ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮಾಗಡಿಯಲ್ಲಿ ಬ್ಯೂಟಿಷಿಯನ್ ಹತ್ಯೆ; ಐವರ ಬಂಧನ

ಆರಂಭದಲ್ಲಿ, ಆಕೆಯ 34 ವರ್ಷದ ಪತಿ, ಟ್ರಾವೆಲ್ ಏಜೆನ್ಸಿಯ ಮೇಲ್ವಿಚಾರಕ ಉಮೇಶ್ ಪ್ರಕರಣದ ಏಕೈಕ ಆರೋಪಿ ಎಂದು ಶಂಕಿಸಲಾಗಿತ್ತು.ಆದರೆ, ಬುಧವಾರ ಆತನ ಬಂಧನದ ನಂತರ ಇನ್ನೂ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಬೆಂಗಳೂರು: ನಗರದ ಹೊರವಲಯದ ಮಾಗಡಿಯಲ್ಲಿ ಸೋಮವಾರ ಅರಣ್ಯ ಪ್ರದೇಶದಲ್ಲಿ ನಡೆದ 32 ವರ್ಷದ ಬ್ಯೂಟಿಷಿಯನ್ ಲಲಿತಾ ಅಲಿಯಾಸ್ ದಿವ್ಯಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಆರಂಭದಲ್ಲಿ, ಆಕೆಯ 34 ವರ್ಷದ ಪತಿ, ಟ್ರಾವೆಲ್ ಏಜೆನ್ಸಿಯ ಮೇಲ್ವಿಚಾರಕ ಉಮೇಶ್ ಪ್ರಕರಣದ ಏಕೈಕ ಆರೋಪಿ ಎಂದು ಶಂಕಿಸಲಾಗಿತ್ತು.ಆದರೆ, ಬುಧವಾರ ಆತನ ಬಂಧನದ ನಂತರ ಇನ್ನೂ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಬಂಧಿತ ಇತರ ಆರೋಪಿಗಳನ್ನು ಶಶಾಂಕ್, ಕಿರಣ್, ರೋಹಿತ್ ಮತ್ತು ಭರತ್ ಎಂದು ಗುರುತಿಸಲಾಗಿದ್ದು, ಎಲ್ಲರೂ 25 ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ. ಆರೋಪಿಗಳೆಲ್ಲರೂ ಮಾಗಡಿ ತಾಲೂಕಿನ ಕುರುಪಾಳ್ಯ ಮತ್ತು ಇತರ ಭಾಗಗಳ ನಿವಾಸಿಗಳಾಗಿದ್ದು, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಐವರ ತಂಡದಿಂದ ಬ್ಯೂಟಿಷಿಯನ್ ಹತ್ಯೆಯಾಗಿದೆ. ಪರಾರಿಯಾಗಿದ್ದ ಸಂತ್ರಸ್ತೆಯ ಪತಿಯನ್ನು ಕುಣಿಗಲ್ ಬಳಿ ಬುಧವಾರ ಬಂಧಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳು ಆತನ ಆಪ್ತ ಸ್ನೇಹಿತರು. ಮಾದಕ ವ್ಯಸನಿಗಳಾಗಿರುವ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐದು ವರ್ಷದ ಬಾಲಕನ ತಾಯಿ ಲಲಿತಾಳನ್ನು ಕೊಲೆ ಮಾಡಿದ ನಂತರ ಆರೋಪಿಗಳು ಆಕೆಯ ಶವವನ್ನು ಹುಜಗಲ್ ಬೆಟ್ಟದಿಂದ ಕಾಲ್ನಡಿಗೆಯಲ್ಲಿ ಸುಮಾರು 5 ಕಿ.ಮೀ ದೂರದ ಚೇಳೂರಿನ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು.

ಮಾದನಾಯಕನಹಳ್ಳಿ ನಿವಾಸಿ ಲಲಿತಾ ಎಂಬುವರ ಶವ ಮಂಗಳವಾರ ಕಂದಕದಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆಗೆ ಕೆಲವೇ ನಿಮಿಷಗಳ ಮೊದಲು, ಅವರು ತನ್ನ ಸ್ನೇಹಿತೆ ಉಮಾಳೊಂದಿಗೆ ಲೈವ್ ಲೊಕೇಷನ್ ಹಂಚಿಕೊಂಡಿದ್ದರು. ಇದು ದೇಹವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡಿತು.

ಕುರುಪಾಳ್ಯ ಗ್ರಾಮದ ಯುವಕನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಉಮೇಶ್, ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಪದೇ ಪದೇ ಜಗಳ ನಡೆಯುತ್ತಿದ್ದರಿಂದ ಲಲಿತಾ ಮೂರು ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದಳು.

ಉಮೇಶ್ ಮತ್ತೆ ಅದೇ ಯುವಕನನ್ನು ತನ್ನ ಹೆಂಡತಿಯ ಮನೆಯ ಬಳಿ ನೋಡಿದ ನಂತರ, ಪತ್ನಿಯನ್ನು ಕೊಲ್ಲಲು ನಿರ್ಧರಿಸಿ ಸಂಚು ರೂಪಿಸಿದನು ಮತ್ತು ಅದಕ್ಕೆ ತನ್ನ ನಾಲ್ವರು ಸ್ನೇಹಿತರ ಸಹಾಯವನ್ನು ಪಡೆದಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೆದುಳು ತಿನ್ನುವ ಅಮೀಬಾ: ಶಬರಿಮಲೆ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆಯ ಮಾರ್ಗಸೂಚಿ, ಮುನ್ನೆಚ್ಚರಿಕೆ ಕ್ರಮಗಳೇನು?

ಬೆಳಗಾವಿ: ಮಲಗಿದ್ದಲ್ಲೇ ಜೀವಬಿಟ್ಟ ಮೂವರು ಯುವಕರು; ನಿಗೂಢ ಸಾವಿನಿಂದ ಪೋಷಕರ ಆಕ್ರಂದನ!

POCSO case: ಯಡಿಯೂರಪ್ಪಗೆ ಸಂಕಷ್ಟ, ಡಿ. 2 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್!

'ಆಪರೇಷನ್ ಕಾಡಾನೆ' ಸಕ್ಸಸ್: ನಾಲೆಗೆ ಬಿದ್ದು ಒದ್ದಾಡುತ್ತಿದ್ದ ಗಜರಾಜನ ರಕ್ಷಣೆ, ಅರಣ್ಯ ಇಲಾಖೆ ಸಾಹಸಕ್ಕೆ ಶ್ಲಾಘನೆ! Video

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

SCROLL FOR NEXT