ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಕಾವೇರಿ ನೀರಿಗಾಗಿ ಮತ್ತೆ ತಮಿಳುನಾಡು ಕ್ಯಾತೆ: 3.6 ಟಿಎಂಸಿ ನೀರು ಬಿಡುಗಡೆಗೆ ಆಗ್ರಹ, ಬೇಡಿಕೆ ತಿರಸ್ಕರಿಸಿದ CWMA

Manjula VN

ಬೆಂಗಳೂರು: ರಾಜ್ಯದಲ್ಲಿ ಸರಿಯಾಗಿ ಮುಂಗಾರು ಮಳೆಯಾಗದೇ ಬರಗಾಲ ಆವರಿಸಿದ್ದು, ಬೆಂಗಳೂರು ಸೇರಿ ಹಲವೆಡೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇದರ ಮಧ್ಯೆಯೂ ತಮಿಳುನಾಡು ಸರ್ಕಾರ ಮತ್ತೆ ಕಾವೇರಿ ನೀರಿಗಾಗಿ ಕ್ಯಾತೆ ತೆಗೆದಿದೆ.

ಈ ಬಾರಿ ಮಳೆ ಕೈಕೊಟ್ಟ ಹಿನ್ನೆಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯ ಭರ್ತಿಯಾಗದೇ ಕುಡಿಯುವ ನೀರಿಗೂ ಸಂಕಷ್ಟದ ಸ್ಥಿತಿ ಎದುರಾಗಿದೆ.

ಈ ಪರಿಸ್ಥಿತಿಯ ನಡುವೆಯೂ ಮೂರು ತಿಂಗಳ ಬಾಕಿ ಇರುವ 3.6 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸುವಂತೆ ಸಿಡಬ್ಲ್ಯುಎಂಎ (ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ) ಸಭೆಯಲ್ಲಿ ತಮಿಳುನಾಡು ಆಗ್ರಹಿಸಿದೆ.

ಬಾಕಿ ಉಳಿದಿರುವ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸುವಂತೆ ತಮಿಳುನಾಡು ಸರ್ಕಾರ ಸಭೆಯಲ್ಲಿ ಒತ್ತಾಯಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕದ ಅಧಿಕಾರಿಗಳು, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ವಾದ ಮಂಡಿಸಿದರು.

ವಾದ ಆಲಿಸಿದ ಸಿಡಬ್ಲ್ಯುಆರ್‌ಸಿ ತಮಿಳುನಾಡಿನ ಆಗ್ರಹವನ್ನು ತಿರಸ್ಕರಿಸಿತು. ತಮಿಳುನಾಡಿನಲ್ಲಿರುವ ಜಲಾಶಯಗಳಲ್ಲಿ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಸಾಕಷ್ಟು ನೀರಿದೆ, ಆದರೆ, ಕರ್ನಾಟಕದ ಹಲವು ನಗರಗಳಲ್ಲಿ ತೀವ್ರ ನೀರಿನ ಬಿಕ್ಕಟ್ಟು ಎದುರಾಗಿದೆ.

ಕರ್ನಾಟಕವು ಫೆಬ್ರವರಿ ತಿಂಗಳವರಗೆ 2.5 tmcft ಪರಿಸರ ಹರಿವನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ 5 ಟಿಎಂಸಿ ಅಡಿ ಬಿಡುಗಡೆ ಮಾಡಿದೆ. ಆದರೆ, ಬಿಳಿಗುಂಡ್ಲು ಗೇಜಿಂಗ್ ಸ್ಟೇಷನ್‌ನಲ್ಲಿ ಕಳೆದ ಎರಡು ತಿಂಗಳಿನಿಂದ ಕೇವಲ 1.4 ಟಿಎಂಸಿ ಅಡಿಯಷ್ಟು ಹರಿವು ಇದೆ. ಕರ್ನಾಟಕದ ನಗರಗಳಲ್ಲಿ ಪ್ರಸ್ತುತ ನೀರಿನ ಬಿಕ್ಕಟ್ಟು ತೀವ್ರವಾಗಿದ್ದು, ಅದಕ್ಕೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಸಿಡಬ್ಲ್ಯೂಎಂಎ ಕಾರ್ಯದರ್ಶಿ ಟಿಡಿ ಶರ್ಮಾ ಹೇಳಿದರು.

2023-24ರ ಅವಧಿಗೆ ಕುಡಿಯುವ ನೀರಿನ ಅವಶ್ಯಕತೆ ಮತ್ತು ಪರಿಸರದ ಹರಿವನ್ನು ಪೂರೈಸಲು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳಲ್ಲಿ ಲಭ್ಯವಿರುವ ನೀರುವ ಸಂಗ್ರಹಣೆಗಳು ಸಾಕಾಗುತ್ತದೆ ಎಂದೂ ಸಿಡಬ್ಲ್ಯುಆರ್‌ಸಿ ಹೇಳಿದೆ.

ಸಿಡಬ್ಲ್ಯುಆರ್‌ಸಿ ಅಧ್ಯಕ್ಷ ವಿನೀತ್ ಗುಪ್ತಾ ಮಾತನಾಡಿ, ಪ್ರಸ್ತುತ ಜಲಾಶಯಗಳಲ್ಲಿ ಲಭ್ಯವಿರುವ ನೀರು ಸುಮಾರು 29.903 ಟಿಎಂಸಿ ಅಡಿಯಷ್ಟಿದ್ದು, ಇದು ಕುಡಿಯುವ ಮತ್ತು ಕೈಗಾರಿಕಾ ಉದ್ದೇಶಗಳಿಗೆ ಮತ್ತು ಬೆಳೆಗಳಿಗೆ ಸಾಕಾಗುತ್ತದೆ. ತಮಿಳುನಾಡಿನ ಜಲಾಶಯಗಳಲ್ಲಿ ಅಲ್ಲಿನ ಕೈಗಾರಿಕೆ ಮತ್ತು ಕುಡಿಯಲು ಅಗತ್ಯ ನೀರು ಇದೆ ಎಂದು ಹೇಳಿದರು.

SCROLL FOR NEXT