ಸಂಗ್ರಹ ಚಿತ್ರ 
ರಾಜ್ಯ

ಗಾಡ್ಗೀಳ್ ವರದಿ ನಿರ್ಲಕ್ಷಿಸಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದ್ದು, ಒಂದು ಕೋಮಿನ ತುಷ್ಟೀಕರಣವೇ ವಯನಾಡ್ ದುರಂತಕ್ಕೆ ಕಾರಣ: ಯತ್ನಾಳ್

ಅಂದಿನ ಯು.ಪಿ.ಎ ಸರ್ಕಾರ ಪ್ರೊ.ಗಾಡ್ಗೀಳ್ ಅವರ ವರದಿಯನ್ನು ಕಸದ ಬುಟ್ಟಿಗೆ ಹಾಕಿತು. ಪ್ರೊ.ಗಾಡ್ಗೀಳ್ ಹಾಗೂ ಅವರ ತಂಡ ನೀಡಿದ್ದ ವರದಿಯನ್ನು ಕರಾರುವಕ್ಕಾಗಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಅನುಷ್ಠಾನಗೊಳಿಸಿದ್ದರೆ ಅಪಾರವಾದ ಸಾವು-ನೋವುಗಳನ್ನು ತಡೆಯಬಹುದಾಗಿತ್ತು.

ಬೆಂಗಳೂರು: ಗಾಡ್ಗೀಳ್ ವರದಿ ನಿರ್ಲಕ್ಷಿಸಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿದ್ದು ಮತ್ತು ಕೇರಳ ಸರ್ಕಾರದಿಂದ ಒಂದು ಕೋಮಿನ ತುಷ್ಟೀಕರಣವೇ ಇಂದು ವಯನಾಡಿನಲ್ಲಾಗಿರುವ ದುರಂತಕ್ಕೆ ಕಾರಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.

ವಯನಾಡು ಭೂಕುಸಿತ ದುರ್ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇರಳ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಕೇರಳದಲ್ಲಿರುವ ವಿಜ್ಞಾನ ಹಾಗೂ ತಾಂತ್ರಿಕ ಸಂಸ್ಥೆಗಳು ವಯನಾಡಿನ ಮೆಪ್ಪಾಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ಕ್ಷೇತ್ರ ಪರಿಶೀಲನೆ ಮಾಡಬಾರದು, ಮತ್ತು ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ಹಂಚಿಕೊಳ್ಳುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಒಂದು ವೇಳೆ ಮಾಡಲಿಚ್ಛಿಸುವವರು ರಾಜ್ಯ ಪರಿಹಾರ ಆಯುಕ್ತರಿಂದ ಲಿಖಿತ ಅನುಮೋದನೆ ಪಡೆದು ಮುಂದುವರೆಯಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಈ ಆದೇಶ ಇವರು ಕಾಳಜಿಯ ಮೇಲೆ ಹೊರಡಿಸಿರುವುದು ಎಂದರೆ ನೀವು ತಪ್ಪು ತಿಳಿದಿದ್ದೀರಿ. ವಿಜ್ಞಾನಿಗಳು, ಸಂಶೋಧಕರು ವರದಿ ನೀಡಿದರೆ ಕೇರಳ ಸರ್ಕಾರ ಹಾಗೂ ಕಾಂಗ್ರೆಸ್ ನ ತಪ್ಪುಗಳು ಗೊತ್ತಾಗಲಿವೆ. ಈ ಹಿಂದೆ ಕೇರಳದಲ್ಲಿ ಆಗುವ ಗುಡ್ಡ ಕುಸಿತ, ಭೂ ಕುಸಿತದ ಬಗ್ಗೆ ಖ್ಯಾತ ಪರಿಸರಶಾಸ್ತ್ರಜ್ಞರಾದ ಪ್ರೊ.ಮಾಧವ್ ಗಾಡ್ಗೀಳ್ ಅವರು ತಮ್ಮ ನೇತೃತ್ವದ ಪಶ್ಚಿಮ ಘಟ್ಟಗಳ ತಜ್ಞ ಸಮಿತಿ ವರದಿ [The Western Ghats Ecology Experts Panel report] ನಲ್ಲಿ ಉಲ್ಲೇಖಿಸಿದ್ದರು.

ವಯನಾಡಿನ ಮೆಪ್ಪಾಡಿಯಲ್ಲಿ ಆಗುತ್ತಿರುವ ಕಲ್ಲುಗಣಿಗಾರಿಕೆ ಸೇರಿದಂತೆ ಅನೇಕ ಪರಿಸರ ಹಾನಿಕರ ಚಟುವಟಿಕೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಮ್ಮ ಸಮಿತಿಯ ವರದಿಯಲ್ಲಿ ನಿಷ್ಟೂರವಾಗಿ ಬರೆದಿದ್ದರು. ಕಲ್ಲುಗಣಿಗಾರಿಕೆಯ ಹಕ್ಕುಗಳನ್ನು ಕೊಡಬಾರದು ಎಂದು ಹೇಳಿದ್ದರು. ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯ' ಆಗಿರುವುದರಿಂದ ಇಲ್ಲಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಹೇಳಿದ್ದರು.

ಆದರೆ, ಅಂದಿನ ಯು.ಪಿ.ಎ ಸರ್ಕಾರ ಪ್ರೊ.ಗಾಡ್ಗೀಳ್ ಅವರ ವರದಿಯನ್ನು ಕಸದ ಬುಟ್ಟಿಗೆ ಹಾಕಿತು. ಪ್ರೊ.ಗಾಡ್ಗೀಳ್ ಹಾಗೂ ಅವರ ತಂಡ ನೀಡಿದ್ದ ವರದಿಯನ್ನು ಕರಾರುವಕ್ಕಾಗಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಅನುಷ್ಠಾನಗೊಳಿಸಿದ್ದರೆ ಅಪಾರವಾದ ಸಾವು-ನೋವುಗಳನ್ನು ತಡೆಯಬಹುದಾಗಿತ್ತು. ಇಷ್ಟು ಸಾಲದಂತೆ ಕೇರಳದ ಅಂದಿನ ಅರಣ್ಯ ಸಚಿವರು ಭೂ ಕುಸಿತ ವಲಯದಲ್ಲಿರುವ ಸುಮಾರು 4000 ಕುಟುಂಬಗಳನ್ನು ಸ್ಥಳಾಂತರ ಮಾಡಲು ಬರುವುದಿಲ್ಲ ಯಾಕೆಂದೆರೆ ನಮಗೆ ಒಂದು ಕೋಮಿನ ಸಂಘಗಳಿಂದ ಒತ್ತಡ ಇದೆ ಎಂದು ಹೇಳಿದ್ದರು.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಾಲಕ್ಕು ವರ್ಷಗಳ ಹಿಂದೆಯೇ 4000 ಕುಟುಂಬಗಳನ್ನು ಸ್ಥಳಾಂತರ ಮಾಡಲು ಸರ್ಕಾರಕ್ಕೆ ಸಲಹೆ ನೀಡಿತ್ತು. ಪ್ರಾಧಿಕಾರದ ಸಲಹೆಯನ್ನು ಸ್ವೀಕರಿಸುವ ಬದಲಿಗೆ ಸತ್ಯವನ್ನು ನುಡಿದ ಅರಣ್ಯ ಸಚಿವರಿಗೆ ಚುನಾವಣೆಯಲ್ಲಿ ಸರ್ಕಾರ ಟಿಕೆಟ್ ನೀಡಲಿಲ್ಲ. ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡಲು ಬಿಟ್ಟು, ಯಾವುದೋ ಒಂದು ಕೋಮಿನ ಓಲೈಕೆಗೆ, ತುಷ್ಟೀಕರಣ ಮಾಡಿದ ಕೇರಳ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

ಶಿಸ್ತಿನಲ್ಲಿರಿಸಲು 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT