರು.

ಮಂಗಳೂರಿನ ಹಿರಿಯ ಸಬ್ ರಿಜಿಸ್ಟ್ರಾರ್ ಕವಿತಾ ಅವರು, ಟಿಎನ್‌ಐಇ ಜೊತೆ ಮಾತನಾಡಿ, ಇನ್ನೂ ಯಾವುದೇ ಲಿಖಿತ ದೂರು ಬಂದಿಲ್ಲ. ಆದರೆ ಮಂಗಳೂರು ನಗರ ಪೊಲೀಸರು ಸೆಪ್ಟೆಂಬರ್ 21 ರಂದು ನಮ್ಮ ಕಚೇರಿಗೆ ಭೇಟಿ ನೀಡಿ ದೂರು ದಾಖಲಿಸಿದ ನಂತರ ಮಾಹಿತಿಯನ್ನು ಪರಿಶೀಲಿಸಿದರು. ಹಣ ಕಳೆದುಕೊಂಡವರಿಂದ ಲಿಖಿತ ದೂರುಗಳು ಬಂದ ನಂತರ ನಾವು ಪರಿಶೀಲಿಸುತ್ತೇವೆ ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT