ಗದಗ: ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಳೆದ ಭಾನುವಾರ ಕೊಚ್ಚಿಹೋಗಿದ್ದರಿಂದ ಗದಗ ಜಿಲ್ಲೆಯ ಸಿಂಗಟಲೂರಿನ ಜನರು ಭಯಭೀತರಾಗಿದ್ದಾರೆ.
ಭದ್ರಾ ಅಣೆಕಟ್ಟಿನಿಂದ ಹೊರಹರಿವು ಹಾಗೂ ಮಳೆಯಿಂದಾಗಿ ಸಿಂಗಟಾಲೂರು ಅಣೆಕಟ್ಟು ಶೀಘ್ರ ಭರ್ತಿಯಾಗುತ್ತಿರುವುದೇ ಇದಕ್ಕೆ ಕಾರಣ. ಸಿಂಗಲಟೂರು ಅಣೆಕಟ್ಟಿನ ಎಲ್ಲಾ ಕ್ರೆಸ್ಟ್ ಗೇಟ್‌ಗಳನ್ನು ಮುಚ್ಚಲಾಗಿದ್ದರೂ, 13, 16, 17, 19, 25 ಮತ್ತು 26 ನೇ ಗೇಟ್‌ಗಳಿಂದ ನೀರು ಸೋರಿಕೆಯಾಗುತ್ತಿದೆ. ಅಣೆಕಟ್ಟಿನಲ್ಲಿ ನೀರಿನ ಮಟ್ಟ ಹೆಚ್ಚಾದರೆ ಈ ಕ್ರೆಸ್ಟ್ ಗೇಟ್‌ಗಳು ಸಹ ಕೊಚ್ಚಿಹೋಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಕೆಲವು ರೈತರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಿಬ್ಬಂದಿ ಜೊತೆ ಮಾತನಾಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ನೀರಿನ ಸೋರಿಕೆಯನ್ನು ತಡೆಯಲು ತೆಂಗಿನ ಚಿಗುರುಗಳು ಮತ್ತು ಮರಳಿನ ಚೀಲಗಳನ್ನು ಇರಿಸಿದ್ದಾರೆ.
ಕ್ರೆಸ್ಟ್ ಗೇಟ್‌ಗಳ ರಬ್ಬರ್ ಗ್ರಿಪ್ಪರ್‌ಗಳು ಹಾಳಾಗಿದ್ದು, ಅಣೆಕಟ್ಟಿನಿಂದ ನೀರು ಸೋರಿಕೆಯಾಗಲು ಇದು ಕಾರಣವಾಗಿದೆ. ಕ್ರೆಸ್ಟ್ ಗೇಟ್‌ಗಳನ್ನು ಶೀಘ್ರ ದುರಸ್ತಿಗೊಳಿಸಿ ಭವಿಷ್ಯದಲ್ಲಿ ಟಿಬಿ ಅಣೆಕಟ್ಟೆಯಂತಹ ಅವಘಡ ಸಂಭವಿಸದಂತೆ ತಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನೀರಿನ ಸೋರಿಕೆಯನ್ನು ತಡೆಯದಿದ್ದರೆ ಅಣೆಕಟ್ಟೆಯ ಕೆಳಭಾಗದ ಕೆಲವು ಗ್ರಾಮಗಳು ಮತ್ತು ಕೃಷಿ ಹೊಲಗಳು ಶೀಘ್ರದಲ್ಲೇ ಜಲಾವೃತಗೊಳ್ಳಲಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸಿಂಗಟಾಲೂರ ಅಣೆಕಟ್ಟನ್ನು 2012ರಲ್ಲಿ ನಿರ್ಮಿಸಲಾಗಿತ್ತು. ಅಣೆಕಟ್ಟು 26 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿದ್ದು, 3.11 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದಾಗಿದೆ. ಆದರೆ 1.87 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾದರೆ ಮುಂಡರಗಿ ತಾಲೂಕಿನ ಮೂರು ಗ್ರಾಮಗಳು ಜಲಾವೃತಗೊಳ್ಳಲಿವೆ. ಅಣೆಕಟ್ಟಿನ ಒಳಹರಿವು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಕೆಲವು ಕ್ರೆಸ್ಟ್ ಗೇಟ್‌ಗಳ ಮೂಲಕ ಬಿಡುಗಡೆ ಮಾಡಲಾಗುತ್ತಿದೆ.
ಅಣೆಕಟ್ಟೆಯನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಕ್ರೆಸ್ಟ್ ಗೇಟ್‌ಗಳ ಕೇಬಲ್‌ಗಳು ಮತ್ತು ಚಕ್ರಗಳು ಸಹ ತುಕ್ಕು ಹಿಡಿದಿವೆ.
ಆದರೆ, ಗ್ರಾಮಸ್ಥರ ಆರೋಪ ನಿರಾಧಾರ ಎಂದಿರುವ ಅಧಿಕಾರಿಗಳು ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಅಣೆಕಟ್ಟಿನಿಂದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಮತ್ತು ಕೊಪ್ಪಳ ಪಟ್ಟಣಗಳು, ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಗದಗ ಜಿಲ್ಲೆಯ ಗದಗ-ಬೆಟಗೇರಿ ಅವಳಿ ನಗರಗಳು ಮತ್ತು ಮುಂಡರಗಿ ತಾಲೂಕಿನ ಹಲವಾರು ಗ್ರಾಮಗಳಿಗೆ ನೀರು ಒದಗಿಸಲಾಗುತ್ತದೆ.
ಸಿಂಗಟಾಲೂರ ಅಣೆಕಟ್ಟಿನ ಮುಂಡರಗಿ ವಿಭಾಗದ ಅಧಿಕಾರಿಯೊಬ್ಬರು, 26 ಕ್ರೆಸ್ಟ್ ಗೇಟ್‌ಗಳಲ್ಲಿ ಕೆಲವು ಮಾತ್ರ ಸೋರುತ್ತಿವೆ. ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿಗೆ 5 ಕೋಟಿ ರೂಪಾಯಿಗೆ ಟೆಂಡರ್ ಕರೆದಿದ್ದೇವೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.