ಕೋಲಾರದ ಬ್ರಹ್ಮೋತ್ಸವ
ಕೋಲಾರದ ಬ್ರಹ್ಮೋತ್ಸವ 
ರಾಜ್ಯ

ಕೆಜಿಎಫ್‌: ವಿಜೃಂಭಣೆಯ ಬ್ರಹ್ಮೋತ್ಸವ, ಲಕ್ಷಾಂತರ ಭಕ್ತರು ಭಾಗಿ!

Nagaraja AB

ಕೋಲಾರ: ಕೋಲಾರ ಜಿಲ್ಲೆಯ ಗಣಿ ಪ್ರದೇಶವಾದ ಕೆಜಿಎಫ್ ನಲ್ಲಿ ಈ ಬಾರಿಯ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ವಿಜೃಂಭಣೆಯಿಂದ ನೆರವೇರಿತು. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾದರು. ಮಾರ್ಚ್ 19 ರಿಂದ 31 ರವರೆಗೆ 13 ದಿನಗಳ ಕಾಲ ಯಾವುದೇ ಅಡ್ಡಿಯಿಲ್ಲದೆ ಸುಗಮವಾಗಿ ಬ್ರಹ್ಮೋತ್ಸವ ಜರುಗಿತು.

ಈ ವರ್ಷ ಎಲ್ಲಾ ಹದಿಮೂರು ಉತ್ಸವ ಸಮಿತಿ ಸದಸ್ಯರು ಶಾಸ್ತ್ರೀಯ ಸಂಗೀತ ಕಚೇರಿ ಒಳಗೊಂಡಂತೆ ಅದ್ಧೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದರು. ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಿಂದ ಸಾವಿರಾರು ಜನರು ಆಗಮಿಸಿದ್ದರು. ಇದು ಕೆಜಿಎಫ್ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಆದರೆ, ಸ್ಥಳೀಯ ಪೊಲೀಸ್ ಆಡಳಿತ ಮೊದಲ ದಿನವೇ ಬಿಗಿ ಬಂದೋಬಸ್ತ್ ಮಾಡಿದ್ದು, ಜನಸಾಗರವೇ ಹರಿದುಬರುವ ಮುನ್ನವೇ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರ ನೇರ ಉಸ್ತುವಾರಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಪ್ರಮುಖ ಬೀದಿಗಳಲ್ಲದೆ, ಅಡ್ಡ ರಸ್ತೆಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಉಪ ಪೊಲೀಸ್ ವರಿಷ್ಠಾಧಿಕಾರಿ ಪಾಂಡುರಂಗಯ್ಯ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಹಗಲಿರುಳು ಶ್ರಮಿಸಿ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಿದರು. ಈ ಪ್ರಯತ್ನಕ್ಕೆ ಕೇಂದ್ರ ಶ್ರೇಣಿಯ ಪೊಲೀಸ್ ಮಹಾನಿರೀಕ್ಷಕ ರವಿಕಾಂತೇಗೌಡರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಿದ ಪೊಲೀಸರಿಗೆ ಉತ್ಸವ ಸಮಿತಿ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

SCROLL FOR NEXT