ಪ್ರಾತಿನಿಧಿಕ ಚಿತ್ರ 
ರಾಜ್ಯ

ಉಡುಪಿ: ಆನ್‌ಲೈನ್ ವಂಚನೆಯಲ್ಲಿ 3.35 ಲಕ್ಷ ರೂ. ಕಳೆದುಕೊಂಡ ಇಬ್ಬರು ಮಹಿಳೆಯರು

ಆನ್‌ಲೈನ್ ವಂಚನೆ ಪ್ರಕರಣದಲ್ಲಿ 35 ವರ್ಷದ ಮಹಿಳೆಯೊಬ್ಬರು 2.21 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ತ್ರಾಸಿ ಗ್ರಾಮದ 28 ವರ್ಷದ ಮಹಿಳೆಯೊಬ್ಬರು ಆನ್‌ಲೈನ್ ವಂಚಕರಿಂದ 1.14 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಇಬ್ಬರಿಗೂ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸುವ ಮೂಲಕ ವಂಚಿಸಲಾಗಿದೆ.

ಉಡುಪಿ: ಆನ್‌ಲೈನ್ ವಂಚನೆ ಪ್ರಕರಣದಲ್ಲಿ 35 ವರ್ಷದ ಮಹಿಳೆಯೊಬ್ಬರು 2.21 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಹಿಳೆಗೆ ಏಪ್ರಿಲ್ 9ರಂದು ವಾಟ್ಸಾಪ್‌ನಲ್ಲಿ ಗೂಗಲ್ ರಿವ್ಯೂ ನೀಡಿದರೆ 50 ರೂಪಾಯಿ ನೀಡುವುದಾಗಿ ಸಂದೇಶ ಬಂದಿತ್ತು.

ಈ ಸಂದೇಶವನ್ನು ನಂಬಿದ ಅವರು ರಿವ್ಯೂ ನೀಡಿದ ಬಳಿಕ 150 ರೂ. ಗಳನ್ನು ಪಡೆದಿದ್ದಾರೆ. ನಂತರ ಅವರಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿದೆ. ಅವರ ವಿಶ್ವಾಸ ಗಳಿಸಿದ ಆರೋಪಿ ಅವರಿಂದ 2.21 ಲಕ್ಷ ರೂ. ದೋಚಿದ್ದಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆಯಲ್ಲಿ ತ್ರಾಸಿ ಗ್ರಾಮದ 28 ವರ್ಷದ ಮಹಿಳೆಯೊಬ್ಬರು ಆನ್‌ಲೈನ್ ವಂಚಕರಿಂದ 1.14 ಲಕ್ಷ ರೂ. ಕಳೆದುಕೊಂಡಿದ್ದಾರೆ. ಎಪ್ರಿಲ್ 7 ರಂದು ಅವರ ವಾಟ್ಸಾಪ್ ನಂಬರಿಗೆ ಸಂದೇಶ ಬಂದಿದ್ದು, ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಮನೆಯಿಂದ ಕೆಲಸ ಮಾಡಲು ಆಯ್ಕೆ ಮಾಡಿದರೆ ಹಣ ಪಾವತಿಸಲಾಗುವುದು ಎನ್ನಲಾಗಿದೆ.

ಬಳಿಕ ಏಪ್ರಿಲ್ 8 ಮತ್ತು ಏಪ್ರಿಲ್ 9 ರಂದು ಅಪರಿಚಿತ ವ್ಯಕ್ತಿಗಳಿಗೆ ಹಂತ ಹಂತವಾಗಿ ಹಣವನ್ನು ಕಳುಹಿಸಿದ್ದಾರೆ. ಆದರೆ, ಮರಳಿ ಅದನ್ನು ಪಡೆಯಲು ಸಾಧ್ಯವಾಗಿಲ್ಲ ಮತ್ತು ಈ ಮೂಲಕ ಅವರು 1.14 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಈ ಸಂಬಂಧ ಗಂಗೊಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 417, 420 ಮತ್ತು ಐಟಿ ಕಾಯ್ದೆಯ 66 ಸಿ ಮತ್ತು 66 ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಶುಭ್ ಮನ್ ಗಿಲ್ ದಾಖಲೆಯನ್ನೇ ಹಿಂದಿಕ್ಕಿದ Rishabh Pant, ಡಬ್ಲ್ಯೂಟಿಸಿಯಲ್ಲಿ ಅತ್ಯಧಿಕ ರನ್, ಅಗ್ರಸ್ಥಾನ