ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಂಗಳೂರು: 39 ವರ್ಷದ ಮಿದುಳು ಪಾರ್ಶ್ವವಾಯು ಪೀಡಿತ ರೋಗಿಗೆ 3 ನಿಮಿಷಗಳಲ್ಲಿ ವೈದ್ಯರಿಂದ ಚಿಕಿತ್ಸೆ

Ramyashree GN

ಬೆಂಗಳೂರು: ಅತಿಯಾದ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದ 39 ವರ್ಷದ ರೋಗಿಯು ಜೀವಕ್ಕೆ ಅಪಾಯವನ್ನುಂಟುಮಾಡುವ ಮಿದುಳಿನ ಆಘಾತಕ್ಕೆ ಒಳಗಾದ ಮೂರು ನಿಮಿಷಗಳಲ್ಲಿಯೇ ಪಾರ್ಶ್ವವಾಯುವಿಗೆ ಚಿಕಿತ್ಸೆ ನೀಡಿರುವ ಅಪರೂಪದ ಘಟನೆ ವರದಿಯಾಗಿದೆ.

ಸುಮಾರು 114 ಕೆಜಿ ತೂಕವಿದ್ದ ರೋಗಿಯು ತೀವ್ರ ತಲೆನೋವು, ತಲೆತಿರುಗುವಿಕೆ ಮತ್ತು ವಾಂತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಅದಾದ 30 ನಿಮಿಷಗಳಲ್ಲಿಯೇ ಪಾರ್ಶ್ವವಾಯು ಲಕ್ಷಣಗಳು ಅವರಲ್ಲಿ ಕಂಡುಬಂದವು. ತುರ್ತು ವೈದ್ಯಕೀಯ ತಂಡವು ಕೂಡಲೇ ಕಾರ್ಯಪ್ರವೃತ್ತವಾಯಿತು.

ವೈದ್ಯರು ನಾಲ್ಕು-ವೆಸೆಲ್ ಆಂಜಿಯೋಗ್ರಾಮ್ ಮತ್ತು ಮೆಕ್ಯಾನಿಕಲ್ ಥ್ರಂಬೆಕ್ಟಮಿಯನ್ನು ಶಿಫಾರಸು ಮಾಡಿದರು. ಹೆಪ್ಪುಗಟ್ಟಿದ್ದನ್ನು ಹೊರತೆಗೆದ ನಂತರ ರಕ್ತದ ಹರಿವನ್ನು ಪುನಃಸ್ಥಾಪಿಸಿತು, ಅಂಗಗಳ ಶಕ್ತಿಯನ್ನು ಶೇ 75-100 ರಷ್ಟು ಹೆಚ್ಚಿಸಿತು, ಮಾತು ಮತ್ತು ಚಲನಶೀಲತೆಯನ್ನು ಸುಧಾರಿಸಿತು. ಇದಾದ ನಂತರ, ಆರು ಗಂಟೆಗಳ ಒಳಗೆ ಮೆಕ್ಯಾನಿಕಲ್ ಥ್ರಂಬೆಕ್ಟಮಿ ನಡೆಸಲಾಯಿತು. ಇದರ ಪರಿಣಾಮವಾಗಿ ನರಕೋಶದ ಹಾನಿ ಸುಧಾರಣೆಯಾಯಿತು. ರೋಗಿಯು ಈಗ ಸ್ವತಂತ್ರವಾಗಿ ನಡೆಯಬಹುದು ಮತ್ತು ಇದೀಗ ಪಿಜಿಯೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ಗಿರಿನಗರದ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ಇಂಟರ್‌ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ಭಾಸ್ಕರ್ ಮಾತನಾಡಿ, 'ಶಸ್ತ್ರಚಿಕಿತ್ಸೆಯ ನಂತರ ಕೇವಲ ಮೂರು ನಿಮಿಷಗಳಲ್ಲಿ 0/5 ರಿಂದ 5/5 ರ ನ್ಯೂರೋಲಾಜಿಕಲ್ ಸ್ಕೋರ್‌ನಿಂದ ಪಾರ್ಶ್ವವಾಯು ರೋಗಿಯ ತ್ವರಿತ ಚೇತರಿಕೆಯು ನಿಜಕ್ಕೂ ಗಮನಾರ್ಹವಾಗಿದೆ. ನನ್ನ 25 ವರ್ಷಗಳ ಅನುಭವದಲ್ಲಿ ಇದುವೇ ತ್ವರಿತ ಚೇತರಿಕೆ ಕಂಡ ಮೊದಲ ಪ್ರಕರಣವಾಗಿದೆ. ಆಂಜಿಯೋಗ್ರಫಿ ಸಮಯದಲ್ಲಿ 3 ಮಿಮೀ ಹೆಪ್ಪುಗಟ್ಟುವಿಕೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದು ಅದೃಷ್ಟದ ಫಲಿತಾಂಶವಾಗಿದೆ. ಅತ್ಯಂತ ಕಿರಿಯ ವಯಸ್ಸಿನವರೇ ಇದೀಗ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ತಲೆನೋವು, ಮೂಗು ಸೋರುವಿಕೆ ಮತ್ತು ವಾಂತಿಯಂತಹ ಲಕ್ಷಣಗಳಿಂದ ರೋಗನಿರ್ಣಯ ಮಾಡುವುದು ಗಮನಾರ್ಹ ಸವಾಲನ್ನು ಒಡ್ಡುತ್ತದೆ ಎಂದರು.

SCROLL FOR NEXT