ಸಾಂದರ್ಭಿಕ ಚಿತ್ರ 
ರಾಜ್ಯ

'ಪಿಜಿ ಮಾಲೀಕರು ಕ್ಯಾಂಪಸ್‌ನಲ್ಲಿ ಅಥವಾ ಹತ್ತಿರದಲ್ಲೇ ಇರಬೇಕು': ಹೊಸ ಮಾರ್ಗಸೂಚಿ ಕುರಿತು ಪ್ರತಿಕ್ರಿಯೆ ಹೀಗಿದೆ...

ಎಲ್ಲಾ ಪ್ರವೇಶದ್ವಾರಗಳು, ನಿರ್ಗಮನಗಳು ಮತ್ತು ಕಾರಿಡಾರ್‌ಗಳು CCTV ಕ್ಯಾಮೆರಾಗಳನ್ನು ಹೊಂದಿರಬೇಕು ಮತ್ತು ದೃಶ್ಯಾವಳಿಗಳನ್ನು 90 ದಿನಗಳವರೆಗೆ ಸಂಗ್ರಹಿಸಬೇಕು.

ಬೆಂಗಳೂರು: ನಗರದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹಗಳನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿಗಳನ್ನು ಜನರು ಸ್ವಾಗತಿಸಿದ್ದರೂ, ಇದು ಮಾಲೀಕರನ್ನು ಹೆಚ್ಚಿಗೆ ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದು ಭಾವಿಸಿದ್ದಾರೆ.

ಬಿಬಿಎಂಪಿಯು ಇತ್ತೀಚೆಗಷ್ಟೇ ಪಿಜಿಗಳಿಗಾಗಿ 10 ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಪಿಜೆ ತೆರೆಯಲು ಅಥವಾ ಪರವಾನಗಿ ಪರಿಷ್ಕರಣೆಗೆ ಈ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಜುಲೈ 23 ರಂದು ಕೋರಮಂಗಲದ ಪಿಜಿ ವಸತಿಗೃಹದಲ್ಲಿ ಮಹಿಳೆಯೊಬ್ಬರ ಹತ್ಯೆ ನಂತರ ಬಿಬಿಎಂಪಿ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಜಯಸೂಸನ್ (ಹೆಸರು ಬದಲಾಯಿಸಲಾಗಿದೆ) ಸಾಪ್ಟ್ ವೇರ್ ವೃತ್ತಿಯಲ್ಲಿರುವ ಈಕೆ, ಹೆಣ್ಣೂರಿನ ಪಿಜಿಯೊಂದರಲ್ಲಿ ತಂಗಿದ್ದು, ಹೆಚ್ಚಾಗಿ, ಮಾಲೀಕರು ಆವರಣದಲ್ಲಿ ಉಳಿಯುವುದಿಲ್ಲ. ಏನಾದರೂ ಅಹಿತರ ಘಟನೆ ಸಂಭವಿಸಿದರೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಹೇಳುತ್ತಾರೆ.

"ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ತಡವಾಗಿ ಬಂದರೆ ಅಥವಾ ರಜೆಯಲ್ಲಿದ್ದರೆ, ಪಿಜಿ ಕ್ಯಾಂಪಸ್ ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದು ಕಾಡುಗೋಡಿಯ ಪಿಜಿಯೊಂದರಲ್ಲಿರುವ ಖುಷಿ ಸನಲ್ ಹೇಳಿದರು. ಬೆಂಗಳೂರು ಪಿಜಿ ಮಾಲೀಕರ ಸಂಘದ ಕಾರ್ಯದರ್ಶಿ ಸುಖಿ ಸಿಯೋ ಸಹ, ಪಿಜಿ ಮಾಲೀಕರು ಕ್ಯಾಂಪಸ್‌ನಲ್ಲಿ ಅಥವಾ ಸಮೀಪದಲ್ಲಿ ವಾಸಿಸಬೇಕು ಮತ್ತು ಬಾಡಿಗೆದಾರರೊಂದಿಗೆ ಆಗಾಗ್ಗೆ ಸಂವಹನ ನಡೆಸಬೇಕು ಎಂದು ಭಾವಿಸುತ್ತಾರೆ.

ಹೊಸ ನಿಯಮಗಳೇನು? ಎಲ್ಲಾ ಪ್ರವೇಶದ್ವಾರಗಳು, ನಿರ್ಗಮನಗಳು ಮತ್ತು ಕಾರಿಡಾರ್‌ಗಳು CCTV ಕ್ಯಾಮೆರಾಗಳನ್ನು ಹೊಂದಿರಬೇಕು ಮತ್ತು ದೃಶ್ಯಾವಳಿಗಳನ್ನು 90 ದಿನಗಳವರೆಗೆ ಸಂಗ್ರಹಿಸಬೇಕು. *ಪಿಜಿಯಲ್ಲಿರುವವರಿಗೆ ಕನಿಷ್ಠ 70 ಚದರ ಅಡಿ ಜಾಗವನ್ನು ಒದಗಿಸಬೇಕು, ಪ್ರತಿ ವ್ಯಕ್ತಿಗೆ ಕುಡಿಯುವ ನೀರು ಮತ್ತು 135 ಲೀಟರ್ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು, ಪರವಾನಗಿಗೆ ಅರ್ಜಿ ಸಲ್ಲಿಸುವ ಮುನ್ನ ಅಗ್ನಿಸುರಕ್ಷತೆನ್ನು ಖಾತ್ರಿಪಡಿಸಬೇಕು,

ಸಾಮೂಹಿಕ ಅಡಿಗೆಮನೆಗಳನ್ನು ಸ್ಥಾಪಿಸಲು FSSAI ಪರವಾನಗಿಯನ್ನು ಪಡೆದುಕೊಳ್ಳಬೇಕು, ಶೌಚಾಲಯಗಳು ನೈರ್ಮಲ್ಯದಿಂದ ಕೂಡಿರಬೇಕು, ವಾರದ ಎಲ್ಲಾ ದಿನವೂ ಸೆಕ್ಯೂರಿಟಿ ಗಾರ್ಡ್ ಇರಬೇಕು. BBMP ಮತ್ತು ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಿಬೇಕು, ಪ್ರಥಮ ಚಿಕಿತ್ಸಾ ಕಿಟ್ ಹೊಂದಿರಿ. ಘನತ್ಯಾಜ್ಯ ವಿಂಗಡಣೆಯನ್ನು ಖಚಿತಪಡಿಸಿಕೊಳ್ಳಬೇಕು. ಈ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿ ಪ್ರತಿ 6 ತಿಂಗಳಿಗೊಮ್ಮೆ PG ವಸತಿಗಳನ್ನು ಪರಿಶೀಲಿಸುತ್ತದೆ:

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT