ಕಾರಿನ ಗ್ಲಾಸ್ ಒಡೆದು ಬೆಲೆಬಾಳುವ ವಸ್ತುಗಳ ಕಳ್ಳತನ 
ರಾಜ್ಯ

Video: ಖತರ್ನಾಕ್ ಕಳ್ಳರು; ಸದ್ದೇ ಇಲ್ಲದೇ ಕಾರಿನ ಗ್ಲಾಸ್ ಒಡೆದು ಲ್ಯಾಪ್‌ಟಾಪ್‌, ಬ್ಯಾಗ್‌ಗಳ ಕಳ್ಳತನ

'ಆಗಸ್ಟ್ 22 ರಂದು, ರಾತ್ರಿ 7:30 ರ ಸುಮಾರಿಗೆ ಗ್ಲೋಬಲ್ ದೇಸಿ ಸ್ಟೋರ್ ಮತ್ತು ವೆಸ್ಟ್‌ಸೈಡ್ ಬಳಿ ಜನನಿಬಿಡ ಇಂದಿರಾ ನಗರ ಮುಖ್ಯ 100 ಅಡಿ ರಸ್ತೆಯಲ್ಲಿ 4 ಕಾರುಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಬೆಂಗಳೂರು: ಬೆಂಗಳೂರಿನ ಇಂದಿರಾನಗರದಲ್ಲಿ ಹಾಡಹಗಲೇ ಜನನಿಬಿಡ ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳ ಕಿಟಕಿಗಳನ್ನು ಒಡೆದ ಕಳ್ಳರು ಲ್ಯಾಪ್‌ಟಾಪ್ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಎಕ್ಸ್ ನಲ್ಲಿ ಬಳಕೆದಾರರೊಬ್ಬರು ಈ ಬಗ್ಗೆ ಪೋಸ್ಟ್ ವೊಂದನ್ನು ಅಪ್ಲೋಡ್ ಮಾಡಿದ್ದು, 'ಆಗಸ್ಟ್ 22 ರಂದು, ರಾತ್ರಿ 7:30 ರ ಸುಮಾರಿಗೆ ಗ್ಲೋಬಲ್ ದೇಸಿ ಸ್ಟೋರ್ ಮತ್ತು ವೆಸ್ಟ್‌ಸೈಡ್ ಬಳಿ ಜನನಿಬಿಡ ಇಂದಿರಾ ನಗರ ಮುಖ್ಯ 100 ಅಡಿ ರಸ್ತೆಯಲ್ಲಿ 4 ಕಾರುಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಎಲ್ಲಾ 4 ಕಾರುಗಳ ಗಾಜುಗಳನ್ನು ಒಡೆದ ಕಳ್ಳರು, ಲ್ಯಾಪ್‌ಟಾಪ್‌ಗಳು ಮತ್ತು ಬೆಲೆಬಾಳುವ ವಸ್ತುಗಳನ್ನು 3 ಬ್ಯಾಗ್‌ಗಳನ್ನು ದೋಚಿದ್ದಾರೆ. ಈ ನಾಲ್ಕು ಕಾರುಗಳಲ್ಲಿ ನನ್ನದೂ ಒಂದು ಕಾರಿತ್ತು ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.

ಕಳ್ಳರ ಕೈಚಳಕವನ್ನು ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಸೆರೆ ಮಾಡಿದ್ದು, ಕಾರಿನ ಕಿಟಕಿಗಳನ್ನು ವಿಶೇಷ ಸಾಧನಗಳನ್ನು ಬಳಸಿ ಕಳ್ಳರು ಸದ್ದೇ ಇಲ್ಲದೆ ಒಡೆದಿದ್ದಾರೆ. ಬಳಿಕ ಕಾರಿನೊಳಗಿದ್ದ ವಸ್ತುಗಳನ್ನು ಲಪಟಾಯಿಸಿದ್ದಾರೆ. ಇವಿಷ್ಟೂ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳರು ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆಯುವ ದೃಶ್ಯವೂ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT