ಮತದಾನ (ಸಾಂದರ್ಭಿಕ ಚಿತ್ರ) 
ರಾಜ್ಯ

Vote from Home ಅವಕಾಶವಿದ್ದರೂ ಮತಗಟ್ಟೆಗೇ ಬಂದು ಮತದಾನ: ಯುವ ಮತದಾರರಿಗೆ ಹಿರಿಯರು, ಅಂಗವಿಕಲರೇ ಸ್ಫೂರ್ತಿ!

ಅಂಗವಿಕಲರು ಮತ್ತು 85 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ vote from home (VHM) ಮಾಡುವ ಅವಕಾಶ ನೀಡಿದ್ದರೂ ತಾವು ಮಾತ್ರ ಮತಗಟ್ಟೆಗೇ ಬಂದು ಮತದಾನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಬೆಂಗಳೂರು: ಅಂಗವಿಕಲರು ಮತ್ತು 85 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ vote from home (VHM) ಮಾಡುವ ಅವಕಾಶ ನೀಡಿದ್ದರೂ ತಾವು ಮಾತ್ರ ಮತಗಟ್ಟೆಗೇ ಬಂದು ಮತದಾನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಹೌದು.. ಚುನಾವಣಾ ಆಯೋಗವು ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದ್ದರೂ (VHM) ಏಪ್ರಿಲ್ 26 ರಂದು ಮತಗಟ್ಟೆಗೆ ಭೇಟಿ ಮತದಾನ ಮಾಡಲು ಬಯಸುತ್ತೇನೆ ಎಂದು ಹಿರಿಯಜ್ಜ ನಾರಾಯಣಪ್ಪ ಹೇಳಿದ್ದಾರೆ.

“ನಾನು ಪ್ರತಿನಿತ್ಯ ಹಾಲು ಖರೀದಿಸಲು, ವಾಕಿಂಗ್ ಮಾಡಲು ಮತ್ತು ವೈದ್ಯರನ್ನು ಭೇಟಿ ಮಾಡಲು ಹೋಗಲು ಸಾಧ್ಯವಾದರೆ ಮತದಾನ ಮಾಡಲು ಮತಗಟ್ಟೆಗೆ ಏಕೆ ಹೋಗಬಾರದು. ನಾವೆಲ್ಲರೂ ಒಟ್ಟಾಗಿ ಹೋಗಿ ಮತ ಚಲಾಯಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಅವರು ಕಳೆದ ಚುನಾವಣೆಯಲ್ಲೂ ಮತ ಚಲಾಯಿಸಿದ್ದರು. ಆಗಲೂ ಅವರು ವೋಟ್ ಫ್ರಂ ಫೋಮ್ ಆಯ್ಕೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

86 ವರ್ಷದ ಗೃಹಿಣಿ ಸುಷ್ಮಾ ಎಂ ಅವರ ಅಭಿಪ್ರಾಯವೂ ಇದೇ ಆಗಿದ್ದು, “ನನ್ನ ಮಗಳು, ಸೊಸೆ ಮತ್ತು ಮೊಮ್ಮಕ್ಕಳು ಒಟ್ಟಾಗಿ ಮತ ಹಾಕಲು ನಿರ್ಧರಿಸಿದ್ದಾರೆ. ಇದು ನನ್ನ ಮೊಮ್ಮಗನ ಮೊದಲ ಬಾರಿ ಮತದಾನವಾಗಿದೆ ಮತ್ತು ಆ ಸಮಯದಲ್ಲಿ ನಾನು ಹಾಜರಾಗಲು ಬಯಸುತ್ತೇನೆ, ”ಎಂದು ಅವರು ಖುಷಿಯಿಂದ ಹೇಳುತ್ತಾರೆ.

ಅವರು ಮಾತ್ರವಲ್ಲ, ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿ, "ವಿಕಲಚೇತನರು (ಪಿಡಬ್ಲ್ಯುಡಿ) ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನದ ಅವಕಾಶ ನೀಡುತ್ತಿರುವ ಮೊದಲ ಲೋಕಸಭೆ ಚುನಾವಣೆ ಇದಾಗಿದ್ದು, ಕೆಲವೇ ಜನರು ಇದನ್ನು ಆರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

“ಜನರು ಮತಗಟ್ಟೆಗೆ ಭೇಟಿ ನೀಡಲು ಉತ್ಸುಕರಾಗಿರುವುದನ್ನು ನೋಡುವುದು ತುಂಬಾ ಉತ್ತೇಜನಕಾರಿಯಾಗಿದೆ. ಒಮ್ಮೆ ಅವರು VFH ನಿಂದ ಹೊರಗುಳಿದರೆ, ನಾವು ಅವರನ್ನು ಇತರೆ ಮತದಾರರಂತೆ ನೋಡುತ್ತೇವೆ ಮತ್ತು ಅವರು Saksham ಅಪ್ಲಿಕೇಶನ್ ಮೂಲಕ ಸಹಾಯವನ್ನು ಕೇಳದ ಹೊರತು ಯಾವುದೇ ವಿಶೇಷ ವ್ಯವಸ್ಥೆ ನೀಡಲಾಗುವುದಿಲ್ಲ. ಆದರೆ ಇಲ್ಲಿಯವರೆಗೆ, ಅಪ್ಲಿಕೇಶನ್ ಮೂಲಕ ಈ ಸೇವೆ ಬಳಸಿಕೊಂಡವರು ಬೆರಳೆಣಿಕೆಯಷ್ಟು ಮಾತ್ರ ಎಂದು ಅಧಿಕಾರಿ ಹೇಳಿದ್ದಾರೆ.

ಸಿಇಒ (ಮುಖ್ಯ ಚುನಾವಣಾ ಕಚೇರಿ) ಕಚೇರಿಯ ಮಾಹಿತಿಯ ಪ್ರಕಾರ, ಒಟ್ಟು 40,743 ಜನರು VFH ಅನ್ನು ಆಯ್ಕೆ ಮಾಡಿಕೊಂಡಿದ್ದು, ಇದರಲ್ಲಿ 37,739 ಮಂದಿ 85 ವರ್ಷ ಮೇಲ್ಪಟ್ಟವರು ಮತ್ತು 13,004 ಮಂದಿ ಅಂಗವಿಕಲರಾಗಿದ್ದಾರೆ. ಇದು ಏಪ್ರಿಲ್ 26 ರಂದು ಚುನಾವಣೆಗೆ ಹೋಗುವ 14 ಸಂಸದೀಯ ಕ್ಷೇತ್ರಗಳ ದತ್ತಾಂಶವಾಗಿದೆ. ಮೇ 7 ರಂದು ಚುನಾವಣೆ ನಡೆಯುವ ಉಳಿದ ಕ್ಷೇತ್ರಗಳಿಗೆ ಫಾರ್ಮ್ 12D ಅನ್ನು ಇನ್ನೂ ವಿತರಿಸಬೇಕಾಗಿದೆ ಎಂದು ಹೇಳಿದರು.

2023 ರ ವಿಧಾನಸಭಾ ಚುನಾವಣೆಯಲ್ಲಿ, 224 ವಿಧಾನಸಭಾ ಕ್ಷೇತ್ರಗಳಲ್ಲಿ, ಒಟ್ಟು 99,535 ಮತದಾರರು VFH ಅನ್ನು ಆರಿಸಿಕೊಂಡಿದ್ದರು. ಅದರಲ್ಲಿ 80,251 ಮಂದಿ 85 ವರ್ಷ ಮೇಲ್ಪಟ್ಟವರು ಮತ್ತು 19,280 ಮಂದಿ ಅಂಗವಿಕಲರಾಗಿದ್ದರು.

“VHM ಆಯ್ಕೆಯು ರಾಜ್ಯ ವಿಧಾನಸಭಾ ಚುನಾವಣೆಯೊಂದಿಗೆ ಪ್ರಾರಂಭವಾಯಿತು. ಮಾರ್ಚ್ 16 ರವರೆಗೆ, ಮತದಾರರ ಪಟ್ಟಿಯ ಪ್ರಕಾರ, 85 ವರ್ಷಕ್ಕಿಂತ ಮೇಲ್ಪಟ್ಟ 5,70,168 ಮತದಾರರಿದ್ದು, 6,12,154 ಮತದಾರರು ತಮ್ಮನ್ನು ಪಿಡಬ್ಲ್ಯೂಡಿ (ವಿಕಲಚೇತನರು) ಎಂದು ಗುರುತಿಸಿಕೊಂಡಿದ್ದಾರೆಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ ಹಗಲು ದರೋಡೆ: 7 ಕೋಟಿ ಕದ್ದ ಖದೀಮರು; 4 ಶಂಕಿತರ ಫೋಟೋ, ಡಿಜಿ-ಐಜಿಪಿಗೆ ಪರಮೇಶ್ವರ್ ತಾಕೀತು!

ದಾಖಲೆಯ 10ನೇ ಬಾರಿಗೆ ಬಿಹಾರದ ಸಿಎಂ ಆಗಿ ನಿತೀಶ್ ನಾಳೆ ಪ್ರಮಾಣವಚನ: BJPಯ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ DCM!

ದೆಹಲಿಯ JNU ಗೆ ಶೃಂಗೇರಿ ಶ್ರೀಗಳ ಭೇಟಿ: ಕ್ಯಾಂಪಸ್ ನಲ್ಲಿ ವಿದ್ಯಾರಣ್ಯ ಮೂರ್ತಿಗೆ ಮಾಲಾರ್ಪಣೆ, VIKAS ಕುರಿತು ಉಪನ್ಯಾಸ; Video

ರೈತರು ಶಾಲು ಬೀಸಿದ್ದನ್ನು ನೋಡಿದರೆ ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು: ಪ್ರಧಾನಿ ಮೋದಿ

ಶಬರಿಮಲೆಯಲ್ಲಿ ಜನದಟ್ಟಣೆ: ಅಯ್ಯಪ್ಪ ಭಕ್ತರ ಸುರಕ್ಷಿತ, ಸುಗಮ ಸಂಚಾರಕ್ಕಾಗಿ ಕೇರಳಕ್ಕೆ ಕರ್ನಾಟಕ ಸರ್ಕಾರ ಮನವಿ!

SCROLL FOR NEXT