ಮತದಾನ (ಸಾಂದರ್ಭಿಕ ಚಿತ್ರ)
ಮತದಾನ (ಸಾಂದರ್ಭಿಕ ಚಿತ್ರ) 
ರಾಜ್ಯ

ದಕ್ಷಿಣ ಕನ್ನಡ ಜಿಲ್ಲೆಯ ಬಂಜಾರುಮಲೆಯಲ್ಲಿ ಶೇ.100 ರಷ್ಟು ಮತದಾನ!

Srinivas Rao BV

ದಕ್ಷಿಣ ಕನ್ನಡ: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು 5 ಗಂಟೆ ವರೆಗೆ ಶೇ.63.90 ರಷ್ಟು ಮತದಾನವಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಜಾರುಮಲೆ ಎಂಬಲ್ಲಿ ಶೇ.100 ರಷ್ಟು ಮತದಾನವಾಗಿದೆ.

ಬಂಜಾರುಮಲೆಯಲ್ಲಿ 111 ಮಂದಿ ಮತದಾರರಿದ್ದು, 6 ಗಂಟೆಗೆ ಮತದಾನ ಮುಕ್ತಾಯಗೊಳ್ಳುವುದಕ್ಕೂ 2 ಗಂಟೆಗಳ ಮೊದಲೇ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು.

ಬಂಜಾರುಮಲೆಯಲ್ಲಿ ಅರಣ್ಯವಾಸಿಗಳು, ಬುಡಕಟ್ಟು ರೈತರು ಮತ್ತು ಸಣ್ಣ ಅರಣ್ಯ ತ್ಯಾಜ್ಯವನ್ನು ಸಂಗ್ರಹಿಸುವವರು ವಾಸಿಸುತ್ತಾರೆ. ಯಾವುದೇ ವಿದ್ಯುತ್ ಅಥವಾ ಸಾರಿಗೆ ಸಂಪರ್ಕವಿಲ್ಲದಿದ್ದರೂ, ಜನರು ಪಶ್ಚಿಮ ಘಟ್ಟಗಳ ಬೆಟ್ಟಗಳಲ್ಲಿರುವ ದೀರ್ಘಕಾಲಿಕ ನೀರಿನ ಮೂಲಗಳ ನೀರನ್ನು ಬಳಸಿಕೊಂಡು ಕಾಡಿನಲ್ಲಿ ಬದುಕುತ್ತಾರೆ.

ಜನರು ತಮ್ಮ ತಾಲೂಕು ಕೇಂದ್ರವಾದ ಬೆಳ್ತಂಗಡಿ ತಲುಪಲು ಮೂಡಿಗೆರೆ ಮಾರ್ಗವಾಗಿ ಬಸ್‌ನಲ್ಲಿ ಪ್ರಯಾಣಿಸಬೇಕು ಅಥವಾ ಎಂಟು ಕಿಲೋಮೀಟರ್ ದಟ್ಟವಾದ ಕಾಡುಗಳ ಮೂಲಕ ನಡೆದುಕೊಂಡು ಹೋಗಬೇಕು, ಆದರೆ ಈ ಪ್ರದೇಶದ ಎಲ್ಲಾ ಮತದಾರರೂ ಮತದಾನ ಮಾಡಿದ್ದಾರೆ.

ಜಿಲ್ಲಾ ಅಧಿಕಾರಿಗಳು ಈ ಪ್ರದೇಶದ ಜನತೆಯ ಸ್ಪೂರ್ತಿಯನ್ನು ಶ್ಲಾಘಿಸಿದ್ದಾರೆ. ಗ್ರಾಮದ ನಿವಾಸಿ ಅಣ್ಣಿ ಮಲೆಕುಡಿಯ ಪಿಟಿಐ ನೊಂದಿಗೆ ಮಾತನಾಡಿದ್ದು, ಸೌಕರ್ಯಗಳ ಕೊರತೆ ಇರುವ ಬಗ್ಗೆ ನಾವು ದೂರುವುದಿಲ್ಲ. ಪಟ್ಟಣಗಳಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಎಲ್ಲಾ ಹಳ್ಳಿಗಳಿಗೂ ನೀಡಲು ಸಾಧ್ಯವಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದೇನೇ ಇದ್ದರೂ, ಪೂರ್ಣ ಸಂಖ್ಯೆಯಲ್ಲಿ ಮತದಾನ ಮಾಡುವುದರಿಂದ ಇದ್ಯಾವ ಕೊರತೆಗಳೂ ನಮ್ಮನ್ನು ತಡೆಯಲಿಲ್ಲ. 500 ಅಥವಾ ಅದಕ್ಕಿಂತ ಹೆಚ್ಚು ಮತದಾರರಿದ್ದರೂ ಅವರೆಲ್ಲರೂ ಮತ ಚಲಾಯಿಸಲು ಬರುತ್ತಿದ್ದರು ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.

2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಜಿಲ್ಲೆಯ ಮತದಾನದ ಅಂಕಿ-ಅಂಶಗಳ ಪ್ರಕಾರ ಬಾಂಜಾರುಮಲೆ ಶೇಕಡಾ 99 ರಷ್ಟು ಮತದಾನವನ್ನು ದಾಖಲಿಸಿದ್ದರು.

SCROLL FOR NEXT