ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಎಲೆಕ್ಟ್ರಿಕ್‌ ವಾಹನಗಳ ಹೆಚ್ಚಳಕ್ಕೆ ಕ್ರಮ: RTO ಗಳಲ್ಲಿ, ಹೈವೇಗಳಲ್ಲಿ EV ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ Bescom ಮುಂದು!

Manjula VN

ಬೆಂಗಳೂರು: ಎಲ್ಲೆಡೆ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರದಲ್ಲಿಯೂ ಬಹುತೇಕ ಜನರು ಇ-ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಬೆಂಗಳೂರು ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ (ಬೆಸ್ಕಾಂ) ಹೆದ್ದಾರಿಗಳ ಉದ್ದಕ್ಕೂ ಮತ್ತು ರಾಜ್ಯಾದ್ಯಂತ ಪ್ರಾದೇಶಿಕ ಸಾರಿಗೆ ಕಚೇರಿಗಳ ಆವರಣದಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ.

ರಾಜ್ಯ ರಾಜಧಾನಿಯಲ್ಲಿ ಸುಮಾರು 3.4 ಲಕ್ಷ ಇ-ವಾಹನಗಳಿವೆ. ಈ ಪೈಕಿ 2.98 ಲಕ್ಷ ದ್ವಿಚಕ್ರ ವಾಹನಗಳು, 23,516 ನಾಲ್ಕು-ಚಕ್ರ ವಾಹನಗಳು ಮತ್ತು 18,246 ತ್ರಿಚಕ್ರ ವಾಹನಗಳಿವೆ. ಇವುಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ವಾಹನಗಳು ರಾಜ್ಯ ರಾಜಧಾನಿಯಲ್ಲಿಯೇ ನೋಂದಾವಣಿ ಹೊಂದಿವೆ.

ಸಾರಿಗೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಅವರು ಮಾತನಾಡಿ, ಸರ್ಕಾರ ಇ-ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಏಕೆಂದರೆ ಈ ವಾಹನಗಳು ಪರಿಸರ ಸ್ನೇಹಿಯಾಗಿದ್ದು, ಇದು ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 25 ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನಗಳನ್ನು ಹೊರತುಪಡಿಸಿ, ಇತರೆ ಎಲೆಕ್ಟ್ರಿಕ್ ವಾಹನಗಳ ತೆರಿಗೆಗೆ ಮುಕ್ತಿ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಇರುವುದಿಲ್ಲ ಎಂಬುದರ ಕುರಿತು ಪ್ರಚಾರಗಳನ್ನೂ ಮಾಡಲಾಗುತ್ತಿದೆ. ಆದಾಗ್ಯೂ, ನೋಂದಣಿಯಾಗಿರುವ ಬಹುತೇಕ ಇವಿಗಳು ಬೆಂಗಳೂರಿನದ್ದಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇವಿ ವಾಹನಗಳ ಬಳಕೆ ಹೆಚ್ಚಾಗಲು ಚಾರ್ಜಿಂಗ್ ಮೂಲಸೌಕರ್ಯ ಪ್ರಮುಖ ಕಾರಣವಾಗಿದೆ. ಬೆಂಗಳೂರಿನಲ್ಲಿ 120ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳನ್ನು ಬೆಸ್ಕಾಂ ಸ್ಥಾಪಿಸಿದೆ. ನಗರದಲ್ಲಿ ಅನೇಕ ಅಪಾರ್ಟ್‌ಮೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳು ಜಾರ್ಜಿಂಗ್ ಕೇಂದ್ರಗಳಿವೆ.

ಇ-ವಾಹನಗಳಿಗೆ ಜಾರ್ಜಿಂಗ್ ಕೇಂದ್ರ ಸ್ಥಾಪಿಸಲು ಜವಾಬ್ದಾರಿ ಬೆಸ್ಕಾಂ ಮೇಲಿದೆ. ಹೀಗಾಗಿ ರಾಜ್ಯಾದ್ಯಂತ ಚಾರ್ಜಿಂಗ್ ಮೂಲಸೌಕರ್ಯಗಳ ಲಭ್ಯತೆಯ ಕೊರತೆಯ ಬಗ್ಗೆ ಇತ್ತೀಚೆಗೆ ಬೆಸ್ಕಾಂ ಸಭೆ ನಡೆಸಿದ ಸಭೆಯಲ್ಲಿ ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲಿಗೆ, ಬೆಸ್ಕಾಂ ರಾಜ್ಯದಾದ್ಯಂತ ಆಯ್ದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತದೆ. ಇದಕ್ಕೆ ಸಾರಿಗೆ ಇಲಾಖೆಯಿಂದ ಹಣ ಒದಗಿಸಲಾಗುವುದು. ನಂತರ ಹೆದ್ದಾರಿಗಳಲ್ಲೂ ಈ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.

ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಧಾರವಾಡ, ಮೈಸೂರು, ಮಂಗಳೂರು ಮತ್ತು ಜಿಲ್ಲೆಗಳ ಹೆದ್ದಾರಿಗಳು ಸೂಕ್ತ ಸ್ಥಳಗಳಾಗಿವೆ. ಜಾರ್ಜಿಂಗ್ ಕೇಂದ್ರಗಳ ಸ್ಥಾಪನೆಯಿಂದ ಜನರಲ್ಲಿ ಇ-ವಾಹಗಳ ಬಗ್ಗೆ ಇರುವ ಆತಂಕ ಕೂಡ ದೂರಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT