ICAR-CPCRI ಹೊಸ ತಳಿಯ ತೆಂಗಿನ ಮರ. 
ರಾಜ್ಯ

ಹೊಸ ಬೆಳೆ ತಳಿಗಳ ಅಭಿವೃದ್ಧಿಪಡಿಸಿದ ICAR-CPCRI: ಆಗಸ್ಟ್ 11ರಂದು ಪ್ರಧಾನಿ ಮೋದಿಯಿಂದ ದೇಶಕ್ಕೆ ಸಮರ್ಪಣೆ

ಪ್ರಧಾನಿ ಮೋದಿಯವರು ಐಸಿಎಆರ್-ಸಿಪಿಸಿಆರ್‌ಐ ಅಭಿವೃದ್ಧಿಪಡಿಸಿದ ಹೊಸ ಬೆಳೆ ತಳಿಗಳನ್ನು ಭಾನುವಾರ ನವದೆಹಲಿಯ ಎನ್‌ಎಎಸ್‌ಸಿ ಕಾಂಪ್ಲೆಕ್ಸ್‌ನಲ್ಲಿರುವ ಭಾರತ ರತ್ನ ಸಿ ಸುಬ್ರಮಣ್ಯಂ ಆಡಿಟೋರಿಯಂನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಮಂಗಳೂರು: ಕಾಸರಗೋಡಿನ ಐಸಿಎಆರ್-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪಿಸಿಆರ್‌ಐ) ಅಭಿವೃದ್ಧಿಪಡಿಸಿದ 4 ಬಗೆಯ ತೆಂಗು ಮತ್ತು ಕೋಕೋವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 11 ರಂದು ಅನಾವರಣಗೊಳಿಸಲಿದ್ದಾರೆ.

ಕಾಸರಗೋಡಿನ ಐಸಿಎಆರ್-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪಿಸಿಆರ್‌ಐ) ನಿರ್ದೇಶಕ ಡಾ ಕೆ ಬಾಲಚಂದ್ರ ಹೆಬ್ಬಾರ್ ಅವರು ಮಾತನಾಡಿ, ಪ್ರಧಾನಿ ಮೋದಿಯವರು ಐಸಿಎಆರ್-ಸಿಪಿಸಿಆರ್‌ಐ ಅಭಿವೃದ್ಧಿಪಡಿಸಿದ 109 ಬೆಳೆ ತಳಿಗಳನ್ನು ಭಾನುವಾರ ನವದೆಹಲಿಯ ಎನ್‌ಎಎಸ್‌ಸಿ ಕಾಂಪ್ಲೆಕ್ಸ್‌ನಲ್ಲಿರುವ ಭಾರತ ರತ್ನ ಸಿ ಸುಬ್ರಮಣ್ಯಂ ಆಡಿಟೋರಿಯಂನಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.

'ಕಲ್ಪ ಸುವರ್ಣ' ಮತ್ತು 'ಕಲ್ಪ ಶತಾಬ್ದಿ' ಎಂಬ ಎರಡು ಹೊಸ ಪ್ರಭೇದದ ತೆಂಗಿನಕಾಯಿ ಮತ್ತು ಎರಡು ರೀತಿಯ ಕೋಕೋಗಳು - 'VTL CH1' ಮತ್ತು 'VTL CH2' ಅನ್ನು ICAR - ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ಕಾಸರಗೋಡು ಅಭಿವೃದ್ಧಿಪಡಿಸಿದೆ.

ನಮ್ಮ ನಾಲ್ಕು ಹೊಸ ಬೆಳೆ ತಳಿಗಳನ್ನು ಪ್ರಧಾನಮಂತ್ರಿಯವರೇ ಬಿಡುಗಡೆ ಮಾಡುವುದರಿಂದ ಸಿಪಿಸಿಆರ್‌ಐಗೆ ಇದು ಉತ್ತಮ ಅವಕಾಶವಾಗಿದೆ. ಎರಡೂ ತೆಂಗಿನ ತಳಿಗಳು ಹವಾಮಾನ-ಸ್ಥಿತಿಸ್ಥಾಪಕ ಮತ್ತು ಕರಾವಳಿ ತೀರಗಳಲ್ಲಿ ಬೆಳೆಯಬಹುದಾಗಿದೆ. ಹೊಸ ತಳಿಗಳ ಬೆಳೆಗಳಲ್ಲಿ ಕಬ್ಬಿಣಾಂಶ ಮತ್ತು ಸತು ಹೆಚ್ಚಾಗಿರುತ್ತದೆ. ಗುಣಮಟ್ಟ ಕೂಡ ಉತ್ತಮವಾಗಿವೆ. ಇಲ್ಲಿಯವರೆಗೆ 21 ತೆಂಗಿನ ತಳಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

‘ಕಲ್ಪ ಸುವರ್ಣ’ ಎಂಬುದು ಕುಬ್ಜ, ಹೆಚ್ಚು ಇಳುವರಿ ನೀಡುವ ತೆಂಗಿನಕಾಯಿಯಾಗಿದ್ದು, ಹಸಿರು ಬಣ್ಣದ, ಉದ್ದವಾದ ಸಿಹಿಯಾದ ತೆಂಗಿನಕಾಯಿ ನೀರು ಮತ್ತು ಉತ್ತಮ ಗುಣಮಟ್ಟದ ಕೊಬ್ಬರಿ ಇರುತ್ತದೆ. ಇದು ಆರಂಭಿಕ ಹಂತದಲ್ಲಿ ಹೂಬಿಡುತ್ತದೆ. (ನೆಟ್ಟ ನಂತರ 30-36 ತಿಂಗಳುಗಳ ಬಳಿಕ). ಒಂದು ಮರ ವರ್ಷಕ್ಕೆ 108-130 ಕಾಯಿಗಳನ್ನು ನೀರುತ್ತದೆ. ಈ ಬೆಳೆಯನ್ನು ಕೇರಳ ಮತ್ತು ಕರ್ನಾಟಕದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

‘ಕಲ್ಪ ಶತಾಬ್ದಿ’ ಒಂದು ಎತ್ತರದ ಮರವಾಗಿದ್ದು. ಈ ಮರ ತೆಂಗಿನಕಾಯಿ ದೊಡ್ಡ ಗಾತ್ರದಲ್ಲಿರುತ್ತದೆ, ಇದರಲ್ಲಿ ತೆಂಗಿನ ನೀರು ಹೆಚ್ಚಾಗಿರುತ್ತದೆ. ಕೊಬ್ಬರಿ ಕೂಡ ಹೆಚ್ಚಾಗಿರುತ್ತದೆ. ಇವುಗಳು ವರ್ಷಕ್ಕೆ 105-148 ಇಳುವರಿಯನ್ನು ನೀಡುತ್ತದೆ.

VTL CH1 ಹೈಬ್ರಿಡ್ ಆಗಿದ್ದು, ಅಡಿಕೆ ಮತ್ತು ತೆಂಗಿನಕಾಯಿ ಕೀತಿಯಲ್ಲೇ ಬೆಳೆಯುತ್ತದೆ. ಇದು ವರ್ಷಕ್ಕೆ 1.5 - 2.5 ಇಳುವರಿ ನೀಡುತ್ತದೆ. ಇದರ ಬೀಜಗಳು 1-1.10 ಗ್ರಾಂ ತೂಕವನ್ನು ಹೊಂದಿದ್ದು, ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುತ್ತದೆ.

'VTL CH2' ರೋಗ ನಿರೋಧಕತೆಯೊಂದಿಗೆ ಹೆಚ್ಚು ಇಳುವರಿ ನೀಡುವ ಕೋಕೋ ಹೈಬ್ರಿಡ್ ಆಗಿದೆ, ಈ ಮರ ವರ್ಷಕ್ಕೆ 1.5-2.5 ಕೆಜಿ ಇಳುವರಿ ನೀಡುತ್ತದೆ. ಈ ಮರದ ಬೀಜಗಳು 1-1.2 ಗ್ರಾಂ ತೂಕ ಹೊಂದಿದ್ದು, ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ. ಇದರಲ್ಲಿ ಕಬ್ಬಿಣ ಮತ್ತು ಸತು ಅಂಶಳ ಸಮೃದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT