ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಡಾಕ್ಟರ್ ಗೆ ಗನ್ ನಿಂದ ಬೆದರಿಸಿ, ನಗದು, ಚಿನ್ನಾಭರಣ ದರೋಡೆ

ಮೂವರು ಅಪರಿಚಿತ ದುಷ್ಕರ್ಮಿಗಳು ನಗರದ ವೈದ್ಯರೊಬ್ಬರ ಹಣೆಗೆ ಗನ್ ಇಟ್ಟು ಬೆದರಿಸಿ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ. ಸಹಕಾರ ನಗರ ಇ ಬ್ಲಾಕ್‌ನಲ್ಲಿರುವ ಉಮಾಶಂಕರ್ ಅವರ ನಿವಾಸದಲ್ಲಿ ಬುಧವಾರ ರಾತ್ರಿ 8.20ಕ್ಕೆ ಈ ಘಟನೆ ನಡೆದಿದೆ.

ಬೆಂಗಳೂರು: ಮೂವರು ಅಪರಿಚಿತ ದುಷ್ಕರ್ಮಿಗಳು ನಗರದ ವೈದ್ಯರೊಬ್ಬರ ಹಣೆಗೆ ಗನ್ ಇಟ್ಟು ಬೆದರಿಸಿ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದಾರೆ. ಸಹಕಾರ ನಗರ ಇ ಬ್ಲಾಕ್‌ನಲ್ಲಿರುವ ಉಮಾಶಂಕರ್ ಅವರ ನಿವಾಸದಲ್ಲಿ ಬುಧವಾರ ರಾತ್ರಿ 8.20ಕ್ಕೆ ಈ ಘಟನೆ ನಡೆದಿದೆ.

ಆರೋಪಿಗಳು ಮನೆಯ ಬೀಗ ಮುರಿದು ಒಳ ನುಗ್ಗಿದ್ದಾರೆ. ಪಕ್ಕದ ಅಂಗಡಿಗೆ ಹೋಗಿದ್ದ ಸಂತ್ರಸ್ತ ಡಾಕ್ಟರ್ ವಾಪಸ್ ಬಂದಾಗ ಮನೆಯ ಬಾಗಿಲು ತೆರೆದಿರುವುದು ಕಂಡಿದೆ. ನಂತರ ಮನೆಯೊಳಗೆ ಹೋಗಿ ನೋಡಿದಾಗ ಅಪರಿಚಿತ ಮುಸುಕುಧಾರಿಯೊಬ್ಬ ಹಾಲ್‌ನಲ್ಲಿ ನಿಂತಿರುವುದು ಕಂಡುಬಂದಿದೆ. ನಂತರ ಹೊರಗಿನಿಂದ ಬಾಗಿಲು ಹಾಕಲು ಪ್ರಯತ್ನಿಸಿದಾಗ, ಮೊದಲ ಮಹಡಿಯಲ್ಲಿದ್ದ ಮುಸುಕುಧಾರಿ ದುಷ್ಕರ್ಮಿಗಳು ಬಾಗಿಲು ತೆರೆಯುವಂತೆ ವೈದ್ಯರಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ.

ಇದಾದ ಬಳಿಕ ವೈದ್ಯರನ್ನು ಕೋಣೆಯೊಳಗೆ ಬೀಗ ಹಾಕಿ ಕೂಡಿಹಾಕಿ ದುಷ್ಕರ್ಮಿಗಳು ಮನೆ ದರೋಡೆ ಮಾಡಿದ್ದಾರೆ. ಆರೋಪಿಗಳು ತೆರಳಿದ ಬಳಿಕ ಕೊಠಡಿಯಿಂದ ಡಾಕ್ಟರ್ ಹೊರಬಂದಾಗ 20 ಲಕ್ಷ ನಗದು, ಸುಮಾರು 500 ಗ್ರಾಂ ಚಿನ್ನಾಭರಣ ಹಾಗೂ 6 ಬ್ರಾಂಡೆಡ್ ಕೈಗಡಿಯಾರಗಳೊಂದಿಗೆ ಆರೋಪಿಗಳು ಪರಾರಿಯಾಗಿರುವುದು ತಿಳಿದು ಬಂದಿದೆ. ಕೂಡಲೇ ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳು ಉತ್ತರ ಭಾರತದವರು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ನಮ್ಮ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ: ದಸರಾದಲ್ಲಿ ಕಂಬಳ ಆಯೋಜನೆಗೆ ಯದುವೀರ್- ಪ್ರತಾಪ್ ಸಿಂಹ ವಿರೋಧ!

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್