ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 14 ನಾಗರೀಕ ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸೋಮವಾರ ಸೂಚಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ‘ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್’ಗೆ (ಐಸಿಸಿಸಿ) ಸೋಮವಾರ ಭೇಟಿ, ಪರಿಶೀಲನೆ ನಡೆಸಿದ ಬಳಿಕ ಶಾಲಿನಿ ರಜನೀಶ್ ಅವರು ಮಾತನಾಡಿದರು.
ಪರಿಶೀಲನೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವಪು, ಬಿಬಿಎಂಪಿಯ 'ಸಹಾಯ' ಆ್ಯಪ್ ಅನ್ನು ನಾಗರಿಕರು ಬಳಸಬೇಕಿದ್ದು, ನಾಗರಿಕ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರಗತಿಯಲ್ಲಿ ಪರಿಹರಿಸಬೇಕು ಎಂದು ಹೇಳಿದರು.
ಭಾರೀ ಮಳೆಯಾದಾಗಲೆಲ್ಲಾ ಮನೆಗಳಿಗೆ ನೀರು ನುಗ್ಗುವ ದೂರುಗಳು ಬರುತ್ತಿದ್ದು, ಮರ ಬಿದ್ದು ಸಾವು-ನೋವುಗಳ ವರದಿಗಳು ಬರುತ್ತಿವೆ. ಬೆಂಗಳೂರಿನಲ್ಲಿ 14 ವಿವಿಧ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಏಜೆನ್ಸಿಗಳ ಮುಖ್ಯಸ್ಥರಿಗೆ ಉತ್ತಮ ಸಮನ್ವಯ ಸಾಧಿಸಬೇಕು.
ಪ್ರವಾಹ, ರಸ್ತೆ ಗುಂಡಿಗಳು, ಒಣಗಿದ ಮರಗಳ ತೆರವು ಮತ್ತು ಇತರ ದೂರುಗಳನ್ನು ತ್ವರಿತವಾಗಿ ಪರಿಹರಿಬೇಕೆಂದು ತಿಳಿಸಿದರು.
ಭಾರೀ ಮಳೆಯ ಸಮಯದಲ್ಲಿ ನಗರದ ನಿವಾಸಿಗಳು ತೊಂದರೆಗೊಳಗಾಗದಂತೆ ಖಾತ್ರಿಪಡಿಸುವ ಮತ್ತು ಸಹಾಯವಾಣಿ ಸಂಖ್ಯೆಗಳ ಪರಿಶೀಲಿಸುವ ಕೆಲಸವನ್ನು ಮುಖ್ಯಮಂತ್ರಿಗಳು ನನಗೆ ವಹಿಸಿದ್ದಾರೆಂದು ಇದೇ ವೇಳೆ ಮಾಹಿತಿ ನೀಡಿದರು.