ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಕಲಬುರಗಿ: ಬಿಸಿಲ ಝಳಕ್ಕೆ ಬಸವಳಿದ ಜನರು, 40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ

Ramyashree GN

ಕಲಬುರಗಿ: ಬೇಸಿಗೆಯ ಆಗಮನದೊಂದಿಗೆ, ದೇಶದ ಇತರ ಭಾಗಗಳೊಂದಿಗೆ ದಕ್ಷಿಣ ಭಾರತದಲ್ಲಿಯೂ ತಾಪಮಾನವು ಗಗನಕ್ಕೇರುತ್ತಿದೆ. ಭಾನುವಾರ ಕರ್ನಾಟಕದ ಕಲಬುರಗಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.

ಕಲಬುರಗಿ ಜಿಲ್ಲಾ ವಿಪತ್ತು ವೃತ್ತಿಪರ ಜಿಲ್ಲಾಧಿಕಾರಿ ಉಮೇಶ್ ಮಾತನಾಡಿ, ಮಾರ್ಚ್ 31 ರಂದು ಕಲಬುರಗಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಎಂದಿದ್ದಾರೆ.

ಕಲಬುರಗಿಯಲ್ಲಿ ಬಿಸಿಲಿನ ತಾಪ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು ತಂಪು ಪಾನೀಯ, ಜ್ಯೂಸ್‌ ಸೇವಿಸಿ ಮನೆಗೆ ತೆರಳುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೃತಿ.

ಜನರು ಈಗಾಗಲೇ ಬಿಸಿಗಾಳಿಯ ಪರಿಸ್ಥಿತಿಯನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ. ಕಲಬುರಗಿಯಲ್ಲಿ ಬಿಸಿಲ ತಾಪ ತಾಳಲು ಜನರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಮತ್ತು ನಿಂಬೆ ಹಣ್ಣಿನ ಜ್ಯೂಸಿನ ಮೊರೆ ಹೋಗುತ್ತಿದ್ದಾರೆ.

ಈಮಧ್ಯೆ, ಚುನಾವಣೆಗಳು ಸಮೀಪಿಸುತ್ತಿರುವ ಕಾರಣ, ರಾಜಕೀಯ ಪಕ್ಷಗಳು ಬಿಸಿಲಿನ ತಾಪದಲ್ಲಿ ತಮ್ಮ ಪ್ರಚಾರವನ್ನು ನಡೆಸುವುದು ಕಷ್ಟಕರವಾಗಿದೆ. ಬೆಳಗ್ಗಿನ ವೇಳೆಯ ಪ್ರಚಾರದಲ್ಲಿ ಜನರನ್ನು ಸೆಳೆಯುವುದು ಪ್ರಮುಖ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ರಾಜಕೀಯ ಪಕ್ಷಗಳು ಜನರನ್ನು ತಲುಪಲು ವಿವಿಧ ಮಾರ್ಗಗಳನ್ನು ಬಳಸುತ್ತಿವೆ.

ಈಮಧ್ಯೆ, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವು ಸಭೆಯೊಂದರಲ್ಲಿ ಐಸ್ ನೀರಿನ ಬಾಟಲಿಗಳು, ಐಸ್ ಮೊಸರು ಮತ್ತು ಕಲ್ಲಂಗಡಿಗಳನ್ನು ಜನಸಮೂಹಕ್ಕೆ ಹಂಚುವ ಮೂಲಕ ತಾಪಮಾನದಿಂದ ನಿರಾಳವಾಗಲು ಮುಂದಾಗಿದೆ. ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿಯಂತಹ ಎಲ್ಲಾ ಪಕ್ಷಗಳು ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಕಾರಣ ಬೆಳಗ್ಗಿನ ಪ್ರಚಾರ ವೇಳಾಪಟ್ಟಿಯನ್ನು ಹೊಂದಿವೆ.

SCROLL FOR NEXT