ಸಂಗ್ರಹ ಚಿತ್ರ 
ರಾಜ್ಯ

ಜಲಕ್ಷಾಮ: ವನ್ಯ ಪ್ರಾಣಿಗಳಿಗೂ ತಟ್ಟಿದೆ ಬರ, ಬಿಸಿಲಿನ ಬಾಧೆ, ನಿರ್ಜಲೀಕರಣದಿಂದ 2 ಆನೆ ಸಾವು!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲ್ಲೇ ಇದೆ. ಬಿಸಿಲಿನಿಂದ ಕೇವಲ ಮನುಷ್ಯರಷ್ಟೇ ಅಲ್ಲದೆ ವನ್ಯ ಮೃಗಗಳೂ ಕೂಡ ಕಂಗಾಲಾಗಿವೆಯ ಬಿಸಿಲ ದಗೆಗೆ ನೀರು ಸಿಗದೆ ಎರಡು ಆನೆಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲ್ಲೇ ಇದೆ. ಬಿಸಿಲಿನಿಂದ ಕೇವಲ ಮನುಷ್ಯರಷ್ಟೇ ಅಲ್ಲದೆ ವನ್ಯ ಮೃಗಗಳೂ ಕೂಡ ಕಂಗಾಲಾಗಿವೆಯ ಬಿಸಿಲ ದಗೆಗೆ ನೀರು ಸಿಗದೆ ಎರಡು ಆನೆಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೋಡಿಹಳ್ಳಿ ವಲಯದ ಯಲವನಾಥ ಅರಣ್ಯಪ್ರದೇಶ ಹಾಗೂ ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗದ ಬೆಟ್ಟಹಳ್ಳಿ ಬೀಟ್‌ನಲ್ಲಿ ತಲಾ ಒಂದೊಂದು ಕಾಡಾನೆ ಮೃತಪಟ್ಟಿವೆ.

ಯಲವನಾಥ ಅರಣ್ಯದಲ್ಲಿ ಮೃತಪಟ್ಟ ಆನೆ ಸುಮಾರು 25 ವರ್ಷ ಹಾಗೂ ಬೆಟ್ಟಹಳ್ಳಿ ಬೀಟ್ ಕಾಡಿನಲ್ಲಿ ಮೃತಪಟ್ಟ ಆನೆ 14 ವರ್ಷ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ರಾಮನಗರದ ಕನಕಪುರ ವಲಯದ ಬೆಟ್ಟಹಳ್ಳಿ ಬೀಟ್‌ನಲ್ಲಿ ಮೃತಪಟ್ಟಿರುವ 15 ವರ್ಷದ ಗಂಡಾನೆ ಕಳೆದ ಮೂರು ದಿನಗಳ ಹಿಂದೆ ಜಮೀನೊಂದಕ್ಕೆ ಬಂದು ಬಿಸಿಲ ಬೇಗೆ ತಾಳಲಾರದೆ ಕುಸಿದು ಬಿದ್ದಿತ್ತು. ನಿತ್ರಾಣಗೊಂಡಿದ್ದ ಕಾಡಾನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿ, ನಂತರ ಕಾಡಿಗೆ ಅಟ್ಟಿದ್ದರು. ಆದರೆ, ಭಾನುವಾರ ಅದು ಮೃತಪಟ್ಟಿರುವುದು ತಿಳಿದು ಬಂದಿದೆ.

ಘಟನೆಗೆ ಆನೆ ಅತಿಯಾದ ಮಾವಿನ ಕಾಯಿ ತಿಂದು,ಕುಡಿಯಲು ನೀರು ಇಲ್ಲದೆ ಇರುವುದು ಕಾರಣ ಎನ್ನುವುದು ವೈಧ್ಯಕೀಯ ಪರೀಕ್ಷೆಯಲ್ಲಿ ಮೃತಪಟ್ಟಿದೆ. ಮತ್ತೊಂದೆಡೆ ನೀರಿನ ಕೊರತೆಯಿಂದಲೇ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಯಲವನಾಥ ಅರಣ್ಯದಲ್ಲಿ ಎಲಿಫಾಂಟ್ ಹರ್ಪಿಸ್ ವೈರಸ್’ ನಿಂದಾಗಿ ಸಾವನ್ನಪ್ಪಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಈ ವೈರಸ್ ತಾಕಿದ ಪ್ರಾಣಿಗಳಲ್ಲಿ ಬಾಯಾರಿಕೆ ಹೆಚ್ಚಾಗಿರಲಿದ್ದು, ನಡೆಯಲು ಸಾಧ್ಯವಾಗದೆ, ನೀರು ಸಿಗದೆ ಸಾವನ್ನಪ್ಪುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಗಳಲ್ಲಿನ ಜಲಮೂಲಗಳು ಶೇ.50ರಷ್ಟು ಬತ್ತಿಹೋಗಿದ್ದು, ಶೇ.50ರಷ್ಟು ನೀರು ಮಾತ್ರ ಬಾಕಿ ಇದೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿ (DCF) ಪ್ರಭಾಕರ್ ಪ್ರಿಯದರ್ಶಿ ಅವರು ಹೇಳಿದ್ದಾರೆ.

ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಹೆಣ್ಣಾನೆ ಸಾವು

ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಸೋಮವಾರ ಸುಮಾರು 25 ವರ್ಷ ಹೆಣ್ಣಾನೆಯೊಂದು ಮೃತಪಟ್ಟಿದೆ.ಪಶುವೈದ್ಯರ ತಂಡಗಳು ಕಾವೇರಿ ನದಿಯಲ್ಲಿ ತೇಲುತ್ತಿರುವ ಆನೆಯ ಮೃತದೇಹವನ್ನು ಪತ್ತೆ ಮಾಡಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಆನೆ ನದಿ ದಾಟಲು ಯತ್ನ ನಡೆಸಿದ್ದು, ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಹಾಗೂ ಕಲ್ಲುಗಳು ಜಾರುತ್ತಿದ್ದರಿಂದ ಜಾರಿ ಬಿದ್ದು ಬಂಡೆಗಳಿಂದ ಏಟು ಬಿದ್ದು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಮಾತನಾಡಿ, ಪ್ರಾಣಿಗಳಿಗೆ ಈ ವರ್ಷ ಒತ್ತಡದ ವರ್ಷವಾಗಿದೆ. ಕಾಡುಗಳಲ್ಲಿನ ಕೆಲವು ನೈಸರ್ಗಿಕ ಜಲಮೂಲಗಳು ಕಲುಷಿತವಾಗಿವೆ, ಈ ನೀರನ್ನು ಪ್ರಾಣಿಗಳು ಸೇವನೆ ಮಾಡುತ್ತಿವೆ. ಇಂದು ಕಳವಳದ ವಿಚಾರವಾಗಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಆನೆಗಳು ನೀರು ಅರಸಿ 25 ಕಿ.ಮೀ ವರೆಗೂ ನಡೆಯುತ್ತವೆ. ಆದರೆ, ಜಿಂಕೆಯಂತಹ ಸಣ್ಣ ಪ್ರಾಣಿಗಳಿಗೆ ಇದು ಕಷ್ಟಸಾಧ್ಯ ಇದೀಗ ಪ್ರತಿಯೊಂದು ವಿಭಾಗದ ಬರದ ಕುರಿತು ವರದಿ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಕ್ರಮಕ್ಕಾಗಿ ಸಚಿವಾಲಯಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಮೂರು ಆನೆಗಳ ಸಾವುಗಳು ಬೇರೆ ಬೇರೆ ಕಾರಣಗಳಿಂದ ಸಂಭವಿಸಿವೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಸುಭಾಷ್ ಮಲ್ಖಾಡೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು': ನೊಬೆಲ್ ಸಮಿತಿ ವಿರುದ್ಧ ಶ್ವೇತಭವನ ಕೆಂಡಾಮಂಡಲ!

Maria Corina Machado: ನೋಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾ ಮಚಾದೊ ಕುರಿತು ಆಸಕ್ತಿಕರ ಮಾಹಿತಿ ಇಲ್ಲಿದೆ!

ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಮರುಜೀವ?: ಗಿರೀಶ್ ಮಟ್ಟಣ್ಣವರ್ ಗೆ ಸಂಕಷ್ಟ!

'ಇದೇ ಕೊನೆ, ಇನ್ನೆಂದೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ.. ಕರ್ನಾಟಕ 3 ಭಾಗ, ಭಾರತ 2 ಭಾಗ'.. 'ಮೋದಿ ದೇಶದ ರಕ್ಷಾ ಕವಚ': "ಬ್ರಹ್ಮಾಂಡ" ಭವಿಷ್ಯ

'ಗಂಡಾಂತರ..ಈ ವರ್ಷವೇ ಕೊನೆ, ಹಾಸನಾಂಬೆ ಸಾನಿಧ್ಯವೇ ಇರಲ್ಲ..': ಬ್ರಹ್ಮಾಂಡ ಗುರೂಜಿ 'ಭಯಾನಕ ಭವಿಷ್ಯ'

SCROLL FOR NEXT